ತ್ಯಾಜ್ಯ ವಿಲೇವಾರಿ ಪ್ರತಿಯೊಬ್ಬರ ಕರ್ತವ್ಯ : ಹರೀಶ್.ಎಂ.ಎಸ್.

ಇಂದು ಪ್ರಪಂಚದಲ್ಲಿ ಹೆಚ್ಚುತ್ತಿರುವ ನಗರೀಕರಣದಿಂದ ದೊಡ್ಡ ನಗರಗಳು ಹಾಗೂ ಪಟ್ಟಣಗಳುಉಗಮ ತಾಳುತ್ತಿವೆ.ಇದರಿಂದ ದಿನೇ ದಿನೇ ತ್ಯಾಜ್ಯ / ಕಸದ ಸಮಸ್ಯೆ ಹೆಚ್ಚುತ್ತಿದೆ.ಇದರ ಬಗ್ಗೆ ಅರಿವಿಲ್ಲದ ನಾವು ಅದನ್ನು ಸೀಮಿತ ಸ್ಥಳದಲ್ಲಿ ಶೇಖರಿಸಿ ವಿಲೇವಾರಿ ಮಾಡದೆ ರಸ್ತೆ, ಸಾರ್ವಜನಿಕ ಸ್ಥಳ,ಹೀಗೆ ಎಲ್ಲೆಂದರಲ್ಲಿ ಬಿಸಾಡುತ್ತಿದ್ದೇವೆ.ಎಲ್ಲಿ ನೋಡಿದರೂ ಕಸ ರಾಶಿಯಾಗಿ ಕಾಣುತ್ತಿದ್ದು ಇದರಿಂದ ಅನೇಕ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ.ಇದಕ್ಕೆ ಮೂಲ ಕಾರಣ ನಮ್ಮ ಅಜ್ಞಾನ. ನಾವು ದಿನನಿತ್ಯದ ಜೀವನದಲ್ಲಿ ನೋಡಿರಬಹುದು ಅದೆಷ್ಟೋ ನಾಗರಿಕರು,ಪಟ್ಟಣವಾಸಿಗಳು ತಾವು ಉಪಯೋಗಿಸುವ ವಸ್ತುಗಳನ್ನು ಉಪಯೋಗಿಸಿ ಅದರಿಂದ ಹೊರ ಬರುವ ತ್ಯಾಜ್ಯವನ್ನು ಒಂದೆಡೆ ಶೇಖರಿಸಿ ಅದನ್ನು ನಿರ್ದಿಷ್ಟ ಪ್ರದೇಶಗಳಲ್ಲಿ ಹಾಕುತ್ತಾರೆ.ಆದರೆ ಕೆಲವರು ಅಂದರೆ ಶೇಕಡ 70% ನಾಗರೀಕರು ಇದಕ್ಕೆ ವಿರುದ್ದವಾಗಿಯೇ ನಡೆದುಕೊಳ್ಳುತ್ತಿದ್ದಾರೆ.ಇದರಿಂದ ಇವರು ಎಲ್ಲೆಂದರಲ್ಲಿ ಎಸೆದ ಕಸ ವಾರಗಟ್ಟಲೇ , ತಿಂಗಳುಗಟ್ಟಲೇ,ಅಲ್ಲೇ ಉಳಿಯುತ್ತದೆ.ಆಗ ಇದು ಕೊಳೆತು ಸೊಳ್ಳೆ ,ನೊಣ ,ಜಿರಳೆ ಮುಂತಾದ ಕೀಟಗಳ ಉಗಮಸ್ಥಾನವಾಗುತ್ತದೆ .ಇದರಿಂದ ಕೆಟ್ಟ ವಾಸನೆ ಬಂದು ಇದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ.ಇದನ್ನು ತಡೆಯಲು ಪ್ರತಿಯೊಬ್ಬರು ಮನಸ್ಸು ಮಾಡಬೇಕು.ಇದು ಪ್ರತಿಯೊಬ್ಬರ ಕರ್ತವ್ಯ ಎಂದು ಭಾವಿಸಿ ಎಲ್ಲರೂ ಇದರ ವಿರುದ್ದ ಹರಿಹಾಯಬೇಕು.ಇ...