ಸಾಧನೆಯ ಸೂತ್ರಗಳು: ಹರೀಶ್. ಎಂ.ಎಸ್.

       

          ಸೋಲು,ನೋವು ,ಅವಮಾನ,ನಿರಾಸೆ,ದುಃಖ, ಖಿನ್ನತೆ, ಇವೆಲ್ಲ ನಮ್ಮ ಜೀವನದಲ್ಲಿ ಬಿರುಗಾಳಿಯಂತೆ ಬಂದು ಬೀಸಲು ಶುರು ಮಾಡ್ದೋ ಅಂದ್ರೆ ನಮಗೆ ಜೀವನವೇ ಬೇಡ ಅನ್ನಿಸ್ಬಿಡುತ್ತೆ.  ಆದರೆ ಒಂದು ಮಾತು, ಒಂದು ಮರಕ್ಕೆ ಮಾತಾಡೋಕೆ ಬರೊಲ್ಲ,ನೋಡೋಕೆ ಬರೊಲ್ಲ,ನಡೆಯೋಕೆ ಬರೊಲ್ಲ ,ಅದನ್ನು ನಾವು ಎಷ್ಟು ಬಾರಿ ಕತ್ತರಿಸಿದರು ಅದು ಮತ್ತೆ ಚಿಗುರುತ್ತೆ.ಮತ್ತೆ ಬೆಳೆಯುತ್ತೆ.ಅಂತದರಲ್ಲಿ ನಾವು ಮನುಷ್ಯರು ಮಾತಾಡೋಕೆ,ನೋಡೋಕೆ, ನಡೆಯೋಕೆ ಎಲ್ಲಾ ಬರುತ್ತೆ ಆದರೂ ಜೀವನದಲ್ಲಿ ಸೋತುಬಿಡ್ತೀವಿ.

        ಯಾಕೆ ಈ ಸೋಲು.ನಮ್ಮಿಂದ ಏನೂ ಆಗಲ್ಲ,ನಾವು ಜೀವನದಲ್ಲಿ ಸೋತೋಗ್ಬಿಟ್ವಿ ಅಂತ ನಾವೇ ಅನ್ಕೊಂಡ್ಬಿಡ್ತೀವಿ.ನಿಮಗೊಂದು ವಿಷಯ ಗೊತ್ತಾ ,ಒಂದು ಬೆಕ್ಕು ಕನ್ನಡಿಯ ಮುಂದೆ ನಿಂತ್ಕೊಂಡು ಕನ್ನಡಿಯಲ್ಲಿ ತನ್ನ ಮುಖ ನೋಡ್ಕೊಂಡು ,ತನ್ನಷ್ಟಕ್ಕೆ ತಾನೇ ಹುಲಿ ಅನ್ಕೊಳ್ಳುತ್ತೆ.ಆದರೆ ಇವತ್ತು ಮನುಷ್ಯ ಕನ್ನಡಿಯ  ಮುಂದೆ ನಿಂತ್ಕೊಂಡು ಹಳೆಯದನ್ನೆಲ್ಲ ನೆನಪಿಸಿಕೊಂಡು ಅಳ್ತಾ ಇದ್ದಾನೆ.
    ನೆನ್ನೆದು ನೆನ್ನೆಗೆ,ಈ ದಿನ ನಿಮ್ಮದೆ.ಇವತ್ತು ಜನ ನಮ್ಮನ್ನ ಅವಮಾನ ಮಾಡ್ತಾರೆ.ಕಿಂಡಲ್ ಮಾಡ್ತಾರೆ.ಆದರೆ ಜನಗಳು ಒಂದಲ್ಲ ಒಂದು ದಿನ ನೀವು ಸಾಧನೆ ಮಾಡಿದಾಗ ಇದೇ ಅವಮಾನ ಮಾಡಿದ ಜನ ನಮ್ಮನ್ನು ಸನ್ಮಾನ ಮಾಡ್ತಾರೆ.
    ಸಾಧನೆ ಮಾಡೋದು ಅಷ್ಟು ಸುಲಭವಲ್ಲ. ಸುಮ್ಮನೆ ಕೂತ್ಕೊಂಡ್ರೆ ಸಾಧನೆಯಾಗಲ್ಲ.ಸಾಧನೆ ಮಾಡೋರು ಯಾವತ್ತು ಸುಮ್ಮನೆ ಕೂರಲ್ಲ.ಧೈರ್ಯ, ಶಕ್ತಿ,ಮುಂದಾಳ್ವಿಕೆ,ಸಾಧನೆ ಮಾಡ್ಬೇಕು ಅನ್ನೋ ಹುಮ್ಮಸ್ಸು , ಇದೆಲ್ಲ ನಮ್ಮಲ್ಲೇ ಇದೆ . ಇವತ್ತು ನಮ್ಮಲ್ಲೆಲ್ಲ ಒಂದು ಹಸಿವಿದೆ ಏನಾದರೂ ಮಾಡ್ಬೇಕು,ಏನಾದರೂ ಆಗ್ಬೇಕು,ಅನ್ನೋ ಹಸಿವು. ಏನಾದರೂ ಸಾಧಿಸಿ ತೋರಿಸ್ಬೇಕು ಅನ್ನೋ ಹಸಿವು.ನಮ್ಮ ಕನಸುಗಳನ್ನು ಯಾರಿಂದಲೂ ಕದಿಯೋಕಾಗಲ್ಲ,ನಮ್ಮ ಬೆಳವಣಿಗೆಯನ್ನು ಯಾರಿಂದಲೂ ತಡೆಯೋಕಾಗಲ್ಲ.ಎಂತದ್ದೇ ಪರಿಸ್ಥಿತಿ ಬಂದರು ನಾನು ಸಾಧನೆ ಮಾಡೇ ಮಾಡ್ತೀನಿ ಅಂತ ಗಟ್ಟಿ ನಿರ್ಧಾರ ನಿಮ್ಮ ಮನಸ್ಸಲ್ಲಿ ಮಾಡಿಕೊಳ್ಳಿ.ಈ ಜಗತ್ತಿನ ಯಾವ ಶಕ್ತಿಯೂ ನಮ್ಮನ್ನು ತಡೆಯೋಕೆ ಅಗೋದೆಯಿಲ್ಲ.

                           ಧನ್ಯವಾದಗಳು
                         ಹರೀಶ್. ಎಂ.ಎಸ್.

Comments

Popular posts from this blog