ಜೀವನದ ಫಾರ್ಮುಲಾ ( ಸೂತ್ರ )

         

           ಗೆಳೆಯರೇ ಈ ಆಶಾಧಾಯಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜನರು ಬೆಳೆಯಲು,ತಮ್ಮ ಜೀವನದ ಗುರಿ ತಲುಪಲು, ನಾ ಮುಂದು,ತಾ ಮುಂದು ಎಂದು ಮುನ್ನುಗ್ಗುತ್ತಿದ್ದಾರೆ.ಆದರೆ ಅವರಿಗೆ ಮುನ್ನಡೆಯುವ ದಾರಿ ಗೊತ್ತಿಲ್ಲದಿದ್ದರೂ ಯಾವುದೋ ಒಂದು ರೀತಿಯಲ್ಲಿ ತಮ್ಮ ಬದುಕಿನ ಗುರಿ ತಲುಪಲು ಯತ್ನಿಸುತ್ತಿದ್ದಾರೆ.ಇನ್ನೂ ಕೆಲವರಂತು ಯಾವ ರೀತಿಯಲ್ಲಿ ತಮ್ಮ ಸುಂದರ ಬದುಕನ್ನು ನಿರ್ಮಿಸಿಕೊಳ್ಳಬೇಕೋ ಎಂಬ ಗೊಂದಲದಲ್ಲೇ ಜೀವನ ಕಳೆಯುತ್ತಿದ್ದಾರೆ.

         ಆದರೆ ಜೀವನವೆಂಬುದು ಹಾಗಲ್ಲ..ಮತ್ತೆ ನಾವಂದುಕೊಂಡಷ್ಟು ಸುಲಭವೂ ಅಲ್ಲ.ನಾವು ಹೇಗೆ ಯಾವುದಾದರೊಂದು ಪರೀಕ್ಷೆಯನ್ನು ತೆಗೆದುಕೊಡಾಗ ಹಗಲು ,ರಾತ್ರಿ ಎನ್ನದೆ ಸತತ ಓದುತ್ತಾ ಅದನ್ನು ಸ್ಮರಿಸುತ್ತಾ ವರ್ಷವೆಲ್ಲಾ ಓದಿ ಆ ಪರೀಕ್ಷೆಯನ್ನು ಎದುರಿಸುತ್ತೇವೆಯೋ ಹಾಗೆ .ಹಾಗೆಲ್ಲ ಮಾಡಿದರು ಸಹ ಕೆಲವರು ಅದರಲ್ಲಿ ವಿಫಲರಾಗುತ್ತಾರೆ ಕಾರಣ ಅವರಲ್ಲಿ ಅದನ್ನು ಸರಿಯಾಗಿ ಅಳವಡಿಸಿಕೊಳ್ಳಲು ಇಲ್ಲದ ಸರಿಯಾದ ಫಾರ್ಮುಲಾ..

    ಫಾರ್ಮುಲಾ ಎಂದಾಕ್ಷಣ ನಮಗೆ ನೆನಪಾಗೋದು ಗಣಿತ. ಆದರೆ ನಾ ಹೇಳಿದ್ದು ಆ ಫಾರ್ಮುಲಾ ಅಲ್ಲ ಒಂದು ನಿರ್ದಿಷ್ಟವಾದ ಚೌಕಟ್ಟು ಅಥವಾ ನಾವೆ ಎಣೆದುಕೊಳ್ಳುವ  ಒಂದು ಸೂತ್ರ .

    ಆ ಸೂತ್ರ ಹೇಗಪ್ಪಾ ಎಂದರೆ ,,,
     ನಾವು ಒಂದು ಮನೆಯನ್ನು ಕಟ್ಟುವ ಮುನ್ನ ಅದರ ಪೂರ್ವಬಾವಿ ನಕ್ಷೆಯನ್ನು ತಯಾರಿಸುತ್ತೇವೆ,ನಂತರ ಅದರ ವಾಸ್ತು ಲಕ್ಷಣಗಳನ್ನು ಗುರುತಿಸುತ್ತೇವೆ,ನಂತರ ಅದರ ಆಯವ್ಯಯದ ಖರ್ಚುಗಳನ್ನು ನೋಡುತ್ತೇವೆ,ನಂತರ ಅದಕ್ಕೆ ಅಳವಡಿಸುವ ಕಡಪದ ಕಲ್ಲು,ಬಣ್ಣ,ಅದಕ್ಕೆ ನಾವು ಬಳಸುವ ಬಾಗಿಲು ,ಕಿಟಕಿಗಳನ್ನು ತಯಾರಿಸುವ ಮರ ಯಾವ ಜಾತಿಯದ್ದಾಗಿರಬೇಕು ಈಗೆ ಇತ್ಯಾದಿ ಯೋಜನೆಗಳನ್ನು ರೂಪಿಸಿಕೊಳ್ಳುತ್ತೇವೆ .
        ಹಾಗೆಯೇ ನಾವು ನಮ್ಮ ದೈನಂದಿನ ಬದುಕಿನ ಬಗ್ಗೆಯೂ ಕೂಡ ಒಂದು ಪೂರ್ವ ಭಾವಿ ಲೆಕ್ಕಾಚಾರವನ್ನು ನಿರ್ಮಿಸಿಕೊಳ್ಳಬೇಕು.ಸಾಮಾನ್ಯವಾಗಿ ಜೀವನದ ಅರಿವಾಗುವುದು 16ರ ವಯಸ್ಸಿನಿಂದ .ಇಲ್ಲಿ  ನಾವು ಯಾವ ವಯಸ್ಸಿನಿಂದ ಯಾವ ವಯಸ್ಸಿನ ವರೆಗೆ ಏನು ಮಾಡಬೇಕು ,ನಂತರ ಆ ಮುಂದಿನ ವಯಸ್ಸಿನಿಂದ ಮುಂಬರುವ ವರ್ಷಗಳಲ್ಲಿ ಏನು ಮಾಡಬೇಕು ಎಂಬ ಒಂದು ನಮ್ಮದೇ ಆದ ವೃತ್ತವನ್ನು ರಚಿಸಿಕೊಂಡು ನಮ್ಮಗಳ ಅಭ್ಯುದಯದ ದಾರಿಯನ್ನು ನಾವೇ ನಿರ್ಮಿಸಿಕೊಂಡು ಅದಕ್ಕೆ ನಮ್ಮದೇ ಆದ ಸೂತ್ರವನ್ನು ಹಾಕಿಕೊಂಡು ಮುನ್ನಡೆದರೆ ಯಾವ ಸೋಲು,ಅವಮಾನಗಳು ಸಹ ನಮ್ಮನ್ನು ಸುಳಿಯಲಾರವು.

ಇಂದ
ಹರೀಶ್.ಎಂ.ಎಸ್.
ಸ್ವಾಮಿ ವಿವೇಕಾನಂದ ಯೂತ್‌ ನೆಟ್ವರ್ಕ್.

Comments

Popular posts from this blog