"" ನನ್ನ ಮತ ನನ್ನ ಹಕ್ಕು ""

ನನ್ನ ಮಿತ್ರರೇ ಭಾರತವು ಒಂದು ಪ್ರಜಾ ಸತಾತ್ಮಕ ದೇಶ. ಮತ್ತು ಒಂದು ಜಾತ್ಯಾತೀತ ರಾಷ್ಟ್ರ. ಇಲ್ಲಿ ಎಲ್ಲರೂ ಸಮಾನರು.ಎಲ್ಲಾ ಧರ್ಮಕ್ಕೂ ಸಮಾನ ಹಕ್ಕಿದೆ .ಮತ್ತು ಎಲ್ಲರಿಗೂ ಸಮಾನವಾದ ಮೂಲಭೂತ ಹಕ್ಕಿವೆ.ಆ ಹಕ್ಕುಗಳಲ್ಲಿ ಬಹಳ ಮುಖ್ಯವಾದ ಹಕ್ಕೆ ಮತದಾನದ ಹಕ್ಕು .ಇದರಿಂದ ನಾವು ನಮ್ಮನ್ನು ಕಾಯಲು ಬೇಕಾದಂತಹ ಸೇವಕರನ್ನು ಅಥವಾ ಜನ ಪ್ರತಿನಿಧಿಗನ್ನು ಆರಿಸಿ ಕೊಳ್ಳಲು ಎಲ್ಲರಿಗೂ ಅವಕಾಶರುತ್ತದೆ.ಈ ಮತದಾನದಿಂದ ಯಾವೊಬ್ಬ ಪ್ರಜೆಯು ಹಿಂದುಳಿಯಬಾರದು ಮತ್ತು ಮತ ಚಲಾಯಿಸುವ ಪ್ರಜೆಯು ಸ್ವಂತ ಚಾಣಾಕ್ಷತನದಿಂದ ತಮಗೆ ಬೇಕಾದಂತಹ ಪ್ರತಿನಿಧಿಯನ್ನು ಆರಿಸಲು 18 ವರ್ಷ ತುಂಬಿದ ವಯಸ್ಕರಿಗೆ ಮಾತ್ರ ಅಧಿಕಾರ ಕೊಟ್ಟಿರುತ್ತದೆ . ಕಾರಣ ಆ ವ್ಯಕ್ತಿಗಳಿಗೆ ಎಲ್ಲದರ ಬಗ್ಗೆಯೂ ಅರಿವಿರುತ್ತದೆ ಎಂದು. ಭಾರತವು ಒಂದು ಪ್ರಜಾ ಪ್ರಭತ್ವ ರಾಷ್ಟ್ರ. ಹೆಸರೇ ಹೇಳುವಂತೆ ಇಲ್ಲಿರುವ ಪ್ರತಿಯೊಬ್ಬ ಪ್ರಜೆಯು ಪ್ರಭುವೆ!! . ಆದರೆ ಈ ಮಾತು ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಜಾರಿಯಲ್ಲಿದ್ದು ಆ ಸಮಯದಲ್ಲಿ ನಾವು ಆರಿಸಲ್ಪಡುವ ವ್ಯಕ್ತಿಗಳು ಅಥವಾ ಜನನಾಯಕರು ಸ್ವತಃ ಅವರೇ ಪ್ರಜೆಗಳಾಗಿ ನಮ್ಮನ್ನು ಪ್ರಭುಗಳ ರೀತಿಯಲ್ಲಿ ಕಾಣುತ್...