"" ನನ್ನ ಮತ ನನ್ನ ಹಕ್ಕು ""
ನನ್ನ ಮಿತ್ರರೇ ಭಾರತವು ಒಂದು ಪ್ರಜಾ ಸತಾತ್ಮಕ ದೇಶ. ಮತ್ತು ಒಂದು ಜಾತ್ಯಾತೀತ ರಾಷ್ಟ್ರ. ಇಲ್ಲಿ ಎಲ್ಲರೂ ಸಮಾನರು.ಎಲ್ಲಾ ಧರ್ಮಕ್ಕೂ ಸಮಾನ ಹಕ್ಕಿದೆ .ಮತ್ತು ಎಲ್ಲರಿಗೂ ಸಮಾನವಾದ ಮೂಲಭೂತ ಹಕ್ಕಿವೆ.ಆ ಹಕ್ಕುಗಳಲ್ಲಿ ಬಹಳ ಮುಖ್ಯವಾದ ಹಕ್ಕೆ ಮತದಾನದ ಹಕ್ಕು .ಇದರಿಂದ ನಾವು ನಮ್ಮನ್ನು ಕಾಯಲು ಬೇಕಾದಂತಹ ಸೇವಕರನ್ನು ಅಥವಾ ಜನ ಪ್ರತಿನಿಧಿಗನ್ನು ಆರಿಸಿ ಕೊಳ್ಳಲು ಎಲ್ಲರಿಗೂ ಅವಕಾಶರುತ್ತದೆ.ಈ ಮತದಾನದಿಂದ ಯಾವೊಬ್ಬ ಪ್ರಜೆಯು ಹಿಂದುಳಿಯಬಾರದು ಮತ್ತು ಮತ ಚಲಾಯಿಸುವ ಪ್ರಜೆಯು ಸ್ವಂತ ಚಾಣಾಕ್ಷತನದಿಂದ ತಮಗೆ ಬೇಕಾದಂತಹ ಪ್ರತಿನಿಧಿಯನ್ನು ಆರಿಸಲು 18 ವರ್ಷ ತುಂಬಿದ ವಯಸ್ಕರಿಗೆ ಮಾತ್ರ ಅಧಿಕಾರ ಕೊಟ್ಟಿರುತ್ತದೆ . ಕಾರಣ ಆ ವ್ಯಕ್ತಿಗಳಿಗೆ ಎಲ್ಲದರ ಬಗ್ಗೆಯೂ ಅರಿವಿರುತ್ತದೆ ಎಂದು.
ಭಾರತವು ಒಂದು ಪ್ರಜಾ ಪ್ರಭತ್ವ ರಾಷ್ಟ್ರ. ಹೆಸರೇ ಹೇಳುವಂತೆ ಇಲ್ಲಿರುವ ಪ್ರತಿಯೊಬ್ಬ ಪ್ರಜೆಯು ಪ್ರಭುವೆ!! . ಆದರೆ ಈ ಮಾತು ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಜಾರಿಯಲ್ಲಿದ್ದು ಆ ಸಮಯದಲ್ಲಿ ನಾವು ಆರಿಸಲ್ಪಡುವ ವ್ಯಕ್ತಿಗಳು ಅಥವಾ ಜನನಾಯಕರು ಸ್ವತಃ ಅವರೇ ಪ್ರಜೆಗಳಾಗಿ ನಮ್ಮನ್ನು ಪ್ರಭುಗಳ ರೀತಿಯಲ್ಲಿ ಕಾಣುತ್ತಾರೆ .ಮತ್ತು ಸಂವಿಧಾನದ ಪ್ರಕಾರ 18 ವರ್ಷ ತುಂಬಿದ ಯಾವೊಬ್ಬ ಪ್ರಜೆಕೂಡ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಇದರ ಅರಿವಿದ್ದರೂ ಅದೇಷ್ಟೋ ಬುದ್ಧಿವಂತ ವ್ಯಕ್ತಿಗಳು ಇದರಿಂದ ಹಿಂದೆ ಸರಿಯುತ್ತಾರೆ..
ಪ್ರಜೆಗಳೇ ಪ್ರಭುಗಳು ಎಂದು ಬಿಂಬಿಸಲು ಚುನಾವಣಾ ಸಮಯದಲ್ಲಿ ಮಾತ್ರ ನಮ್ಮಿಂದಾರಿಸಲ್ಪಡುವ ಜನನಾಯಕರು ನಮಗೆ ಬಣ್ಣದಂತಹ ಮಾತುಗಳನ್ನಾಡುತ್ತಾರೆ.ಚುನಾವಣೆ ಮುಗಿದ ನಂತರ ಅವರೇ ಪ್ರಭುಗಳಾಗಿ ಸರ್ವಾಧಿಕಾರಿ ಅಧಿಕಾರ ನಡೆಸಿಕೊಂಡು ನಮ್ಮನ್ನು ಕಾಲಿಗೆ ಕಸವಾಗಿ ಕಾಣುತ್ತಾರೆ.
ಮತ್ತು ಇನ್ನೊಂದು ಮುಖ್ಯ ವಿಚಾರವೇನೆಂದರೆ ನಾವು ಒಂದು ಹೆಣ್ಣು ಮಗುವನ್ನು ಮದುವೆ ಮಾಡುವ ಸಮಯದಲ್ಲಿ ಹೇಗೆ ತಿರುಚಿ-ಮುರುಚಿ ,ಅಳೆದು ತೆಗೆದು ಎಲ್ಲಾ ಮೂಲಗಳಿಂದ ಮಾಹಿತಿ ಕಲೆಹಾಕಿ. ವರನ ಲೆಕ್ಕಾಚಾರ ಮಾಡಿ ಅವನ ವಹಿವಾಟಿನ ಬಗ್ಗೆ ,ಅವರ ಮನೆತನದ ಬಗ್ಗೆ ಎಲ್ಲಾ ವಿಚಾರಿಸಿ ವರನ ಬಗ್ಗೆ ಪೂರ್ತಿ ಅರಿತ ಬಳಿಕವಷ್ಟೆ ಮದುವೆ ನಿಶ್ಚಯ ಮಾಡುತ್ತಾರೆ .ಹಾಗೇಯೇ ನಾವುಗಳೂ ಕೂಡ ನಮಗೆ ಬೇಕಾದ ಜನ ಪ್ರತಿನಿಧಿಯನ್ನು ಆರಿಸುವ ಸಂಧರ್ಭದಲ್ಲಿ ಎಲ್ಲಾ ಮೂಲಗಳಿಂದ ಅಳೆದು ,ಯೋಚಿಸಿ,ವಿಚಾರಿಸಿ ಮತ ಚಲಾಯಿಸಬೇಕು.ಒಂದು ವೇಳೆ ನಾವು ಈ ಮತದಾನದಿಂದ ವಂಚಿತರಾದರೇ ಅದಕ್ಕೂ ಮೂಲ ಕಾರಣ ನಾವೇ ಆಗುತ್ತೇವೆ.
ನಾವು ಚಲಾಯಿಸುವ ಒಂದು ಮತ ಒಂದು ದೇಶದ ಅಭಿವೃದ್ಧಿಗೆ ಪೂರಕವಾಗಿರುತ್ತದೆ.
ನೋಡಿ ಮಿತ್ರರೆ ಇಲ್ಲಿಯವರೆಗೆ ನಾವು ಅಜ್ಞಾನದಿಂದ ಕಳೆದಿರುವ ಸಾರ್ವತ್ರಿಕ ಚುನಾವಣೆಗಳು ಸಾಕು .ಇದೇ ತಿಂಗಳು ಬರಲಿರುವ ಲೋಕಸಭಾ ಚುನಾವಣೆಯಲ್ಲಿ ದಿನಂಕ-18/04/2019 ರಂದು ಚುನಾವಣೆ ಸಮಯದಲ್ಲಿ ಸ್ವಲ್ಪ ಯೋಚಿಸಿ ,ನಮಗೆ ಬೇಕಾದಂತಹ ಜನಪ್ರತಿನಿಧಿಯನ್ನು ಆರಿಸೋಣ.18 ವರ್ಷ ತುಂಬಿದ ಪ್ರತಿಯೊಬ್ಬರೂ ಕಡ್ಡಾಯ ಮತದಾನ ಮಾಡಿ ಭಾರತದ ಸಂವಿಧಾನಕ್ಕೆ ಕೈ ಜೋಡಿಸೋಣ
ಮತ್ತು ನಮ್ಮ ಮತವನ್ನು ಯಾರಿಗೂ ಮಾರಾಟ ಮಾಡದೆ ನಮ್ಮ ಹಕ್ಕನ್ನು ನಾವೇ ಚಲಾಯಿಸಿ ಪ್ರಜಾ ಪ್ರಭುತ್ವವನ್ನು ಇನ್ನಷ್ಟು ಬಲಗೊಳಿಸೋಣ.ಇದರ ಮೂಲಕ ಪ್ರಜಾಪ್ರಭುತ್ವವನ್ನು ಬದಲಿಸಿ ಭಾರತವನ್ನು ಭವ್ಯ ಭಾರತದೆಡೆಗೆ ಕೊಂಡೊಯ್ಯೋಣ.
"" ನನ್ನ ಮತ ನನ್ನ ಹಕ್ಕು"" "" ನಿಮ್ಮ ಮತ ನಿಮ್ಮ ಹಕ್ಕು ""
ಇಂತಿ
ಹರೀಶ್ ವಿವೇಕಾನಂದ ಮಂಚಿಬೀಡು
Comments
Post a Comment