""ಅಂಗವಿಕಲತೆ ಶಾಪವಲ್ಲ""

ಆರೋಗ್ಯವೇ ಸ್ವರ್ಗ, ಅನಾರೋಗವೇ ನರಕ. ಮಿತ್ರರೇ ಅಂಗವಿಕಲತೆ ಎಂಬುದು ಶಾಪವಲ್ಲ.ಕೇವಲ ಆಕಸ್ಮಿಕವಾಗಿ ದೈವದತ್ತವಾಗಿ ಬರುವಂತಹ ಒಂದು ಸ್ವಾಭಾವಿಕ ಗುಣ. ಈ ಪ್ರಪಂಚದಲ್ಲಿ ಸ್ರುಷ್ಟಿಸಲ್ಪಟ್ಟ ಪ್ರತಿಯೊಬ್ಬರಿಗೂ ಆ ದೇವರು ಒಂದಿಲ್ಲೊಂದು ನ್ಯೂನತೆಯನ್ನು ಕೊಟ್ಟು ಸ್ರುಷ್ಟಿಸುತ್ತಾನೆ.ಅದರಲ್ಲೂ ಕೆಲವರಿಗೆ ಆಂತರಿಕ ನ್ಯೂನತೆಗಳನ್ನು ಕೊಟ್ಟರೆ, ಕೆಲವರಿಗೆ ಬಾಹ್ಯ ನ್ಯೂನತೆಗಳನ್ನು ಕೊಡುತ್ತಾನೆ.ಆದರೆ ಕೆಲವರು ತಮ್ಮಲ್ಲಿರುವ ಆಂತರಿಕ ನ್ಯೂನತೆಗಳನ್ನು ಮರೆತು,ಬೇರೆಯವರ ಬಾಹ್ಯ ನ್ಯೂನತೆಗ ಕಡೆ ಗಮನಹರಿಸುತ್ತಾರೆ.ಕೆಲ ಸಂಧರ್ಭಗಳಲ್ಲಿ ಅಂಗವಿಕಲತೆ ಎಂಬುದು ದೈವದತ್ತವಾಗಿ ಬಾರದಿದ್ದರೂ ನಮ್ಮ ನಿರ್ಲಕ್ಷತೆ ಅಥವಾ ಬೇಜವಬ್ದಾರಿಯಿಂದ ಸಂಭವಿಸುತ್ತದೆ. ಕೆಲ ಅವಿವೇಕಿಗಳು ಅಂಗವಿಕಲತೆಯ ಬಗ್ಗೆ ಸಂಪೂರ್ಣವಾಗಿ ಗೊತ್ತಿದ್ದರೂ ,ಅವರ ಪೋಷಕರ ಜೊತೆಯಲ್ಲಿ ಅದರ ಬಗ್ಗೆಯೇ ಚರ್ಚಿಸಿ ಅವರ ಮನಸ್ಅನ್ನು ಘಾಸಿ ಗೊಳಿಸುತ್ತಾರೆ. ಅಂಗವಿಕಲರನ್ನು ಕೇವಲವಾಗಿ ಕಾಣುತ್ತಾರೆ . ಮತ್ತು ಕೆಲವರು ಪ್ರಯಾಣದ ಸಂಧರ್ಭದಲ್ಲಿ ಅಂಗವಿಕಲರಿಗೆ ತಮ್ಮ ಆಸನಗಳನ್ನು ಮಾನವೀಯತೆಯಿಂದ ಬಿಟ್ಟು ಕೊಡುತ್ತಾರೆ.ಆದರೆ ಕೆಲವರಂತು ಅಂಗವಿಕಲರಿಗೆ ಮೀಸಲಿರುವ ಆಸನಗಳಲ್ಲಿ ಕುಳಿತಿದ್ದರೂ ಅವರುಗಳು ಬಂದರೂ ಆಸನಗಳನ್ನು ಬಿಟ್ಟು ...