""ಅಂಗವಿಕಲತೆ ಶಾಪವಲ್ಲ""

     


        ಆರೋಗ್ಯವೇ ಸ್ವರ್ಗ,
       ಅನಾರೋಗವೇ ನರಕ.

      ಮಿತ್ರರೇ ಅಂಗವಿಕಲತೆ ಎಂಬುದು ಶಾಪವಲ್ಲ.ಕೇವಲ ಆಕಸ್ಮಿಕವಾಗಿ ದೈವದತ್ತವಾಗಿ ಬರುವಂತಹ ಒಂದು ಸ್ವಾಭಾವಿಕ ಗುಣ. ಈ ಪ್ರಪಂಚದಲ್ಲಿ ಸ್ರುಷ್ಟಿಸಲ್ಪಟ್ಟ ಪ್ರತಿಯೊಬ್ಬರಿಗೂ ಆ ದೇವರು ಒಂದಿಲ್ಲೊಂದು ನ್ಯೂನತೆಯನ್ನು ಕೊಟ್ಟು ಸ್ರುಷ್ಟಿಸುತ್ತಾನೆ.ಅದರಲ್ಲೂ ಕೆಲವರಿಗೆ ಆಂತರಿಕ ನ್ಯೂನತೆಗಳನ್ನು ಕೊಟ್ಟರೆ, ಕೆಲವರಿಗೆ  ಬಾಹ್ಯ ನ್ಯೂನತೆಗಳನ್ನು ಕೊಡುತ್ತಾನೆ.ಆದರೆ ಕೆಲವರು ತಮ್ಮಲ್ಲಿರುವ  ಆಂತರಿಕ ನ್ಯೂನತೆಗಳನ್ನು ಮರೆತು,ಬೇರೆಯವರ ಬಾಹ್ಯ ನ್ಯೂನತೆಗ ಕಡೆ ಗಮನಹರಿಸುತ್ತಾರೆ.ಕೆಲ ಸಂಧರ್ಭಗಳಲ್ಲಿ ಅಂಗವಿಕಲತೆ ಎಂಬುದು ದೈವದತ್ತವಾಗಿ ಬಾರದಿದ್ದರೂ ನಮ್ಮ ನಿರ್ಲಕ್ಷತೆ ಅಥವಾ ಬೇಜವಬ್ದಾರಿಯಿಂದ ಸಂಭವಿಸುತ್ತದೆ.

     ಕೆಲ ಅವಿವೇಕಿಗಳು ಅಂಗವಿಕಲತೆಯ ಬಗ್ಗೆ ಸಂಪೂರ್ಣವಾಗಿ ಗೊತ್ತಿದ್ದರೂ ,ಅವರ ಪೋಷಕರ ಜೊತೆಯಲ್ಲಿ ಅದರ ಬಗ್ಗೆಯೇ ಚರ್ಚಿಸಿ ಅವರ ಮನಸ್ಅನ್ನು ಘಾಸಿ ಗೊಳಿಸುತ್ತಾರೆ.  ಅಂಗವಿಕಲರನ್ನು ಕೇವಲವಾಗಿ ಕಾಣುತ್ತಾರೆ . ಮತ್ತು ಕೆಲವರು ಪ್ರಯಾಣದ ಸಂಧರ್ಭದಲ್ಲಿ ಅಂಗವಿಕಲರಿಗೆ ತಮ್ಮ ಆಸನಗಳನ್ನು ಮಾನವೀಯತೆಯಿಂದ ಬಿಟ್ಟು ಕೊಡುತ್ತಾರೆ.ಆದರೆ ಕೆಲವರಂತು ಅಂಗವಿಕಲರಿಗೆ ಮೀಸಲಿರುವ ಆಸನಗಳಲ್ಲಿ ಕುಳಿತಿದ್ದರೂ ಅವರುಗಳು ಬಂದರೂ ಆಸನಗಳನ್ನು ಬಿಟ್ಟು ಕೊಡುವುದಿಲ್ಲ.ಇನ್ನೂ ಕೆಲವರಂತು ಅಂಗವಿಕಲ ಮಕ್ಕಳನ್ನು ತಂದೆ ಅಥವಾ ತಾಯಿಯಂದಿರೂ ಹೊರಗಡೆ ಕರೆದುಕೊಂಡು ಹೋದರೆ ಅವರನ್ನೇ ಕೆಕ್ಕರಿಸಿ ನೋಡಿಕೊಂಡು ಆ ತಾಯಂದಿರ ಕಣ್ಣಲ್ಲಿ ನೀರು ತರಿಸುತ್ತಾರೆ.ದಯವಿಟ್ಟು ಆ ಮಕ್ಕಳನ್ನು ಕೂಡ ಎಲ್ಲರಂತೆ ಕಾಣಿ.ಆ ಮಕ್ಕಳಿಗೆ ತಮ್ಮ ನ್ಯೂನತೆಗಳ ಬಗ್ಗೆ ಅರಿವಾಗದಂತೆ ಎಚ್ಚರವಹಿಸಿ.ಅವರಲ್ಲೂ ಎಲ್ಲಾ ಗುಣಗಳು ಇವೆ. ಆದ್ದರಿಂದ ಅವರುಗಳನ್ನು ಎಲ್ಲಾ ರಂಗದಲ್ಲೂ ಮುಂದೆ ತರುವ ಪ್ರಯತ್ನಗಳನ್ನು ಮಾಡಿ. ಈಗಾಗಲೆ ಅನೇಕರು ತಮ್ಮ ನ್ಯೂನತೆಗಳನ್ನು ಮೆಟ್ಟಿ ನಿಂತು ತಮ್ಮ ತಮ್ಮ ಸಾಧನೆಯ ಶಿಖರವನ್ನೇರಿದ್ದಾರೆ.ಅಂತವರ ಪರಿಚಯ ಮಾಡಿಸಿ ಅಂತವರ ಜೀವನ ಚರಿತೆಯನ್ನು ತಿಳಿಸಿ ಅವರನ್ನು ಉರಿದುಂಬಿಸಿ.ಯಾರು ಕೂಡ ತಮಗೆ ಅಂಗವಿಕಲತೆ ಬೇಕು ಎಂದು ದೇವರಲ್ಲಿ ಕೇಳಿ ತರುವುದಲ್ಲ .ಆದ್ದರಿಂದ ದಯಮಾಡಿ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಎಲ್ಲರಂತೆ ಬಾಳಲು ಅವಕಾಶ ಮಾಡಿ ಕೊಡಿ.  ಅವರು ಮನಸ್ಸು ಮಾಡಿದರೆ ಸಾಮಾನ್ಯ ಜನರಿಗಿಂತ ಉತ್ತಮ ಗುಣಮಟ್ಟದ ಜೀವನವನ್ನು ನಡೆಸಬಹುದು ಎಂಬುದನ್ನು ತೋರಿಸಿ.

ಸೂಚನೆ:-
(ಈ ಜಾಗ್ರತೆಯ ಉದ್ದೇಶ:- ನನ್ನ ಸ್ವಂತ ಅನುಭವದಲ್ಲಿ ಒಬ್ಬ ತಾಯಿ ತನ್ನ ಅಂಗವಿಕಲ ಮಗುವನ್ನು ಕರೆದುಕೊಂಡು ಹೋಗುವಾಗ ಸಹ ಪ್ರಯಾಣಿಕರು ಅವರ ಕಣ್ಣಂಚಲ್ಲಿ ಕಂಬನಿ ತರಿಸಿದ್ದು)


                          ಇಂತಿ
   **ಹರೀಶ್ ವಿವೇಕಾನಂದ ಮಂಚಿಬೀಡು**





Comments

Popular posts from this blog