ಶ್ರೀ ಕ್ಷೇತ್ರ ಚಂದಗೋನಹಳ್ಳಿಯಮ್ಮ.
- Get link
- X
- Other Apps
ಚಂದಗೋನಹಳ್ಳಿಯಮ್ಮ ಕ್ಷೇತ್ರ
ದೇವರನ್ನು ಕಂಡ ತಕ್ಷಣ ಒಂದು ಕ್ಷಣ ಅಲ್ಲಿ ನಿಂತು ,ಆ ದೇವರಿಗೆ ಕೈಮುಗಿದು ಮುಂದೆ ಸಾಗದ ಮನುಜರಿಲ್ಲ.ಅವರಿಗೆ ದೇವಸ್ಥಾನದ ಒಳಗಡೆ ಹೋಗಲು ಸಮಯ ಇಲ್ಲದಿದ್ದರೂ ನಿಂತಲ್ಲಿಯೆ ಭಕ್ತಿ ಪೂರ್ವಕಾವಾಗಿ ಶರಣಾಗುವುದು ವಾಡಿಕೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಿಂದ ಬಂಡಿಹೊಳೆ ಮಾರ್ಗವಾಗಿ ಹೊಳೇನರಸೀಪುರಕ್ಕೆ ತಲುಪುವ ಮಾರ್ಗ ಮಧ್ಯದಲ್ಲಿ ಬಾ ನೆತ್ತರಕ್ಕೆ ಬೆಳೆದು ನಿಂತಿರುವ ಹೇಮಗಿರಿ ಬೆಟ್ಟವಿದೆ.ಆ ಬೆಟ್ಟದಲ್ಲಿ ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿ ದೇವಸ್ತಾನವಿದೆ.ನಂತರ ಅದೇ ಸಾಲಿನಲ್ಲಿ ಬಂದರೆ ಬಂಡಿಹೊಳೆ ಗ್ರಾಮ ನಿಮ್ಮನ್ನು ಸ್ವಾಗತಿಸುತ್ತದೆ.
ಈ ಬಂಡಿಹೊಳೆ ಗ್ರಾಮದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಕ್ಷೇತ್ರ ಶ್ರೀ ಕ್ಷೇತ್ರ ಚಂದಗೋನಹಳ್ಳಿಯಮ್ಮ ದೇವಸ್ತಾನ. ಆರತಿ ಉಕ್ಕಡದ ಮಾರಮ್ಮ ಮತ್ತು ಡಿಂಕದಮ್ಮನ ಕ್ಷೇತ್ರಗಳ ಮಾದರಿಯಲ್ಲಿಯೇ ಪ್ರಸಿದ್ಧಿ ಪಡೆದಿದೆ. ಕೆ.ಆರ್ ಪೇಟೆ ತಾಲ್ಲೂಕಿನ ಚಂದಗೋನಹಳ್ಳಿ ಗ್ರಾಮದಲ್ಲಿ ಅವತರಿಸಿರುವ ಚಂದಗೋನಳ್ಳಿಯಮ್ಮ ಪ್ರಸಿದ್ಧ ಶಕ್ತಿದೇವತೆಯಾಗಿ ನೆಲೆನಿಂತು ಭಕ್ತರನ್ನು ಪೊರೆಯುತ್ತಿದ್ದಾಳೆ. ಪ್ರತಿ ಭಾನುವಾರ, ಮಂಗಳವಾರ, ಮತ್ತು ಶುಕ್ರವಾರ ಭಕ್ತರ ದಂಡೇ ಹರಿದುಬರುತ್ತದೆ. ಹೇಮಾವತಿ ನದಿ ದಂಡೆಯ ಬಂಡಿಹೊಳೆ ಸಮೀಪದಲ್ಲಿರುವ ಶ್ರೀಕ್ಷೇತ್ರವು ಹರಕೆ ಹೊತ್ತು ಬಂದ ಭಕ್ತರ ಪಾಲಿಗೆ ನೆಮ್ಮದಿ ನೀಡುವ ತಾಣವಾಗಿದೆ. ಹರಕೆ ಸಿದ್ಧಿಯಾದರೆ ವನಭೋಜನ ನಡೆಸಿ (ಮಾಂಸದೂಟ ಪರ) ಹರಕೆ ತೀರಿಸುವುದು ಇಲ್ಲಿನ ವಾಡಿಕೆ.ಇನ್ನೊಂದು ವಿಶೇಷವೆಂದರೆ ಅಮ್ಮನವರು ಹತ್ತಿರದ ಭಕ್ತಿಗಿಂತ ದೂರದ ಭಕ್ತಿಗೆ ಹೊಲಿಯುವುದರಲ್ಲಿ ಎತ್ತಿದ ಕೈ ಎಂಬುದು ಭಕ್ತಾದಿಗಳ ನಂಬಿಕೆ.
ರವಿಕೆ ಖಣ , ಸೀರೆ, ಅರಿಶಿನ -ಕುಂಕುಮ ಅರ್ಪಿಸುವುದು ಸಾಮಾನ್ಯ. ಅಮಾವಾಸ್ಯೆ, ಹುಣ್ಣಿಮೆ ದಿನಗಳಂದು ಕ್ಷೇತ್ರದಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಕಿಕ್ಕಿರಿದು ಭಕ್ತರ ದಂಡು ಹರಿದು ಬರುತ್ತದೆ. ಸೋಮವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲೂ ಪರ, ಬೀಗರ ಔತಣ ಕೂಟ, ನಾಮಕರಣ, ಹುಟ್ಟುಹಬ್ಬ ಆಚರಣೆ, ಹೊಸ ವಾಹನಗಳ ಪೂಜೆ ,ದೇವಿಯ ಸನ್ನಿಧಿಯಲ್ಲಿ ನಡೆಯುತ್ತವೆ. ಇಲ್ಲಿ ಒಡಮೂಡಿರುವ ಕಲ್ಲು, ದೇವಿಯ ಪ್ರತಿರೂಪವಾಗಿದೆ. ಇದಕ್ಕೆ ಮುಖವಾಡ ಧರಿಸಲಾಗಿದ್ದು ಜನರು ತಮ್ಮ ಕೈಯಾರೇ ಪೂಜೆ ಸಲ್ಲಿಸುತ್ತಾರೆ. ತಮ್ಮ ಇಷ್ಠಾರ್ಥ ಪೂರೈಸುವಂತೆ ಬೇಡಿಕೊಳ್ಳುತ್ತಾರೆ.
ಒಮ್ಮೆ ದೇವಿಯ ಕ್ಷೇತ್ರಕ್ಕೆ ಬಂದು ತಡೆ ಒಡೆಸಿ ಪೂಜೆ ಸಲ್ಲಿಸಿದರೆ ಅವರು ಅಂದುಕೊಂಡ ಎಲ್ಲಾ ಕಾರ್ಯಗಳು ಯಶಸ್ವಿಯಾಗಿ ಕೈಗೂಡುತ್ತವೆ ಎಂಬುದು ಇಲ್ಲಿಗೆ ಬರುವ ಭಕ್ತರ ನಂಬಿಕೆ. ಮೈಸೂರು, ಬೆಂಗಳೂರು, ಮಂಡ್ಯ, ಕೆ.ಆರ್.ನಗರ ಸೇರಿ ರಾಜ್ಯದ ಹಲವು ಭಾಗಗಳಿಂದ ಸಾವಿರಾರು ಜನರು ಬಂದು ದೇವರ ದರ್ಶನ ಪಡೆಯುತ್ತಾರೆ.
ಈ ದೇವಸ್ಥಾನಕ್ಕೆ ರೈಲು ಮತ್ತು ಬಸ್ ಮೂಲಕ ಬರಬಹುದು. ರೈಲಿನಲ್ಲಿ ಮೈಸೂರು, ಹಾಸನ ಕಡೆಯಿಂದ ಬರುವವರು ಬೀರುವಳ್ಳಿ ರೈಲು ನಿಲ್ದಾಣದಲ್ಲಿ ಇಳಿದು ಆಟೊದಲ್ಲಿ ಕ್ಷೇತ್ರಕ್ಕೆ ಬರಬಹುದು. ಬಸ್ನಲ್ಲಿ ಬರುವವರು ಕೆ.ಆರ್.ಪೇಟೆ ಕಡೆಯಿಂದ ಹೇಮಗಿರಿ ರಸ್ತೆ ಮೂಲಕ ಕ್ಷೇತ್ರ ತಲುಪಬಹುದು.ಇಲ್ಲಿಗೆ ಬರುವ ಭಕ್ತರಿಗೆ ರೈಲಿನ ವಿಶೇಷವೇನೆಂದರೆ ಮೈಸೂರಿನಿಂದ-ಅರಸೀಕೆರೆ ಕಡೆ ಹೋಗುವ ಎಲ್ಲಾ ರೈಲುಗಾಡಿಗಳ ನಿಲುಗಡೆಯಿದೆ.(ಪ್ಯಾಸೆಂಜರ್ ಮತ್ತು ಎಕ್ಸ್ಪ್ರೆಸ್).
ಸೂಚನೆ:- ಮುಖ್ಯವಾಗಿ ನಮ್ಮ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನನ್ನ ಗೆಳೆಯ / ಗೆಳತಿಯರು ಇದನ್ನು ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡಿ ಎಲ್ಲಾ ಕಡೆ ಪಸರಿಸಿ ನಮ್ಮ ತಾಲೂಕಿನ ವಿಶೇಷತೆಯನ್ನು ಎತ್ತಿ ಹಿಡಿಯಬೇಕು.
ಇಂತಿ ನಿಮ್ಮ . ಹರೀಶ್ ವಿವೇಕಾನಂದ ಮಂಚಿಬೀಡು. Www.Harisha ms manchibeedu. Com
- Get link
- X
- Other Apps
Comments
Post a Comment