Posts

Showing posts from 2020

"" ತಾಯಿಯಿಲ್ಲದ ತವರು ""

Image
  ತಾಯಿಯೇ ಮೊದಲ ದೇವರು,ಮನೆಯೇ ಮೊದಲ ಪಾಠಶಾಲೆ, ಇದು ನಾಣ್ಣುಡಿಯಾದರು ಅಕ್ಷರಶಃ ಸತ್ಯವಾದ ಮಾತು.ನಮ್ಮ ಹಿರಿಕರು ಏನೇ ಹೇಳಿದರು ಅದರ ಹಿಂದೆ ಒಂದಲ್ಲ ಒಂದು ಕಾರಣವಿರುತ್ತದೆ.ಆದರೆ ಆ ಮಾತಲ್ಲಿ ಮನಕಲಕುವ ಮಾತೆಂದರೆ , " ತಾಯಿಯಿಲ್ಲದ ತವರ್ಯಾಕೆ" ಎಂಬುದು.           ಈ ಪ್ರಪಂಚದಲ್ಲಿ ತಾಯಿಗಿಂತ ಮಿಗಿಲಾದುದು ಯಾವುದೂ ಇಲ್ಲ. ನಮ್ಮ ಜೀವನಕ್ಕೋಸ್ಕರ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿ ತನ್ನ ಕರುಳ ಕುಡಿಗೋಸ್ಕರ ತನ್ನ ಜೀವನವನ್ನು ಸವೆಸುವ ಕರುಣಾಮಯಿ. ಯಾರೇ ಆಗಲಿ ಗಂಡಾಗಲಿ,‌ ಹೆಣ್ಣಾಗಲಿ ತಾವು ಎಲ್ಲೇ ಹೋಗಿ ಮನೆಗೆ ಬಂದಾಗ ಪ್ರೀತಿಯಿಂದ ಕರೆಯುವ ಮಾತೇ ಅಮ್ಮ. ಯಾರೇ ಆದರು ಸರಿ ತಮ್ಮ ಒಂದು‌ ನಿಲುವನ್ನು ಮೊದಲು ಪ್ರಸ್ತಾಪಿಸುವುದು ತಾಯಿಯ ಬಳಿಯಲ್ಲೇ, ಯಾಕೆಂದರೆ ಅದು ತಾಯಿಯಾದವಳು ಮಕ್ಕಳಿಗೆ ನೀಡಿರುವ ಸಲುಗೆ.  ನಾವು ಇಟ್ಟ ವಸ್ತುಗಳು ಸಮಯಕ್ಕೆ ಸರಿಯಾಗಿ ನಮಗೆ ಸಿಗದಿದ್ದಾಗಲೂ ನಾವು ಹೇಳೋ ಮಾತು ಅಮ್ಮ, ನಾವು ಎಡವಿದಾಗ,ಬಿದ್ದಾಗ,ಎದ್ದಾಗ ಹೇಳುವ ಮಾತು ಕೂಡ ಅಮ್ಮಾ, ಒಂದು ಸಂಸಾರ ತಕ್ಕಡಿಯಂತೆ ಸಮನಾಗಿ ಕಷ್ಟ-ಸುಖದ ಸಾಗರದಲ್ಲಿ ಮಿಂದಾಗ ಅದನ್ನು‌ ತೂಗುವ ಸಾಮರ್ಥ್ಯ ಕೂಡ ಇರುವುದು ಅಮ್ಮನಿಗೆ ಹೊರತು ಅಪ್ಪನಿಗಲ್ಲ.ನೀವು ಹೇಳಬಹುದು   ಅಪ್ಪ ದುಡಿಯದಿದ್ದರೆ ಅಮ್ಮ ಹೇಗೆ ಸಂಸಾರವೆಂಬ ನೌಕೆಯನ್ನು  ನಿಭಾಯಿಸುತ್ತಾಳೆ ಎಂದು. ಆದರೆ ಮನೆಯಲ್ಲಿ ತಾಯಿಯಾದವಳು‌ ಬಿಕ್ಕಟ್ಟಿನಲ್ಲಿ ಸಂಸಾರ...