"" ತಾಯಿಯಿಲ್ಲದ ತವರು ""

 
ತಾಯಿಯೇ ಮೊದಲ ದೇವರು,ಮನೆಯೇ ಮೊದಲ ಪಾಠಶಾಲೆ, ಇದು ನಾಣ್ಣುಡಿಯಾದರು ಅಕ್ಷರಶಃ ಸತ್ಯವಾದ ಮಾತು.ನಮ್ಮ ಹಿರಿಕರು ಏನೇ ಹೇಳಿದರು ಅದರ ಹಿಂದೆ ಒಂದಲ್ಲ ಒಂದು ಕಾರಣವಿರುತ್ತದೆ.ಆದರೆ ಆ ಮಾತಲ್ಲಿ ಮನಕಲಕುವ ಮಾತೆಂದರೆ ,
" ತಾಯಿಯಿಲ್ಲದ ತವರ್ಯಾಕೆ" ಎಂಬುದು.
 
        ಈ ಪ್ರಪಂಚದಲ್ಲಿ ತಾಯಿಗಿಂತ ಮಿಗಿಲಾದುದು ಯಾವುದೂ ಇಲ್ಲ. ನಮ್ಮ ಜೀವನಕ್ಕೋಸ್ಕರ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿ ತನ್ನ ಕರುಳ ಕುಡಿಗೋಸ್ಕರ ತನ್ನ ಜೀವನವನ್ನು ಸವೆಸುವ ಕರುಣಾಮಯಿ. ಯಾರೇ ಆಗಲಿ ಗಂಡಾಗಲಿ,‌ ಹೆಣ್ಣಾಗಲಿ ತಾವು ಎಲ್ಲೇ ಹೋಗಿ ಮನೆಗೆ ಬಂದಾಗ ಪ್ರೀತಿಯಿಂದ ಕರೆಯುವ ಮಾತೇ ಅಮ್ಮ. ಯಾರೇ ಆದರು ಸರಿ ತಮ್ಮ ಒಂದು‌ ನಿಲುವನ್ನು ಮೊದಲು ಪ್ರಸ್ತಾಪಿಸುವುದು ತಾಯಿಯ ಬಳಿಯಲ್ಲೇ, ಯಾಕೆಂದರೆ ಅದು ತಾಯಿಯಾದವಳು ಮಕ್ಕಳಿಗೆ ನೀಡಿರುವ ಸಲುಗೆ.  ನಾವು ಇಟ್ಟ ವಸ್ತುಗಳು ಸಮಯಕ್ಕೆ ಸರಿಯಾಗಿ ನಮಗೆ ಸಿಗದಿದ್ದಾಗಲೂ ನಾವು ಹೇಳೋ ಮಾತು ಅಮ್ಮ, ನಾವು ಎಡವಿದಾಗ,ಬಿದ್ದಾಗ,ಎದ್ದಾಗ ಹೇಳುವ ಮಾತು ಕೂಡ ಅಮ್ಮಾ, ಒಂದು ಸಂಸಾರ ತಕ್ಕಡಿಯಂತೆ ಸಮನಾಗಿ ಕಷ್ಟ-ಸುಖದ ಸಾಗರದಲ್ಲಿ ಮಿಂದಾಗ ಅದನ್ನು‌ ತೂಗುವ ಸಾಮರ್ಥ್ಯ ಕೂಡ ಇರುವುದು ಅಮ್ಮನಿಗೆ ಹೊರತು ಅಪ್ಪನಿಗಲ್ಲ.ನೀವು ಹೇಳಬಹುದು   ಅಪ್ಪ ದುಡಿಯದಿದ್ದರೆ ಅಮ್ಮ ಹೇಗೆ ಸಂಸಾರವೆಂಬ ನೌಕೆಯನ್ನು  ನಿಭಾಯಿಸುತ್ತಾಳೆ ಎಂದು. ಆದರೆ ಮನೆಯಲ್ಲಿ ತಾಯಿಯಾದವಳು‌ ಬಿಕ್ಕಟ್ಟಿನಲ್ಲಿ ಸಂಸಾರ ನಿಭಾಯಿಸದಿದ್ದರೆ ಅಪ್ಪ ಎಂಬುವವನು ಸಾವಿರ ತಂದರೂ ಅದು ಶೂನ್ಯಕ್ಕೆ ಸಮವಾಗಿರುತ್ತದೆ.  ಇದರರ್ಥ ಅವಳಿಗಿಂತ  ಮಿಗಿಲಾದುದು ಬೇರೇನು ಇಲ್ಲ ಎಂಬುದು.

      ಆದರೆ ಅವಳಿಲ್ಲದ ಜೀವನವನ್ನು ಊಹಿಸಿಕೊಳ್ಳಲೂ ಅಸಾಧ್ಯ. ಆದರೂ ಸಹ ಆ ದೇವರು ಕೆಲವು ಬಾರಿ ಕ್ರೂರಿಯಾಗುತ್ತಾನೆ.ಅದೆಷ್ಟೋ ಕಂದಮ್ಮಗಳಿಗೆ ಆ ತಾಯಿಯ ಪ್ರೀತಿಯಿಂದ ಮರೆಮಾಚುತ್ತಾನೆ. ಆ ಪ್ರೀತಿ ಏನೆಂಬುದನ್ನು ತೋರದೆ ಬಚ್ಚಿಡುತ್ತಾನೆ.  ಇನ್ನೂ ಕೆಲವರಿಗಂತೂ ಆ ಪ್ರೀತಿಯನ್ನು ನೀಡಿ ಅರ್ಧದಲ್ಲೇ ಕಸಿದುಕೊಳ್ಳುತ್ತಾನೆ. ಈ ಮಾನವ ಜೀವನದಲ್ಲಿ‌ ನಾವು ಸಂಪನ್ನರಾಗಿ ಬದುಕ ಬೇಕೆಂದರೆ ಅದರಲ್ಲಿ ತಾಯಿಯ ಪಾತ್ರವು ಬಹಳ ಮುಖ್ಯವಾಗುತ್ತದೆ. ಆದರೆ ಗಂಡಿಗೆ ತಾಯಿಯ ಪ್ರೀತಿ ಇಲ್ಲದಿದ್ದರೂ ಪರವಾಗಿಲ್ಲ, ಆದರೆ ಹೆಣ್ಣಿಗೆ ಆ ಪ್ರೀತಿ ಸಿಗದಿದ್ದರೆ ಈ ಜೀವನವೇ ಒಂದು ನರಕದಂತೆ ಕಾಣುತ್ತದೆ.
ಹಾಗಂದ ಮಾತ್ರಕ್ಕೆ ಗಂಡಿಗೆ ತಾಯಿ ಮೇಲೆ ಮಮಕಾರವಿಲ್ಲ ಅಥವಾ ತಾಯಿಗೇ ಮಗನ ಮೇಲೆ ಪ್ರಿತಿ ಇಲ್ಲ ಎಂತಲ್ಲ.
ಒಂದು ಗಂಡು ಎಲ್ಲಿ ಹೋದರು ತನ್ನ ಜೀವನವನ್ನು ನಿಭಾಹಿಸುತ್ತಾನೆ,ಯಾವ ದೇಶಕ್ಕೋದರು ತನ್ನ ತಾಯಿಯನ್ನು ಮರೆತು ಬೇಕಾದರು ಬದುಕುತ್ತಾನೆ ಮತ್ತು ಅವನಿಗೆ ಏನೇ ವಿಚಾರ ಬಂದರೂ ಸರಿ ಅದನ್ನು ಯಾರ ಬಳಿಯಾದರೂ  ಕೇಳಿ ಪರಿಹರಿಸಿ ಕೊಳ್ಳುತ್ತಾನೆ. ಆದರೆ ಹೆಣ್ಣಿನ ಪರಿಸ್ಥಿತಿ ಆಗಲ್ಲ. ಗಂಡು ತನಗೇನಾದರು ಸರಿ ಅದನ್ನು ನಿಸ್ಸಂಕೋಚವಾಗಿ ತನ್ನವರ ಬಳಿ ಹೇಳುತ್ತಾನೆ.ಆದರೆ ಹೆಣ್ಣಾದವಳು ಕೆಲವು ಆಂತರಿಕ/ ಬಾಹ್ಯ ವಿಚಾರಗಳನ್ನು ಪ್ರಸ್ತಾಪಿಸಲು ತಾಯೆಂಬುವ ಒಂದು ನೆರಳು ಇರಲೇಬೇಕು.ಮತ್ತು ಕೆಲವಿಚಾರಗಳನ್ನು ಪ್ರಸ್ತಾಪಿಸಲು ತಾಯಿಯ ಹೊರತು ಬೇರೆ ಯಾರ ಬಳಿಯು ಹೇಳಿ ಕೊಳ್ಳಲು ಸಂಕೋಚ ಪಟ್ಟುಕೊಳ್ಳುತ್ತಾಳೆ. ಆದರೆ ಅ ದೇವರು ಇಂದು ಅದಷ್ಟೋ ಅಂತ ಮುಗ್ಧ ಮನಸ್ಸುಗಳಿಗೆ ಅಂತಹ ಭಾಗ್ಯವನ್ಮು ಕರುಣಿಸಿಲ್ಲ.  ಆ ಭಾಗ್ಯ ಸಿಗದ ಅದೆಷ್ಟೋ ಮನಸ್ಸುಗಳು ಇಂದು ಪರಿತಪಿಸುತ್ತಿವೆ. ಅದರ ಜೊತೆಗೆ ಅ ದೇವರಿಗೂ ಕೂಡ ಶಾಪವಾಕುತ್ತಿವೆ, ನಮಗೆ ಅದರಲ್ಲೇ‌ ಅರ್ಥವಾಗುತ್ತದೆ ಆ ಹೆಣ್ಣು ಮಕ್ಕಳ ರೋದನೆ ಏನೆಂಬುದು.

   ಆದರೆ ನಾನು ಅಂತಹ ಕೆಲವು ಮುಗ್ಧ ಮನಸ್ಸುಗಳಿಗೆ ಹೇಳುವುದೇನೆಂದರೆ, ನೀವು ನಿಮ್ಮನ್ನೇ ಆ ‌ದೇವರ ಮಕ್ಕಳೆಂದು ಬಿಂಬಿಸಿಕೊಳ್ಳಿ. ನೀವು ಆ ದೇವರ ಶಾಪವನ್ನೇ ಮೆಟ್ಟು ನಿಲ್ಲಿ. ಆ ದೇವರು ನಿಮಗೆ ನೀಡಿರುವುದು ಒಂದು ಪರೀಕ್ಷೆ ಎಂದು ಅರಿತು ಅದನ್ನು ಎದುರಿಸಿ. ಓ ದೇವರು ನೀ ಎಂತಹ ಪರಿಸ್ಥಿತಿ ಕೊಟ್ಟರೂ ನಾನು ಅದನ್ನು ಎದುರಿಸಲು ಸಿದ್ದಳಿದ್ದೇನೆ ಎಂದು ಎದ್ದು ನಿಲ್ಲಿ. ಆಗ ನಿಮ್ಮಲ್ಲೇ ಒಂದು ಜ್ವಾಲಾಮುಖಿ ಪ್ರವಹಿಸುತ್ತದೆ .ಆ ಜ್ವಾಲಾಮುಖಿಯೇ ನೀವು ಜೀವನದಲ್ಲಿ ಎದ್ದು ನಿಲ್ಲುವ ಸಾಮರ್ಥ್ಯವನ್ನು ನಿಮಗೆ ತೋರಿಸುತ್ತದೆ. ನೀವು ಏನೆಂಬುದನ್ನು ಇಡೀ ಜಗತ್ತಿಗೆ ಸಾರಿ ಹೇಳುವ ಹುರುಪು ತುಂಬುತ್ತದೆ. ಅದರೇ ಏನೇ‌ ಆದರು ಸರಿ ಕೊರಗಿ ಮರುಗದಿರಿ.
ಅದರೆ ಬಹಳ ಮುಖ್ಯವಾದ ಮಾಹಿತಿ ಏನೆಂದರೆ ಕೆಲವು ಮೂರ್ಖರ ಮಾತಿಗೆ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಬುದ್ದಿಯನ್ನು ಅಂತಹ ವ್ಯಕ್ತಿಗಳು ಹೇಳಿದ ಮಾತಿನ ಕಪಿ ಮುಷ್ಟಿಗೆ ನೀಡಬೇಡಿ ಅದರಿಂದ ಜಾಗೃತರಾಗಿರಿ.

( ಈ ತುಣುಕನ್ನು ನನ್ನ ಸ್ನೇಹಿತೆಯೊಬ್ಬರಿಗೆ ಅರ್ಪಿಸುತ್ತೇನೆ.)

ಇಂತಿ:-
ಹರೀಶ.ಎಂ.ಎಸ್
(ಹರೀಶ್ ವಿವೇಕಾನಂದ ಮಂಚಿಬೀಡು.)
 
       
   
     


Comments

Post a Comment

Popular posts from this blog