"" ಜೀವನ ಮತ್ತು ಜಿಗುಪ್ಸೆಯ "" ಆ ಒಂದು ನಿಮಿಷ

ಜೀವನ ಎಂದರೆ ಯಾರಿಗೆ ಗೊತ್ತಿಲ್ಲ, ಈಗೆ ಕೇಳುವವರು ಕೂಡ ಜೀವನದ ಒಂದು ಅಂಗ. ಇಂದು ಒಬ್ಬರಿಗೊಬ್ಬರು ಪೈಪೋಟಿಯಿಂದ ತಾನು,ತಮ್ಮವರು ಎಂದು ಲೆಕ್ಕಿಸದೆ ಎಲ್ಲರಂತೆ ತಾನು ಕೂಡ ಮುಂದೆ ಹೋಗಬೇಕು, ನಾಲ್ಕು ಜನರಿಗೆ ಸರಿಸಮವಾಗಿ ನಾನೂ ನಿಲ್ಲಬೇಕು, ಎಲ್ಲರಂತೆ ನಾನೂ ಸಹ ನನ್ನದೇ ಆದಂತಹ ಒಂದು ಎಲ್ಲೆಯನ್ನು ನಿರ್ಮಿಸಿಕೊಂಡು ನನ್ನದೇ ಆದಂತಹ ಒಂದು ಸಮೃದ್ಧ ಜೀವನ ನಡೆಸಬೇಕು ಎಂದು ಪ್ರತಿಯೊಬ್ಬ ಮಾನವನು ಬಯಸುತ್ತಾನೆ. ಆದರೆ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ತನ್ನದೇ ಆದ ಶೈಲಿಯಲ್ಲಿ , ತನ್ನದೇ ಆದ ಕೆಲ ರೂಪುರೇಷೆಗಳನ್ನು ಅಳವಡಿಸಿಕೊಂಡು ಬದುಕಲು ಇಷ್ಟ ಪಡುತ್ತಾನೆ, ಕಾರಣ ಇಷ್ಟೇ ಈ ಜೀವನವೆಂಬ ಪ್ರಯಾಣದಲ್ಲಿ ನಾವೂ ಕೂಡ ಒಂದು ಸೊಗಸಾದ ನಿಲ್ದಾಣದಲ್ಲಿ ನಿಲ್ಲೇಬೇಕೆಂಬ ಮಹದಾಸೆಯಿಂದ. ಈ ಸೊಗಸಾದ ಎಲ್ಲೆಯನ್ನು ನಿರ್ಮಿಸಿಕೊಳ್ಳುವ ಬರದಲ್ಲಿ ತಾನು ಎಷ್ಟೇ ಸವಾಲುಗಳು ಬಂದರು ಅವುಗಳನ್ನು ಲೆಕ್ಕಸುವುದಿಲ್ಲ, ತಾನು ಮತ್ತು ತನ್ನ ನಂಬಿ ಬದುಕು ಸಾಗಿಸುತ್ತಿರುವ ಕೆಲ ಜೀವಗಳಿಗೋಸ್ಕರ ಕೆಲವೊಮ್ಮೆ ಒಪ್ಪೊತ್ತಿನ ಊಟವನ್ನೂ ಲೆಕ್ಕಿಸದೆ, ಇದಕ್ಕೂ ಮೀರಿ ಪ್ರಾಣವನ್ನು ಲೆಕ್ಕಿಸದೇ ದುಡಿಯುತ್ತಾನೆ. ಕಾರಣ ಇಷ್ಟೆ ಎಲ್ಲರಂತೆ ತನ್ನ ಬದುಕೂ ಕೂಡ ಹಸನಾಗಬೇಕು, ನನ್ನವರು ಸಹ ಉಲ್ಲಾಸಮಯದ ಹುರುಪಿನೊಂದಿಗೆ ಬಾಳ್ಮೆ ನಡೆಸಬೇಕೆಂಬುದು. ಕ...