"" ಜೀವನ ಮತ್ತು ಜಿಗುಪ್ಸೆಯ "" ಆ ಒಂದು ನಿಮಿಷ
ಜೀವನ ಎಂದರೆ ಯಾರಿಗೆ ಗೊತ್ತಿಲ್ಲ, ಈಗೆ ಕೇಳುವವರು ಕೂಡ ಜೀವನದ ಒಂದು ಅಂಗ. ಇಂದು ಒಬ್ಬರಿಗೊಬ್ಬರು ಪೈಪೋಟಿಯಿಂದ ತಾನು,ತಮ್ಮವರು ಎಂದು ಲೆಕ್ಕಿಸದೆ ಎಲ್ಲರಂತೆ ತಾನು ಕೂಡ ಮುಂದೆ ಹೋಗಬೇಕು, ನಾಲ್ಕು ಜನರಿಗೆ ಸರಿಸಮವಾಗಿ ನಾನೂ ನಿಲ್ಲಬೇಕು, ಎಲ್ಲರಂತೆ ನಾನೂ ಸಹ ನನ್ನದೇ ಆದಂತಹ ಒಂದು ಎಲ್ಲೆಯನ್ನು ನಿರ್ಮಿಸಿಕೊಂಡು ನನ್ನದೇ ಆದಂತಹ ಒಂದು ಸಮೃದ್ಧ ಜೀವನ ನಡೆಸಬೇಕು ಎಂದು ಪ್ರತಿಯೊಬ್ಬ ಮಾನವನು ಬಯಸುತ್ತಾನೆ.
ಆದರೆ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ತನ್ನದೇ ಆದ ಶೈಲಿಯಲ್ಲಿ , ತನ್ನದೇ ಆದ ಕೆಲ ರೂಪುರೇಷೆಗಳನ್ನು ಅಳವಡಿಸಿಕೊಂಡು ಬದುಕಲು ಇಷ್ಟ ಪಡುತ್ತಾನೆ, ಕಾರಣ ಇಷ್ಟೇ ಈ ಜೀವನವೆಂಬ ಪ್ರಯಾಣದಲ್ಲಿ ನಾವೂ ಕೂಡ ಒಂದು ಸೊಗಸಾದ ನಿಲ್ದಾಣದಲ್ಲಿ ನಿಲ್ಲೇಬೇಕೆಂಬ ಮಹದಾಸೆಯಿಂದ.
ಈ ಸೊಗಸಾದ ಎಲ್ಲೆಯನ್ನು ನಿರ್ಮಿಸಿಕೊಳ್ಳುವ ಬರದಲ್ಲಿ ತಾನು ಎಷ್ಟೇ ಸವಾಲುಗಳು ಬಂದರು ಅವುಗಳನ್ನು ಲೆಕ್ಕಸುವುದಿಲ್ಲ, ತಾನು ಮತ್ತು ತನ್ನ ನಂಬಿ ಬದುಕು ಸಾಗಿಸುತ್ತಿರುವ ಕೆಲ ಜೀವಗಳಿಗೋಸ್ಕರ ಕೆಲವೊಮ್ಮೆ ಒಪ್ಪೊತ್ತಿನ ಊಟವನ್ನೂ ಲೆಕ್ಕಿಸದೆ, ಇದಕ್ಕೂ ಮೀರಿ ಪ್ರಾಣವನ್ನು ಲೆಕ್ಕಿಸದೇ ದುಡಿಯುತ್ತಾನೆ. ಕಾರಣ ಇಷ್ಟೆ ಎಲ್ಲರಂತೆ ತನ್ನ ಬದುಕೂ ಕೂಡ ಹಸನಾಗಬೇಕು, ನನ್ನವರು ಸಹ ಉಲ್ಲಾಸಮಯದ ಹುರುಪಿನೊಂದಿಗೆ ಬಾಳ್ಮೆ ನಡೆಸಬೇಕೆಂಬುದು.
ಕೆಲವೊಮ್ಮೆ ಒಂದೊಂದು ಪುಟ್ಟ ಸಂಸಾರಗಳು ತಮ್ಮ ಸಂಸಾರದಲ್ಲಿ ಎಷ್ಟೇ ಹುಳುಕಿದ್ದರು, ನೋವಿದ್ದರು, ಎಷ್ಟೇ ಕಷ್ಟವಿದ್ದರೂ ಅದನ್ನು ಹೊರ ಪ್ರಪಂಚಕ್ಕೆ ತೋರದಂತೆ ತಮ್ಮೆಲ್ಲಾ ಕುಂದು ಕೊರತೆಗಳನ್ನು ಬಾಹ್ಯ ಪ್ರಪಂಚದ ಮುಂದೆ ಪ್ರದರ್ಶಿಸದೆ ತಮ್ಮಲ್ಲಿಯೆ ಮುಚ್ಚಿಟ್ಟು ಬಾಳ್ವೆ ನಡೆಸುತ್ತಾರೆ, ಇನ್ನೂ ಕೆಲವರಂತೂ ತಾವು ಉಪವಾಸ ಇದ್ದರೂ ಸಹ ಅದನ್ನು ತೋರದೆ ಮರ್ಯಾದೆಗೆ ಅಂಜಿ ಬದುಕು ಸಾಗಿಸುತ್ತಾರೆ. ಇಂತಹ ಜನಗಳ ಧ್ಯೇಯ ಒಂದೇ ಅದೇ ಮಾನ-ಮರ್ಯಾದೆ .
ಪ್ರಸ್ತುತ ಇಂದಿಗೂ ನಮ್ಮ ಹಳ್ಳಿನಾಡಿನಲ್ಲಿ ಒಂದು ಪ್ರತೀತಿ ಇದೆ , ಅದೇ ಉಂಡಿದ್ದೀವೋ ಹಸ್ಕೊಂಡಿದ್ದೀವೋ ಯಾರ್ ತಾನೆ ಕಂಡಿಡಿತಾರೆ ಮರ್ಯಾದೆ ಮುಖ್ಯ ಅಂತ. ಹಾಗೆ ಇನ್ನೂ ಕೆಲವರಂತು ಮರ್ಯಾದೆ ಹೋದರೆ ತಮ್ಮ ಪ್ರಾಣವನ್ನು ಸಹ ಅದರ ಜೊತೆಗೆ ಕರೆದಕೊಂಡು ಹೋಗುತ್ತಾರೆ. ಅದಕ್ಕೆ ನಾನು ಮೇಲೆ ಮಾನ - ಮರ್ಯಾದೆ ಎಂಬ ಪದವನ್ನು ಬಾವಿಗೆ ಹೋಲಿಸಿರುವುದು.
ನೋಡಿ ಮಿತ್ರರೇ ಈ ಜೀವನ ಹೇಗೆ ಅಂದರೆ ನೀರ ಮೇಲಿನ ಗುಳ್ಳೆಯಂತೆ ಯಾರಿಗೂ ಶಾಶ್ವತವಲ್ಲ. ನಮ್ ನಮ್ ಜೀವನದ ಮುಕ್ತಾಯದ ಅಂತ ಬಂದಾಗ ಇಳಿದು ಹೋಗ್ತಾ ಇರೋದೆ. ಆದರೆ ಕೆಲವರಂತೂ ಅದಕ್ಕೂ ಮೀರಿ ಒಂದು ಹೆಜ್ಜೆ ಇನ್ನ ಮುಂದೆ ಹೋಗಿ ತಮ್ಮ ಜೀವನದ ಅಂತಿಮ ಘಟ್ಟ ತಲುಪದಿದ್ದರೂ ಅದನ್ನ ಅಲ್ಲಿಯೇ ಮೊಟಕುಗೊಳಿಸಿ ಜಿಗುಪ್ಸೆ ಎಂಬ ಮಹಾ ಕೋಪಾಗ್ನಿಯ ಕೆನ್ನಾಲಿಗೆಗೆ ಸಿಲುಕಿ ತಮ್ಮ ಪ್ರಾಣಕ್ಕೆ ತಾವೇ ಚ್ಯುತಿ ತಂದಿಟ್ಟುಕೊಳ್ಳುತ್ತಾರೆ.
ಈಗಿನ ನವಯುಗದಲ್ಲಿ ಜಿಗುಪ್ಸೆ ಎಂಬುದು ಹೇಗೆ ಎಂದರೆ ಕೆಲವೇ ಸೆಕೆಂಡುಗಳಲ್ಲಿ ನಮ್ಮ ನರಮೇದವನ್ನು ತಲುಪಿ ನಮ್ಮೆಲ್ಲಾ ಮಹದಾಸೆಗಳಿಗೆ ಬೀಗ ಜಡಿದು ನಿಂತಲ್ಲೇ, ಕೂತಲ್ಲೆ, ಪ್ರಾಣ ಪಕ್ಷಿ ಹಾರಿಹೋಗಬೇಕು ಹಾಗೆ ಮಾಡುತ್ತದೆ.ಕಾರಣ ಇಷ್ಟೇ ಪ್ರಸ್ತುತ ಜೀವನದಲ್ಲಿ ನವ ಯುವ ಸಮುದಾಯದ ಜಿಗುಪ್ಸೆ ಹೇಗೆ ಎಂದರೆ. ಹಿಂದಿನ ಕಾಲದ ರೀತಿ ಬದುಕು ಕಟ್ಟಿಕೊಳ್ಳಲು ವಿಫಲವಾದಾಗ ಬರುವ ಜಿಗುಪ್ಸೆಯಲ್ಲ. ಮನೆಯಲ್ಲಿ ಮೊಬೈಲ್ ತೆಗೆದು ಕೊಡಲಿಲ್ಲ ಎಂಬ ಕಾರಣದಿಂದ ಹಿಡಿದು ಮದುವೆ ಮಾಡಲಿಲ್ಲ ಎಂಬ ಕಾರಣದ ವರೆಗೂ ಅನೇಕ ಸಣ್ಣ ಪುಟ್ಟ ಕಾರಣಗಳಿಗೂ ಜಿಗುಪ್ಸೆಗೊಂಡು ತನ್ನ ಪ್ರಾಣದ ಹಂಗನ್ನೇ ತೊರೆಯುವ ಮನಸ್ಸು ಮಾಡುತ್ತಾನೆ. ನೋಡಿ ಯಾವುದೋ ಒಂದು ಸಣ್ಣ ಪುಟ್ಟ ಕಾರಣಗಳಿಗೆ ನಾವು ಎಡವಿ ನಮ್ಮ ಆತ್ಮವನ್ನ ನಾವೇ ನಶಿಸಿ ಹೋಗುವಂತ ಮಾಡುತ್ತೇವೆ, ಒಂದು ನಿಮಿಷ ಕೂತು ಯೋಚಿಸಿ . ನಿಮ್ಮ ಕೆಲ ಸಾಂಧರ್ಭಿಕ ಘಟನೆಗಳು ಅಷ್ಟು ಜಿಗುಪ್ಸೆ ತರಿಸಿದ್ದರೆ ನಿಮ್ಮವರೊಡನೆ ಸಮಾಲೋಚಿಸಿ. ಇದಕ್ಕೂ ಮೀರಿ ಹೇಳಬೇಕೆಂದರೆ ನಿಮ್ಮನ್ನ ನಂಬಿ ಬದುಕುತ್ತಿರುವವರ ಬಗ್ಗೆಯೂ ಕೂಡ ಯೋಚಿಸಿ. ನಿಮಗೆ ಜಿಗುಪ್ಸೆಯುಂಟಾದಾಗ ಆದಷ್ಟು ಜನರೊಂದಿಗೆ ಬೆರೆಯಿರಿ ಒಂಟಿತನವನ್ನು ಆದಷ್ಟು ದೂರ ಸರಿಸಿ ಇದು ಸಹ ಒಮ್ಮೊಮ್ಮೆ ಜಿಗುಪ್ಸೆಯ ಮೂಲ ಆಗಿರುತ್ತದೆ. ಆದರಿಂದ ನಿಮ್ಮ ಜೀವನದಲ್ಲಿ ಎಂತಹ ಜಿಗುಪ್ಸೆ ಇದ್ದರೂ ಒಂದು ನಿಮಿಷ ಶಾಂತ ರೀತಿಯಲ್ಲಿ ಕೂತು ಯೋಚಿಸಿ. ಆ ಒಂದು ಕ್ಷಣ ನಿಮ್ಮ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ. ನಿಮ್ಮನ್ನು ಅಸಾಮಾನ್ಯ ವ್ಯಕ್ತಿಯಾಗಿ ಪರಿವರ್ತಿಸುತ್ತದೆ.ಆದ್ದರಿಂದ ಎಂದಿಗೂ ಜಿಗುಪ್ಸೆಯ ಕೈಗೆ ನಿಮ್ಮ ಬುದ್ದಿ ಕೊಡಬೇಡಿ.
ಯಾಕಂದ್ರೆ ಈ ಪ್ರಪಂಚದಲ್ಲಿ ಪರಿಹಾರ ದೊರಕದಂತಿರುವ ಯಾವುದೇ ಪರಿಣಾಮಗಳು ಕೂಡ ಇಲ್ಲ. ಅಷ್ಟಕ್ಕೆ ನಾವು ನೂರು ವರ್ಷ ಬಾಳಿ ಬೆಳಗಬೇಕಿರುವ ಈ ಜೀವವನ್ನು ಜಿಗುಪ್ಸೆ ಎಂಬ ಹುಚ್ಚು ಕುದುರೆಯ ಕೈಗೆ ಕೊಟ್ಟು ಮೂರೇ ನಿಮಿಷದಲ್ಲಿ ಜೀವನ ಚಿತ್ರಣವನ್ನು ಮೊಟಕುಗೊಳಿಸುವುದು ಬೇಡ.
( ಇದನ್ನ ಇನ್ನೂ ಮುಂದಕ್ಕೆ ಶೀಘ್ರದಲ್ಲೇ ಮುಂದುವರಸುತ್ತೇನೆ)
:- ಹರೀಶ್. ಎಂ.ಎಸ್. ಮಂಚಿಬೀಡು.
ಅದ್ಭುತವಾದ ಲೇಖನ ಒಂದು ಕ್ಷಣ ಬರುವ ಕೆಟ್ಟ ಯೋಚನೆಗಳಿಗೆ ಜೀವನ, ಜೀವ ಬಲಿಕೊಡುವ ಹಲವಾರು ಯುವ ಜನತೆಗೆ ಎಚ್ಚರಿಕೆ ಗಂಟೆ ಈ ಲೇಖನವಾಗಿದೆ ಶುಭವಾಗಲಿ ಹರೀಶ್ ಸರ್ 😊✍️
ReplyDeleteಧನ್ಯವಾದಗಳು ಸಿರಿ
ReplyDelete