ಹೃದಯದ ವಿಷಯ

ಕರಾಗ್ರೆ ವಸತೇ ಲಕ್ಷ್ಮಿ! ಕರ ಮಧ್ಯೆ ಸರಸ್ವತಿ! ಕರ ಮೂಲ ಸ್ಥಿತಾಗೌರಿ! ಪ್ರಭಾತೆ ಕರ ದರ್ಶನಂ! ನಮ್ಮ ಸನಾತನ ಹಿಂದೂ ಧರ್ಮದಲ್ಲಿ ವೈದಿಕತೆಗೆ ಅದರದೇ ಆದ ಮಹತ್ವವಿದೆ. ವೇದಗಳ ಕಾಲದಲ್ಲಿ ಇದ್ದಂತಹ ನಮ್ಮ ಸಂಸ್ಕೃತಿಗೆ ತಕ್ಕಂತಹ ಆಚಾರ ವಿಚಾರಗಳು ಬಹಳ ಅರ್ಥ ಪೂರ್ಣವಾದಂತವು. ನಮ್ಮ ಕೆಲವು ಪೂರ್ವಜರು ಇಂದಿಗೂ ಕೂಡ ಅಂತಹ ಆಚರಣೆಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಆ ಸೈದ್ದಾಂತಿಕ ವಿಚಾರಗಳ ಪಟಣೆ, ಆಚರಣೆ, ಉಪದೇಶ, ಸಹಭಾಳ್ವೆ, ಇತ್ಯಾದಿಗಳನ್ನು ಗಮನಿಸಿದರೆ ಎತ್ತ ಸಾಗುತ್ತಿದೆ ನಮ್ಮ ಸಮಾಜ ಎಂಬ ಅರಿವಾಗುತ್ತದೆ. ವೇದಗಳ ಕಾಲದಲ್ಲಿ ಕೆಲವು ಸಂಕ್ರಾಮಿಕ ರೋಗಗಳನ್ನು ಹೊರತು ಪಡಿಸಿದರೆ ಮನುಜನ ಅಸ್ತಿತ್ವವನ್ನೇ ಕ್ಷಣಾರ್ಧದಲ್ಲಿ ಅಂತ್ಯಗೊಳಿಸುವಂತ ಯಾವ ಕಾಯಿಲೆಯೂ ಕೂಡ ಇರಲಿಲ್ಲ. ಮತ್ತು ಅವರ ಅಹಾರ ಪದ್ದತಿ ದಿನಕ್ಕೆ ಎರಡು ಭಾರಿ ಆಗಿದ್ದರೂ ಅವರು ಧೀರ್ಘಾಯುಷ್ಯರಾಗಿದ್ದರು. ಕಾರಣ ಅವರಲ್ಲಿದ್ದ ಕೆಲವು ಆಚಾರ- ವಿಚಾರಗಳು, ಅವರಲ್ಲಿದ್ದ ಆಹಾರ ಪದ್ದತಿ ಮತ್ತು ನಮ್ಮ ಸಂಸ್ಕೃತಿಯ ಪರಿಪಾಲನೆ. ನೀವು ಊಹಿಸಬಹುದು ನಾ ತಿಳಿಸಿದ ವಿಚಾರಕ್ಕೂ ಮೇಲೆ ತಿಳಿಸಿದ ಶ್ಲೋಕಕ್ಕೂ ಎಂತಣಿಂದೆತ್ತಣ ಸಂಭಂಧ ಎಂದು. ಆದರೆ ಖಂಡಿತವಾಗಿ ಅದಕ್ಕೆ ಪೂರಕವಾಗಿಯೇ ಇದೆ ಈ ನನ್ನ ಸಂದೇಶ. ಶ್ಲೋಕದ ತಾತ್ಪರ್ಯ:- ನಿಮ್ಮ ಬೆರಳ ತುದಿಯಲ್ಲಿ ಲಕ್ಷ್ಮೀ ವಾಸವಾಗಿದ್ದಾಳೆ. ನಿಮ್ಮ ಕೈ ಹಸ್ತದ ಮಧ್ಯದಲ್ಲಿ ಸರಸ್ವತಿ ವಾಸವಾಗಿದ್ದಾಳೆ...