ಹೃದಯದ ವಿಷಯ
ಕರಾಗ್ರೆ ವಸತೇ ಲಕ್ಷ್ಮಿ!
ಕರ ಮಧ್ಯೆ ಸರಸ್ವತಿ!
ಕರ ಮೂಲ ಸ್ಥಿತಾಗೌರಿ!
ಪ್ರಭಾತೆ ಕರ ದರ್ಶನಂ!
ನಮ್ಮ ಸನಾತನ ಹಿಂದೂ ಧರ್ಮದಲ್ಲಿ ವೈದಿಕತೆಗೆ ಅದರದೇ ಆದ ಮಹತ್ವವಿದೆ. ವೇದಗಳ ಕಾಲದಲ್ಲಿ ಇದ್ದಂತಹ ನಮ್ಮ ಸಂಸ್ಕೃತಿಗೆ ತಕ್ಕಂತಹ ಆಚಾರ ವಿಚಾರಗಳು ಬಹಳ ಅರ್ಥ ಪೂರ್ಣವಾದಂತವು. ನಮ್ಮ ಕೆಲವು ಪೂರ್ವಜರು ಇಂದಿಗೂ ಕೂಡ ಅಂತಹ ಆಚರಣೆಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಆ ಸೈದ್ದಾಂತಿಕ ವಿಚಾರಗಳ ಪಟಣೆ, ಆಚರಣೆ, ಉಪದೇಶ, ಸಹಭಾಳ್ವೆ, ಇತ್ಯಾದಿಗಳನ್ನು ಗಮನಿಸಿದರೆ ಎತ್ತ ಸಾಗುತ್ತಿದೆ ನಮ್ಮ ಸಮಾಜ ಎಂಬ ಅರಿವಾಗುತ್ತದೆ. ವೇದಗಳ ಕಾಲದಲ್ಲಿ ಕೆಲವು ಸಂಕ್ರಾಮಿಕ ರೋಗಗಳನ್ನು ಹೊರತು ಪಡಿಸಿದರೆ ಮನುಜನ ಅಸ್ತಿತ್ವವನ್ನೇ ಕ್ಷಣಾರ್ಧದಲ್ಲಿ ಅಂತ್ಯಗೊಳಿಸುವಂತ ಯಾವ ಕಾಯಿಲೆಯೂ ಕೂಡ ಇರಲಿಲ್ಲ. ಮತ್ತು ಅವರ ಅಹಾರ ಪದ್ದತಿ ದಿನಕ್ಕೆ ಎರಡು ಭಾರಿ ಆಗಿದ್ದರೂ ಅವರು ಧೀರ್ಘಾಯುಷ್ಯರಾಗಿದ್ದರು. ಕಾರಣ ಅವರಲ್ಲಿದ್ದ ಕೆಲವು ಆಚಾರ- ವಿಚಾರಗಳು, ಅವರಲ್ಲಿದ್ದ ಆಹಾರ ಪದ್ದತಿ ಮತ್ತು ನಮ್ಮ ಸಂಸ್ಕೃತಿಯ ಪರಿಪಾಲನೆ. ನೀವು ಊಹಿಸಬಹುದು ನಾ ತಿಳಿಸಿದ ವಿಚಾರಕ್ಕೂ ಮೇಲೆ ತಿಳಿಸಿದ ಶ್ಲೋಕಕ್ಕೂ ಎಂತಣಿಂದೆತ್ತಣ ಸಂಭಂಧ ಎಂದು. ಆದರೆ ಖಂಡಿತವಾಗಿ ಅದಕ್ಕೆ ಪೂರಕವಾಗಿಯೇ ಇದೆ ಈ ನನ್ನ ಸಂದೇಶ.
ಶ್ಲೋಕದ ತಾತ್ಪರ್ಯ:-
ನಿಮ್ಮ ಬೆರಳ ತುದಿಯಲ್ಲಿ ಲಕ್ಷ್ಮೀ ವಾಸವಾಗಿದ್ದಾಳೆ.
ನಿಮ್ಮ ಕೈ ಹಸ್ತದ ಮಧ್ಯದಲ್ಲಿ ಸರಸ್ವತಿ ವಾಸವಾಗಿದ್ದಾಳೆ.
ನಿಮ್ಮ ಹಸ್ತದ ಕೆಳಭಾಗದಲ್ಲಿ ಗೌರಿ ವಾಸವಾಗಿದ್ದಾಳೆ.
ಬೆಳಿಗ್ಗೆ ಎದ್ದ ಕೂಡಲೆ ಇವರೆಲ್ಲರ ದರ್ಶನವನ್ನು ನಮ್ಮ ಕೈಯಲ್ಲೇ ಮಾಡುತ್ತೇವೆ ಎಂಬುದು. ಮತ್ತು ಇದು ನಮ್ಮ ಪೂರ್ವಜರು ವೈದಿಕತೆಯ ಮೇಲೆ ಇಟ್ಟಂತಹ ನಂಬಿಕೆ.
ಬೆಳಿಗ್ಗೆ ಎದ್ದು ಕಣ್ಣು ಬಿಡುವ ಮುನ್ನ ನಾವು ಒಂದು ಕ್ಷಣ ನಾವು ನಮ್ಮ ಕೈಗಳನ್ನು ಒಂದಕ್ಕೊಂದು ಉಜ್ಜಿಕೊಂಡು ನಮ್ಮ ಕೈಗಳನ್ನು ನೋಡಿಕೊಂಡು ದಿನ ಪ್ರಾರಂಭಿಸಬೇಕು ಮತ್ತು ಇದರೊಡನೆ ಮೇಲೆ ತಿಳಿಸಿದ ಶ್ಲೋಕ ಪಠಿಸಬೇಕು.
ನಾವು ಮಾನವರು ಯಾರಾದರು ಹಾಯ್ ಹರೀಶ್ ಹೇಗಿದ್ದೀರಾ, ಎಂದರೆ ಚೆನ್ನಾಗಿದ್ದೇವೆ ಎಂದು ಹೇಳಲು ಮೂಲ ಕಾರಣ ನಮ್ಮ ದೇಹದ ನಾಡಿ ಮಿಡಿತ. ದೇಹದ ಸ್ಥಿಮಿತಿ ಕಾಯ್ದು ಕೊಳ್ಳುವುದು. ಮತ್ತು ನಮ್ಮ ದೇಹದ ಪ್ರತಿ ಅಂಗಾಂಗ ಕೂಡ ನಮ್ಮ ಮಾತು ಕೇಳುವುದು. ಈಗೆ ಹಲವಾರು ವಿಚಾರಗಳಿಗೆ ನಮ್ಮ ಮನಸ್ಸಿನ ಮಾತಿಗೆ ನಮ್ಮ ಹೃದಯದಿಂದ ಅಂಗಾಂಗಗಳಿಗೆ ವಿಚಾರ ವಿನಿಮಯವಾಗಿ ನಿಯಂತ್ರಣ ಕಾಪಾಡುವುದು.
ನಮಗೆ ಪಂಚೇಂದ್ರಿಯಗಳೆಂಬ ಐದು ಇಂದ್ರಿಯಗಳಿವೆ. ಹಾಗೆಯೇ ಕೂಡ ಅವೆಲ್ಲವನ್ನೂ ನಿಗ್ರಯಿಸಲು ಜ್ಞಾನೇಂದ್ರಿಯವೆಂಬ ಕ್ಯಾಪ್ಟನ್ ಇರುತ್ತದೆ ಅದೇ ಮೆದುಳು. ಆ ಮೆದುಳನ್ನು ನಿಗ್ರಹಿಸಲು ಇರುವ ಇನ್ನೊಬ್ಬ ಕ್ಯಾಪ್ಟನ್ ಹೃದಯ ❤. ಇಂದು ಮಾನವ ತನ್ನ ನಾಳೆಯ ಒಳಿತಿನ ದುರಾಸೆಯಿಂದ ತನ್ನ ಮೇಲೆ ಒತ್ತಡ ಹಾಕಿಕೊಳ್ಳುವುದಲ್ಲದೆ, ಹೃದಯದ ಮೇಲೂ ಹೇರುತಿದ್ದಾನೆ. ಕೈ ಮುಷ್ಟಿಯಷ್ಟಿರುವ ಹೃದಯ ನಮ್ಮ ಪೂರ್ಣ ಒತ್ತಡ ಹೊರಬೇಕಾದರೆ ಹೇಗೆ ಸಾಧ್ಯ. ಧನಾತ್ಮಕವಾಗಿ ಚಿಂತಿಸುತ್ತಿದ್ದ ಮಾನವ ಇಂದು ಋಣಾತ್ಮಕವಾಗಿ ಚಿಂತಿಸಲು ಶುರು ಮಾಡಿದ್ದಾನೆ. ಕಾರಣ ಅವನಿಗೂ ಗೊತ್ತು ಆದರು ಬದುಕಿನ ಸೆಣೆಸಾಟ, ಓಡುತ್ತಿರುವ ಪ್ರಪಂಚದಲ್ಲಿ ಇರುವ ಸ್ಪರ್ಧಾ ಜಗತ್ತು. ಇಲ್ಲಿ ತಾನೂ ಇತರರಂತೆ ಮುಂದೆ ಬರಬೇಕೆಂಬ ಹಂಬಲ ಮತ್ತು ತನ್ನ ನಂಬಿ ಬದುಕುತ್ತಿರುವ ಪರಿವಾರದವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಬಯಕೆ. ಆದರೆ ಅವನು ಒಂದು ವಿಚಾರ ಮರೆತಿದ್ದಾನೆ, ತಾನು ಇದ್ದರೆ ಸಂಸಾರ ಹೇಗಿರುತ್ತದೆ ಎಂಬ ಆಶಾದಾಯಕ ಕನಸು ಕಂಡ ಅವನು ತಾನು ಇಲ್ಲದಿದ್ದರೆ ತನ್ನನ್ನೇ ನಂಬಿ ಬದುಕುತ್ತಿರುವ ಸಂಸಾರದ ನಿರಾಶಾದಾಯಕ ಕನಸು ಕಾಣುವುದರಲ್ಲಿ ವಿಫಲನಾಗಿರುತ್ತಾನೆ. ನೋಡಿ ಮಿತ್ರರೆ ನಾಳೆ ಎಂಬುದು ನಾವಿರಲಿ ಇಲ್ಲದಿರಲಿ ಕಾಲಚಕ್ರದ ಸುಳಿಗೆ ಸಿಕ್ಕಿ ಉರುಳುತ್ತದೆ. ಈ ಚಕ್ರದಲ್ಲಿ ನಾವು ಪಾತ್ರಧಾರಿಗಳಾಗಿರುತ್ತೇವೆಯೇ ಹೊರತು ಸೂತ್ರಧಾರಿಗಳಲ್ಲ. ಇಲ್ಲಿ ಸೂತ್ರಧಾರಿಗಳೆಂಬ ಪಟ್ಟ ಹೊತ್ತವರು ವೈದ್ಯರು. ಹಿಂದಿನ ಕಾಲದಲ್ಲಿ ಆಯುರ್ವೇದ ಪಂಡಿತ ಎಂಬ ಒಬ್ಬ ವ್ಯಕ್ತಿ ದೇಹದ ಸಂಪೂರ್ಣ ಜವಾಬ್ದಾರಿ ಹೊತ್ತು ನಮ್ಮ ದೇಹಕ್ಕೆ ಏನೇ ಆದರು ಸರಿಪಡಿಸುತಿದ್ದ. ಇಂದೂ ಬೆಳೆಯುತ್ತಿರುವ ಪ್ರಪಂಚದಲ್ಲಿ ನಮ್ಮ ಪ್ರತಿಯೊಂದು ಅಂಗಾಂಗಕ್ಕು ಒಬ್ಬರು ವೈದ್ಯರು ಇದ್ದಾರೆ ಅಂದರೆ ನೀವೇ ಯೋಚಿಸಿ.
ಸನಾತನ ಧರ್ಮದಲ್ಲಿ ನಮ್ಮ ಪೂರ್ವಜರು ಸಾಕಷ್ಟು ಆಚಾರ-ವಿಚಾರ ಪಾಲಿಸುತ್ತಿದ್ದು ದೇವರ ಮೇಲಿಟ್ಟಿರುವ ನಂಬಿಕೆ ಮತ್ತು ಭಯದಿಂದ. ಆ ದೇವರನ್ನು ಒಲಿಸಿಕೊಳ್ಳಲು ಅವರು ಕಂಡುಕೊಂಡಿದ್ದಂತಹ ಮಾರ್ಗ ಉಪವಾಸ ವೆಂಬ ಮಂತ್ರ ದಂಡ. ನಾವು ಕೆಲವು ಹಳೆಯ ಚಲನಚಿತ್ರಗಳಲ್ಲಿ ಗಮನಿಸಿದ್ದೇವೆ ಋಷಿ ಮುನಿಗಳು ಯಜ್ಞ ಯಾಗಾದಿಗಳನ್ನು ಮಾಡುತ್ತಿದ್ದಾಗ ಅನುಸರಿಸುತ್ತಿದ್ದ ಪದ್ದತಿ. ಇದರಿಂದ ಮಾನವನಿಗೆ ಅನೇಕ ಬಗೆಯ ಪ್ರಯೋಜನಗಳಾಗುತ್ತಿದ್ದವು. ಉದಾಹರಣೆಗೆ- ಅಸಿಡಿಟಿ, ರಕ್ತದೊತ್ತಡ, ಶ್ವಾಸಕೋಸ ಸಮಸ್ಯೆಗಳು, ಹೃದಯ ಸಂಭಂಧಿ ಕಾಯಿಲೆಗಳು, ಹೃದಯಾಘಾತ, ರೋಗ ನಿರೋಧಕ ಗುಣ, ನೆನಪಿನ ಶಕ್ತಿ ಈಗೆ ಹಲವಾರು ಖಾಯಿಲೆಗಳ ಪರಿಚಯವಿಲ್ಲದೆ ಆರಾಮ ದಾಯಕ ಜೀವನವನ್ನು ನಡೆಸುತ್ತಿದ್ದರು. ಆದರೆ ಈಗಿನ ಕಾಲಘಟ್ಟದಲ್ಲಿ ಪ್ರಪಂಚ ಮುಂದುವರೆದಂತೆಲ್ಲ ಒಂದೊಂದೇ ಹೊಸ ಆಚಾರ- ವಿಚಾರ ರೂಡಿಸಿಕೊಂಡು ಪೂರ್ವ ಆಚರಣೆಗಳನ್ನು ಕಡೆ ಗಣಿಸಿಕೊಂಡು ನಮ್ಮಗಳ ಘೋರಿ ನಾವೇ ನಿರ್ಮಿಸಿ ಕೊಳ್ಳುತಿದ್ದೇವೆ. 100 ವರ್ಷ ಆಯುಷ್ಯವಿರುವ ಮಾನವ ವಯಸ್ಸಿನ ಪರಿವಿಲ್ಲದೆ 50 ಕ್ಕೆ ತನ್ನ ಆಯುಷ್ಯ ಕಳೆದುಕೊಳ್ಳುತ್ತಿದ್ದಾನೆ. ಮತ್ತು ತನ್ನ ಮರಣ ಕರೆ ಯಾವಾಗ ಬರುತ್ತೋ ಎಂಬ ಭಯದಿಂದನೇ ಜೀವನ ಸಾಗಿಸುತಿದ್ದಾನೆ. ಅದರಲ್ಲಂತೂ ಈ ಹೃದಯ ಸ್ತಂಭನ ಎಂಬ ಮಹಾಮಾರಿ ಇತ್ತೀಚೆಗೆ ಹದಿಹರೆಯದ ಮಕ್ಕಳನ್ನೂ ಕೂಡ ಬಿಡದೆ ಕಾಡುತ್ತಿದೆ. ಇಂದಿನ ಮಾನವ ಸಮಾಜಕ್ಕೆ ಹೆಚ್ಚು ಕೆಲಸವಿಲ್ಲ ಆದ್ದರಿಂದ ಮಾನವನಲ್ಲಿ ಕೊಬ್ಬು ಎತೇಚ್ಚವಾಗಿ ಬೆಳೆದು ಮಾನವನನ್ನು ದೈತ್ಯನನ್ನಾಗಿಸುತ್ತಿದೆ. ಅದರಲ್ಲಂತೂ ಕೆಲವರು ದೇಹದಂಡನೆ ಮಾಡಿ ತಮ್ಮ ದೈತ್ಯಕಾರದ ತೂಕ ಕಳೆದುಕೊಳ್ಳಲು ಇಲ್ಲ ಸಲ್ಲದ ವ್ಯಾಯಾಮಗಳ ಮೊರೆ ಹೋಗಿದ್ದಾರೆ. ಆದರೆ ಅವರಿಗೆ ಅರಿವಿಲ್ಲ ಇವೆಲ್ಲ ಅವರನ್ನು ಅವರಿಗೇ ಅರಿವಿಲ್ಲದಂತೆ ನಾಶ ಪಡಿಸುತ್ತಿವೆ ಎಂದು. ನೀವು ಈಗ ನಾನು ಹೇಳುವ ವಿಷಯ ನಂಬಲು ಕೂಡ ಅನುಮಾನ ಪಡುತ್ತೀರ ಏಕೆಂದರೆ ಆ ವಿಷಯವೇ ಹಾಗೆ ಅದೇ ಉಪವಾಸವೆಂಬ ದಿವ್ಯೌಷಧ. ನೀವು ಕೇಳಿರಬಹುದು ಇತ್ತೀಚೆಗೆ ನಡೆದ ಒಂದು ಅಧ್ಯಯನಕೇಳಿರಬಹುದು ಹೃದಯಾಘಾತಕ್ಕೆ 80% ಪುರುಷರು ಒಳಪಟ್ಟರೆ ಮಹಿಳೆಯರು ಕೇವಲ 20% ಅಷ್ಟೇ ಒಳಪಡುತ್ತಾರೆ. ಇದಕ್ಕೆ ಕಾರಣವೇನೆಂದು ಹುಡುಕಲು ಹೊರಟಾಗ ಅವರಿಗೆ ಸಿಕ್ಕ ಉತ್ತರ ಉಪವಾಸ. ಈ ಆರ್ಟಿಕಲ್ ಓದುತ್ತಿರುವ ನೀವು ಗ್ರಾಮೀಣ ಭಾಗದವರಾಗಿದ್ದರೆ ನಿಮಗೆ ಅನುಭವವಿರುತ್ತದೆ ಅದೇನೆಂದರೆ ನಿಮ್ಮ ತಾಯಂದಿರು ಮನೆಯಲ್ಲಿ ವಾರ-ವಪ್ಪತ್ತು ಎಂದು. ಮನೆಯ ದೇವರ ವಾರವೆಂದು, ತನ್ನ ಮಗನಿಗೆ ಸರಕಾರಿ ಕೆಲಸ ಸಿಗಲೆಂದು, ತನ್ನ ಮಗಳಿಗೆ ಒಳ್ಳೆಯ ವರ ಸಿಗಲೆಂದು, ತನ್ನ ಗಂಡನಿಗೆ ಬಡ್ತಿ ಸಿಗಲೆಂದು, ಮತ್ತು ಕೆಲವರು ಸಂತಾನ ಸಿಗಲೆಂದು ಈಗೆ ಹಲವಾರು ಕಾರಣಗಳಿಂದ ಉಪವಾಸ ಮಾಡುತ್ತಾರೆ ಇದರ ಪ್ರಯೋಜನವೇನೆಂದರೆ ಈಗೆ ಅವರು ಮಾಡುವ ಉಪವಾಸದಿಂದ ನಮ್ಮ ಜಠರದಲ್ಲಿ ಶೇಖರಣೆಯಾಗಿದ್ದ ಹೈಡ್ರೋಕ್ಲೋರಿಕ್ ಆಮ್ಲ ನಮಗೆ ಹಸಿವಾದಾಗ ಇದೇ ಆಹಾರವಾಗಿ ಬದಲಾಗುತ್ದದೆ. ಇದರಿಂದ ನಮಗೆ ಎದುರಾಗುವ ರಕ್ತದೊತ್ತಡ, ಸ್ಥೂಲಕಾಯ ರೋಗಗಳು, ಹೃದಯಾಘತದಂತಹ ಸಮಸ್ಯೆಗಳು ದೂರವಾಗುತ್ತವೆ. ವಿಜ್ಞಾನದ ಪ್ರಕಾರ ಪ್ರತಿಯೊಬ್ಬ ಮಾನವನು 15 ದಿನಕ್ಕೆ ಒಮ್ಮೆಯಾದರು ಉಪವಾಸ ವಿರಬೇಕು, ಆ ಸಮಯದಲ್ಲಿ ನೀರಾಹಾರ ಬಿಟ್ಟು ಚಯಾಪಚಯ ಕ್ರಿಯೆಗೆ ಒಳ ಪಡುವ ಯಾವುದೇ ಲಘು ಆಹಾರವನ್ನು ಕೂಡ ಸೇವಿಸಬಾರದು. ಈಗೆ ಉಪವಾಸವಿರುವುದರಿಂದ ನಮ್ಮ ದೇಹದಲ್ಲಿನ ಕೊಬ್ಬು, ಸಕ್ಕರೆ ಪ್ರಮಾಣ, ಮತ್ತು ಕೆಲವು ರೋಗ ಸಂಭಂದಿ ಕಿಣ್ವಗಳು ಹತೋಟಿಯಲ್ಲಿದ್ದು ನಮ್ಮ ದೇಹದ ನಿಯಂತ್ರಣವನ್ನು ಸರಿದೂಗಿಸುತ್ತದೆ. ನೋಡಿ ಇರುವುದೊಂದೇ ಜೀವನ ಸಾಧ್ಯವಾದರೆ ಎಲ್ಲರೂ ಕೂಡಿ ಬಾಳೋಣ. ಆದರೆ ನಮ್ಮ ನಿರ್ಲಕ್ಷ್ಯ ತನದಿಂದ ನಮ್ಮ ನಂಬಿದ ಹೃದಯಗಳಿಗೆ ಮೋಸ ಮಾಡದೆ, ಅವುಗಳ ಎದೆಗೆ ಭಾರವಾಗದೆ, ಅವುಗಳನ್ನು ಒಂಟಿ ಮಾಡದೆ, ನಮ್ಮಗಳ ಆರೋಗ್ಯದ ಕಾಳಜಿ ನಾವೇ ವಹಿಸಿಕೊಂಡು ಅರೋಗ್ಯದಿಂದ ಬಾಳೋಣ.
ಮತ್ತೆ ಹಿಂದಿರುಗಿ ಹಿಂದಿನ ಜಗತ್ತಿಗೆ,
ನಮ್ಮ ಸಂಸ್ಕೃತಿಯ ಕಡೆಗೆ,
ನಮ್ಮ ಸಾಂಪ್ರದಾಯಿಕತೆಯ ಕಡೆಗೆ,
ಉಪವಾಸದ ಮಹತ್ವಕ್ಕೆ ಚಿಕ್ಕ ನಿದರ್ಶನ:-
ಇನ್ನೂ ಚೆನ್ನಾಗಿ ಅರ್ಥ ಮಾಡಿಸಬೇಕೆಂದರೆ ಯಾರಾದರು ಪುರೋಹಿತರು ಅಥವಾ ಅರ್ಚಕರು ಈ ಹೃದಯಾಘಾತದಿಂದ ಮೃತಪಟ್ಟಿದ್ದಾರೆಯೆ!! !!!!!!!!
ಇನ್ನೂ ಮುಗಿದಿಲ್ಲ,
ಮುಂದುವರೆಯೋಣ ಮತ್ತಷ್ಟು ❤ ದ ವಿಚಾರಗಳೊಂದಿಗೆ.
🖋📚 ಹರೀಶ ಎಂ.ಎಸ್.ಮಂಚಿಬೀಡು.
Comments
Post a Comment