ಯುವ ಸಮುದಾಯ ಪರಿಸರ ಉಳಿವಿಗೆ ಮುಂದಾಗಲಿ :: HARISHA. MS
ಯುವ ಸಮುದಾಯ ಪರಿಸರ ಉಳಿವಿಗೆ ಮುಂದಾಗಲಿ:
ವಿಜಯ ಕರ್ನಾಟಕ ಮಂಡ್ಯ : 10 -07-2014
ಯುವ ಸಮುದಾಯ ಪರಿಸರ ಉಳಿವಿಗೆ ಮನಸ್ಸು ಮಾಡಬೇಕು.ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ವಿಕ ಪರಿಸರ ರಾಯಭಾರಿ ಹರೀಶ್ ತಿಳಿಸಿದರು.
ಕೆ.ಆರ್.ಪೇಟೆ ತಾಲ್ಲೂಕಿನ ಆಲೇನಹಳ್ಳಿ ಗ್ರಾಮದ ಸರಕಾರಿ ಶಾಲಾ ಆವರಣದಲ್ಲಿ "" ಹಸಿರೇ ಉಸಿರು "" ಎಂಬ ಶೀರ್ಷಿಕೆಯಡಿ ನೂರು ಸಸಿಗಳನ್ನು ವಿದ್ಯಾರ್ಥಿಗಳಿಗೆ ದತ್ತು ನೀಡಿ ಅವುಗಳನ್ನು ಪೋಷಿಸಿ ಬೆಳೆಸುವ ಜವಬ್ದಾರಿಯನ್ನು ವಹಿಸಲಾಯಿತು.
ಬಳಿಕ ಮಾತನಾಡಿದ ಹರೀಶ್ ಪರಿಸರ ನಾಶದಿಂದ ಆಗುತ್ತಿರುವ ದುಷ್ಪರಿಣಾಮದ ಬಗ್ಗೆ ಜನಸಾಮಾನ್ಯರಿಗೆ ತಿಳಿಸುವ ಕೆಲಸವಾಗಬೇಕು ಆಗ ಮಾತ್ರ ಪರಿಸರದ ಉಳಿವು ಸಾಧ್ಯ. ಪ್ರಸ್ತುತ ದಿನಗಳಲ್ಲಿ ಮನುಷ್ಯ ತನ್ನ ದುರಾಸೆಯಿಂದ ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಈ ಕಾರಣ ಈಗಾಗಲೇ ಸಕಾಲಕ್ಕೆ ಮಳೆಯಾಗದೆ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದೇವೆ ,ಇದೇ ರೀತಿ ಪರಿಸರದ ಮೇಲೆ ದಬ್ಬಾಳಿಕೆ ನಡೆದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
( ಕೆ.ಆರ್.ಪೇಟೆ ತಾಲ್ಲೂಕಿನ ಆಲೇನಹಳ್ಳಿ ಗ್ರಾಮದ ಸರಕಾರಿ ಶಾಲಾ ಆವರಣದಲ್ಲಿ ವಿಕ ಗ್ರೀನ್ ಅಂಬಾಸಿಡರ್ ಹರೀಶ್ "ಹಸಿರೇ ಉಸಿರು " ಎಂಬ ಶೀರ್ಷಿಕೆಯಡಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.)
ಪರಿಸರ ಸಂರಕ್ಷಣಣೆಗೆ ಯುವ ಸಮುದಾಯ ಮುಂದಾಗಬೇಕು. ಮುಂದಿನ ದಿನಗಳಲ್ಲಿ ಉತ್ತಮ ವಾತಾವರಣವನ್ನು ನಿರ್ಮಿಸಿಕೊಳ್ಳುವ ದೃಷ್ಟಿಯಿಂದ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು ಎಂದು ಸಲಹೆ ನೀಡಿದರು.
ಹಲವಾರು ವರ್ಷಗಳಿಂದ ಬೆಳೆದ ಮರಗಳನ್ನು ಕಡಿಯುವುದು ಸುಲಭ ,ಆದರೆ,ಅದೇ ಮರಗಳನ್ನು ಬೆಳೆಸುವುದು ಕಷ್ಟ.ಪರಿಸರ ಇದ್ದರೆ ಉತ್ತಮ ಗಾಳಿ ಸಿಗುತ್ತದೆ, ಇದರಿಂದ ಉತ್ತಮ ಆರೋಗ್ಯ ಕಾಪಾಡಿ ಕೊಳ್ಳಬಹುದು ಇದರ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.
ಮುಖ್ಯ ಶಿಕ್ಷಕ ಪಿ.ಜಿ.ವೆಂಕಟರಾಮನ್ ಮಾತನಾಡಿ ,ಓಜೋನ್ ಪದರ ಕ್ಷೀಣಿಸುತ್ತಿರುವುದಕ್ಕೆ ಮಾನವ ಪರಿಸರದ ಮೇಲೆ ನಡೆಸುತ್ತಿರುವ ದಬ್ಬಾಳಿಕೆ ಪ್ರಮುಖ ಕಾರಣವಾಗಿದೆ .ಕಸವನ್ನು ಎಲ್ಲೆಂದರಲ್ಲಿ ಬಿಸಾಡಬಾರದು ಇದರಿಂದ ವಾತಾವರಣ ಕಲುಷಿತಗೊಂಡು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಪರಿಸರ ಸಂರಕ್ಷಣೆ ಅತ್ಯವಷ್ಯಕ ಎಂದು ಸಲಹೆ ನೀಡಿದರು.
Comments
Post a Comment