ಯುವಕರಿಗೆ ಸ್ವಾಮಿ ವಿವೇಕಾನಂದ ಕರೆ : ಹರೀಶ್. ಎಂ.ಎಸ್.

ಈ ದೇಶವನ್ನು ಪರಿವರ್ತಿಸುವವರು ಯುವಕರು
   
ಸ್ವಾಮಿ ವಿವೇಕಾನಂದರ ಬರವಸೆಯೆಲ್ಲ ಈಗಿನ ಯುವಕರ ಮೇಲೆ ನಿಂತಿದೆ. ಇದರಿಂದ ಕೆಲಸ ಮಾಡುವ ಯುವಕರು ನಮಗೆ ಬೇಕಾಗಿದ್ದಾರೆ.ಅನಂತರ ಅವರು ಕೆಚ್ಚೆದೆಯ ವೀರರಂತೆ ಕೆಲಸ ಮಾಡುವರು.ನಾನು ಕೆಲಸ ಹೇಗೆ ಮಾಡಬೇಕೆಂಬುದನ್ನು ಹೇಳಿರುವೆನು.ನಾನು ಅದಕ್ಕೆ ನನ್ನ ಜನ್ಮವನ್ನೆ ಕೊಟ್ಟಿರುವೆನು.ನಾನು ಜಯಶೀಲನಾಗದೆ ಹೋದರೆ ಅದನ್ನು ಮಾಡಲು ಮತ್ತೊಬ್ಬರು ಬರುವರು.ಹೋರಾಟದಲ್ಲೆ ನನಗೆ ತೃಪ್ತಿ.
        ಆದರೆ ವ್ಯಕ್ತಿಗಳೆಲ್ಲಿ.?ಅದೇ ಪ್ರಶ್ನೆ.ಈಗಿನ ಯುವಕರೆ ನನ್ನ ಭರವಸೆಯೆಲ್ಲಾ ನಿಮ್ಮ ಮೇಲೆ ನಿಂತಿದೆ‌.ನಿಮ್ಮ ದೇಶದ ಕರೆಗೆ ಕಿವಿಗೊಡುವಿರೇನು? ನನ್ನ ಮಾತಿನಲ್ಲಿ ನಿಮಗೆ ನಂಬಿಕೆ ಇರುವುದಾದರೆ ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಭವ್ಯವಾದ ಭವಿಷ್ಯವಿದೆ.ನಿಮ್ಮಲ್ಲಿ ನಿಮಗೆ ಅಪಾರವಾದ ನಂಬಿಕೆ ಬೆಳೆಯಲಿ .ಮಗುವಾಗಿದ್ದಾಗ ನನ್ನಲ್ಲಿ ಶ್ರದ್ಧೆ ಇತ್ತು.ಅದನ್ನು ನಾನು ಈಗ ಅನುಸರಿಸಿರುವೆನು.ಅನಂತ ಶಕ್ತಿ ಪ್ರತಿ ಜೀವಿಯ ಅಂತರಾಳದಲ್ಲಿ ಇರುವುದು ಎಂಬ ಆತ್ಮ ಶ್ರದ್ಧೆನಿಮ್ಮಲ್ಲಿರಲಿ.ನೀವು ಇಡೀ ಭರತ ಖಂಡವನ್ನೆ ಜಾಗೃತಗೊಳಿಸುವಿರಿ.ಆಗ ನಾವು ಜಗತ್ತಿನ ಇತರ ದೇಶಗಳಿಗೆಲ್ಲ ಹೋಗುವೆವು.ಜಗತ್ತಿನಲ್ಲಿ ರಾಷ್ಟ್ರಗಳನ್ನು ನಿರ್ಮಾಣ ಮಾಡುತ್ತಿರುವ ಶಕ್ತಿಯೊಂದಿಗೆ ನಮ್ಮ ಭಾವನೆಯೂ ಮಿಲನವಾಗುವುದು.ಭರತ ಖಂಡದಲ್ಲಿ ಮತ್ತು ವಿದೇಶಗಳಲ್ಲಿ ಎಲ್ಲಾ ಜನಾಂಗಗಳ ಜೀವನದ ಅಂತರಾಳಕ್ಕೆ ನಾವು ಹೋಗಬೇಕು. ಇದನ್ನು ಸಾಧಿಸುವುದಕ್ಕೆ ನಾವು ಕೆಲಸ ಮಾಡಬೇಕು.ಆ ಕಾರ್ಯಕ್ಕೆ ನನಗೆ ಯುವಕರು ಬೇಕು."ಆಶಿಷ್ಟರೂ,ಬಲಿಷ್ಟರೂ,ದೃದಿಷ್ಟರು,ಮೇಧಾವಿಗಳು ಯುವಕರು ಮಾತ್ರ ಭಗವಂತನನ್ನು ಪಡೆಯಬಹುದು".ಎಂದು ವೇದ ಸಾರುವುದು.
       ಒಳ್ಳೆಯ ಶೀಲವಂತರಾದ ,ಬುದ್ದಿವಂತರಾದ,ತಮ್ಮ ಸರ್ವಸ್ವವನ್ನು ತ್ಯಾಗ ಮಾಡುವಂತಹ ,ವಿಧೇಯರಾಗಿರುವ ನನ್ನ  ಭಾವನೆಗಳನ್ನು ಕಾರ್ಯರೂಪಕ್ಕೆ ತರಲು ತಮ್ಮ ಪ್ರಾಣವನ್ನೆ ಅರ್ಪಿಸಬಲ್ಲ ಯುವಕರ ಮೇಲೆ ನನ್ನ ಭವಿಷ್ಯದ ಹಾರೈಕೆಯೆಲ್ಲ ನಿಂತಿದೆ.ಅದರಿಂದ ದೇಶಕ್ಕೂ ಅವರಿಗೂ ಕಲ್ಯಾಣವಾಗುವುದು.ಇಲ್ಲದಿದ್ದಲ್ಲಿ ಸಾಮಾನ್ಯ ಯುವಕರು ಬರುತ್ತಿದ್ದಾರೆ - ಬರುತ್ತಿರುತ್ತಾರೆ - ಅವರ ಮುಖದಲ್ಲಿ ಗೋಳು ಸುರಿಯುತ್ತಿರುತ್ತದೆ. ಅವರ ಹೃದಯ ವೀರ್ಯ ಹೀನವಾಗಿದೆ - ಅವರ ದೇಹ ದುರ್ಬಲವಾಗಿದೆ.ಕೆಲಸಕ್ಕೆ ಅನರ್ಹವಾಗಿದೆ.ಅವರ ಮನಸ್ಸು ಧೈರ್ಯ ಹಿನವಾಗಿದೆ- ಅವರಿಂದ ಏನು  ಕೆಲಸ ತಾನೆ ಸಾಧ್ಯ? ನಚಿಕೆ ತನಕ ಗ ಇದ್ದಂತಹ ಶ್ರಧ್ದೆಯುಳ್ಳ  ೧೦-೧೨ ಜನ ಯುವಕರು ನನಗೆ ಸಿಕ್ಕರೆ ದೇಶದ ಯೋಚನೆ ವೃತ್ತಿಯನ್ನೆಲ್ಲಾ ಹೊಸ ಮಾರ್ಗದಲ್ಲಿ ಹರಿಯುವಂತೆ ಮಾಡಬಲ್ಲೆ .
       ಅವರಲ್ಲಿ ಯಾರು ನನಗೆ ಒಳ್ಳೆಯವರೆಂದು ತೋರುವರೋ ಅವರಲ್ಲಿ ಕೆಲವರು ಮದುವೆಯ ಬಂಧನಕ್ಕೆ ಸಿಲುಕಿದ್ದಾರೆ.ಕೆಲವರು ಪ್ರಾಪಂಚಿಕ ಹೆಸರು ,ಕೀರ್ತಿ ಐಶ್ವರ್ಯಕ್ಕೆ ತಮ್ಮನ್ನು ಮಾರಿಕೊಂಡಿದ್ದಾರೆ.ಕೆಲವರು ನಿಶ್ಯಕ್ತರು,ಉಳಿದವರು ಅವರೇ ಹೆಚ್ಚು ಮಂದಿ ಯಾವ ಉತ್ತಮ ಆದರ್ಶಗಳನ್ನು ಪಡೆಯಲು ಯೋಗ್ಯರಲ್ಲ.ನೀನೇನೆ ನನ್ನ ಆದರ್ಶ ಭಾವನೆಗಳನ್ನು ಹೊಂದಲು ಅರ್ಹ.ಅದರೆ ಅದನ್ನು ವ್ಯವಹಾರದಲ್ಲಿ ತರಲು ನಿನಗೆ ಸಾಧ್ಯವಿಲ್ಲ. ಈ ಕಾರಣಗಳಿಂದ ಒಮ್ಮೊಮ್ಮೆ ನನ್ನ ಮನಸ್ಸು ರೊಚ್ಚಿಗೇಳುವುದು.ಈ ಮಾನವ ದೇಹ ಧರಿಸಿರುವುದರಿಂದ ಇದು ಅಡ್ಡಿ ಬಂದು ನನಗೆ ಹೆಚ್ಚು ಕೆಲಸ ಮಾಡಲಾಗಲಿಲ್ಲ.ಆದಾಗ್ಯೂ ನನ್ನ ಸಂಪೂರ್ಣ ನಂಬಿಕೆ ಕಳೆದುಕೊಂಡಿಲ್ಲ.ಏಕೆಂದರೆ ದೇವರ ಇಚ್ಛೆಯಿಂದ ಈ ಕೆಲವು ಹುಡುಗರಿಂದಲೇ ಮುಂದೆ ಅನೇಕ ದೊಡ್ಡ ಕರ್ಮ ವೀರರು,ಆದ್ಯಾತ್ಮಿಕ ವೀರರು ಹುಟ್ಟಿ ಬಂದು ನನ್ನ ಉದ್ದೇಶಗಳನ್ನು ಭವಿಷ್ಯದಲ್ಲಿ ಕಾರ್ಯರೂಪಕ್ಕೆ ತರಬಹುದು.

ನೋಡಿ ಗೆಳೆಯರೆ ನಮ್ಮಂತಹ ಯುವಕರ ಮೇಲೆ ಎಂತಹ ಅಪಾರವಾದ ನಂಬಿಕೆಯನ್ನು ಇಟ್ಟಿದ್ದಾರೆ ವಿವೇಕಾನಂದರು.

 ************** ಹರೀಶ.ಎಂ.ಎಸ್.**************

Comments

Popular posts from this blog