ಸೆಲ್ಫೀ ಪ್ರಪಂಚ : ಹರೀಶ್. ಎಂ.ಎಸ್

ಮಿತ್ರರೇ ಪ್ರಪಂಚ ಬಹಳ ವೇಗವಾಗಿ ಬೆಳೆಯುತ್ತಿದೆ. ಅದರೊಂದಿಗೆ ಇಲ್ಲಿರುವ ಜನರೂ ಕೂಡ ಬೆಳೆಯುತ್ತಿದ್ದಾರೆ.ಈಗಿನ ಪ್ರಪಂಚದ ಅಭಿರುಚಿಗೆ ತಕ್ಕಂತೆ ಬದಲಾಗುತ್ತಿದ್ದಾರೆ.ಈ ಬದಲಾವಣೆಯಲ್ಲಿ ಹೆಚ್ಚಿನ ಪಾತ್ರ ವಹಿಸುವ ಸಾಧನವೇ ಮೊಬೈಲ್. ಈಗಿನ ಕಾಲದಲ್ಲಂತೂ ಎಂತಹ ಹದಿ ಹರೆಯದ ಹುಡುಗ/ ಹುಡುಗಿಯರಿಂದ ಹಿಡಿದು ಮುಪ್ಪಿನ ಅಂಚಿನಲ್ಲಿರುವ ಅಜ್ಜ/ ಅಜ್ಜಿಯವರ ಕೈಯಲ್ಲೂ ಈ ಮೊಬೈಲಿನದ್ದೇ ಸದ್ದು. ಈ ಮೊಬೈಲ್ ಎಂದಾಕ್ಷಣ ನಮಗೆ ನೆನಪಾಗೋದು ನಾವು ದಿನನಿತ್ಯ ನಾವು ಉಪಯೋಗಿಸುವ ಫೇಸ್ ಬುಕ್ ,ವಾಟ್ಸ್ ಆ್ಯಪ್,ಮೆಸೆಂಜರ್,ಇನ್ಸ್ಟ್ರಾಗ್ರಾಮ್,ಹೈಕ್ ಇತ್ಯಾದಿ ಸಮೂಹ ಮಾಧ್ಯಮ ಸಾಧನಗಳು.ಕೆಲವರಂತು ಅದರ ದಾಸರಾಗಿರುತ್ತಾರೆ.ಅದಕ್ಕೆ ಫೋಟೋಸ್ ಅಪ್ ಲೋಡ್ ಮಾಡೋದು .ಆ ಕಡೆಯಿಂದ ಬರುವ ಲೈಕ್, ಮತ್ತು ಕಮೆಂಟ್ ಗಾಗಿ ಕಾಯೋದು.ಅದರಲ್ಲೂ ಕೆಲವರಿಗಂತೂ ಈ ಸೆಲ್ಫಿಯದ್ದೇ ಹುಚ್ಚು .ಈ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಎಲ್ಲಿಲ್ಲದ ಹರಸಾಹಸ ಮಾಡ್ತಾರೆ. ಯಾವುದೋ ಒಂದು ಮಾಧ್ಯಮದ ವರದಿಯ ಪ್ರಕಾರ ಇಡೀ ಪ್ರಪಂಚದಲ್ಲಿ ಮುಪ್ಪಿನವರಿಗಿಂತ( ಮುದಿ ವಯಸ್ಸಿನವರಿಗಿಂತ) ಹೆಚ್ಚು ಫ್ರೌಡಾವಸ್ತೆ ಮತ್ತು ವಯಸ್ಸಿನ ಯುವಕರೆ ಸಾವಿಗೀಡಾಗುತ್ತಿದ್ದಾರೆ ಇದಕ್ಕೆ ಕಾರಣ ಈ ಮೋಬೈಲ್ ಎಂಬ ಮಹಾ ಮಾಯೇ ಅದರಲ್ಲಿರುವ ಸೆಲ್ಫಿಯ ಛಾಯೆ. ಉದಾಹರಣೆಗೆ : 1: ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ದಾರಿಯನ್ನು ನೋಡದೆ ಸಂಪೂರ್ಣವಾಗಿ ಮೊಬೈಲ್ ನಲ್ಲಿರುವ ಫೇಸ್ ಬುಕ್ ,ವ...