ಬದುಕೆಂಬ ಬವಣೆಯೊಳಗೆ ‌ : ಹರೀಶ್. ಎಂ.ಎಸ್.

   
  ಗೆಳೆಯರೆ ಇದೊಂದು ಸ್ಪರ್ಧಾ ಜಗತ್ತು ಇಲ್ಲಿ ಜನಸಾಮಾನ್ಯರು ಮುಂದೆ ಬರಲು ಅದೆಷ್ಟೋ ಕಸರತ್ತು ನಡೆಸುತ್ತಾರೆ.ಆದರೂ ಕೆಲ ಜಾಗಗಳಲ್ಲಿ ಎಡವುತ್ತಾರೆ.ಇದಕ್ಕೆ ಕಾರಣ ಅವರಲ್ಲಿರುವ ಆತ್ಮ ಸ್ಥೈರ್ಯ  ಕುಗ್ಗುವುದು.ಅವರ ಮೇಲೆ ಅವರಿಗೇನೆ ಅಪ ನಂಬಿಕೆ ಮೂಡುವುದು.
                       ಆದ್ದರಿಂದ ಯಾರೂ ಸಹ ನಾವು ಕೈಲಾಗದವರು ,,,ನಮ್ಮ ಕೈಲೇನಾದೀತು ಎಂದು ಊಹಿಸಿ ಕೊಳ್ಳಬೇಡಿ ಒಂದು ವೇಳೆ ನೀವು ಹಾಗೇನಾದರು ಊಹಿಸಿಕೊಂಡರೆ ,,ಊಹಿಸಿಕೊಂಡಂತೆಯೇ ಆಗಿ ಬಿಡುತ್ತೀರ .ಮೊದಲು ನಿಮ್ಮ ಮೇಲೆ ನೀವು ವಿಶ್ವಾಸವಿಡಿ ತಾವುಗಳು ಎಲ್ಲವನ್ನು ಸಾಧಿಸಬಲ್ಲೆವು ,ನಮ್ಮಿಂದ ಅಸಾಧ್ಯವಾದುದು ಏನು ಇಲ್ಲ ಎಂದು ಹೇಳುತ್ತಾ ಮುಂದೆ ಸಾಗಿ ಖಂಡಿತ ನೀವು ಅಂದು ಕೊಂಡಂತೆಯೇ ಸಾಧಿಸುತ್ತೀರಿ ಆಗ ಗೆಲುವು ನಿಮ್ಮದಾಗುತ್ತದೆ.

    ಪ್ರಸ್ತುತ ಪ್ರಪಂಚದಲ್ಲಿ ಜನರು ತಮ್ಮ ತಮ್ಮ ಹೆಸರುಗಳನ್ನು ಸ್ಥಿರ ಸ್ಥಾಯಿಯಾಗಿ ಉಳಿಸಿಕೊಳ್ಳಲು , ಜನಸಾಮಾನ್ಯರಿಂದ ಹೊಗಳಿಸಿಕೊಳ್ಳಲು ,ಬೇರೆಯವರನ್ನು ತುಳಿದು ಬದುಕುವ ಜನರಿದ್ದಾರೆ ಅಂತವರಿಂದ ದೂರವಿದ್ದು ನೀವೇನೆಂಬುದನ್ನು ತೋರಿಸಿ.ಆಗ ತಮ್ಮ ಗೆಲುವನ್ನು ಕಂಡು ಅವರೇ ಬಾಲ ಮುದುರಿಕೊಳ್ಳುತ್ತಾರೆ. ಮತ್ತೊಮ್ಮೆ ಇನ್ನೊಬ್ಬರನ್ನು ತುಳಿಯುವ ಮುನ್ನ ಯೋಚಿಸುತ್ತಾರೆ.

   ಕೆಲ ಸಮಯ ಸಂಧರ್ಭಗಳಲ್ಲಿ ಕೆಲ ಅವಿವೇಕಿಗಳು ತಮಾಷೆ ಮತ್ತು ಮೋಜಿಗಾಗಿ ನಿಮ್ಮ ಕಾಲೆಳೆಯುತ್ತಾರೆ .ಅವರನ್ನು ದ್ವೇಷಿಸಬೇಡಿ ,ಅದೊಂದು ಪಾಠ ಎಂದು ತಿಳಿದು ಸಮಯ ಸಾಧಿಸಿ ಅವರ ತಪ್ಪೇನೆಂಬುದನ್ನು ತಿಳಿಸಿ.

   ಭಾರತವನ್ನು ಒಂದು ಬಡ ರಾಷ್ಟ ಎನ್ನುತ್ತಾರೆ .
ಯಾಕೆಂದರೆ ಇಲ್ಲಿ ಬಡತನವಿದೆ .ಆದರೆ ನೀವು ಬಡವರೆ !!!! ಒಂದು  ಕ್ಷಣ ಯೋಚಿಸಿ.,,,,,
 ತಿನ್ನಲು ಅನ್ನ ಇಲ್ಲದೆ ಒಂದೊಂದು ತುತ್ತಿಗಾಗಿ ಚಡಪಡಿಸುವವನು ನಿಜವಾದ ಬಡವ
 ವಾಸಿಸಲು ಸೂರಿಲ್ಲದವನು ನಿಜವಾದ ಬಡವ
 ಇತರರೊಂದಿಗೆ ಸರಿ ಸಮಾನವಾಗಿ ನಿಲ್ಲದವನು ನಿಜವಾದ ಬಡವ
  ವಿದ್ಯೆಯೆಂಬ ಹಸಿವಿನಿಂದ ಬಳಲುತ್ತಿರುವವನು ನಿಜವಾದ ಬಡವ
 ತನ್ನ ಕಾಲ ಮೇಲೆ ತಾನು ನಿಲ್ಲಲಾಗದೆ ಬೇರೆಯವರನ್ನು ಆಶ್ರಯಿಸುವವನು ನಿಜವಾದ ಬಡವ.
      ಈಗ ನೀವೆ ಯೋಚಿಸಿ ಇದರಲ್ಲಿ ನಮಗೆ ಯಾವುದಿಲ್ಲ,,,,, ಯಾವುದು ಕಡಿಮೆಯಿದೆ,,,,,ನಿಜವಾಗಿಯೂ ಇದನೆಲ್ಲ ಅರಿತೂ ನಾವು ಬಡವರೇ .
  ಒಂದು ಕ್ಷಣ ನಿಮ್ಮ ಮನಸನ್ನು ಕೇಳಿ.  ನೀವು ಬಡವರೇ ಇಲ್ಲವೇ ಎಂದು .ಆಗ ತಿಳಿಯುತ್ತದೆ. ಅಂಗ ನ್ಯೂನತೆಗೊಳಗಾಗಿರುವ ವಿಕಲಚೇತನರು,ಅಂಗವಿಕಲರೇ ತಾವುಗಳು ಏನೆಂದು ತೋರಿಸುತ್ತಿದ್ದಾರೆ ಆಗಿದ್ದರೆ ನಾವು ಯಾವುದರಲ್ಲಿ ಕಡಿಮೆ,,
      ಉದಾಹರಣೆಗೆ ಒಬ್ಬ ತನ್ನ ಕಾಲಿಗೆ ಶೂ ಇಲ್ಲ ಎಂದು ಯೋಚಿಸುತ್ತಿದ್ದರೆ,,,, ಇನ್ನೊಬ್ಬ ತನಗೆ ಕಾಲೇ ಇಲ್ಲದವನು ಏನೆಂದು ಯೋಚಿಸುತ್ತಾನೆ.ಇವನ್ನು ನೆನೆಸಿಕೊಂಡರೆ ಶೂ ಇಲ್ಲದಿದ್ದರೂ ಪರವಾಗಿಲ್ಲ ನಾನೇ ಉತ್ತಮ ಅರಿವಾಗುತ್ತದೆ.
   ಸಾಧನೆ ಮಾಡಲು ಬಡತನ ,ಸಿರಿತನದ ಅಗತ್ಯವಿಲ್ಲ .ಒಂದು ಉತ್ತಮವಾದ ಗುರಿ , ತಾಳ್ಮೆ , ಸಾಧಿಸಬೇಕೆಂ ಬ ಹಂಬಲ ಇಷ್ಟೇ ಸಾಕು.

         ಇನ್ನಾದರು ಯೋಚಿಸಿ ನಾವು ಸರ್ವ ಶಕ್ತ ಅನಂತರು,ಬುದ್ದಿಜೀವಿಗಳು,ಮೇಧಾವಿಗಳು ನಾವು ಬೇರೊಬ್ಬರ ಮುಂದೆ ಕೀಳಾಗ ಬಾರದು ಎಂದು    ಅವರಿಗಿಂತಲೂ ಮುಂದೆ ಬರಲು ಯತ್ನಿಸುವವರು ,,ಅದೆಲ್ಲಕ್ಕಿಂತ ಹೆಚ್ಚಾಗಿ ಒಳ್ಳೆಯ - ಕೆಟ್ಟ,,,,,ತಪ್ಪು- ಸರಿಗಳನ್ನು ಅರಿತವರು . ಆದ್ದರಿಂದ ಗೆಳೆಯರೆ ನಾವು ಜೀವನವೆಂಬ ಪ್ರಪಂಚದಲ್ಲಿ ಬದುಕಿರುವುದಷ್ಟೇ ಕಾಲ, ಸತ್ತಮೇಲೆ ನೆಮ್ಮದಿಯಿಂದ ಮಣ್ಣಿನೊಳಗೆ ಶಾಂತವಾಗ್ತೀವಿ ಆದ್ದರಿಂದ ನಾವು ಜೀವಂತವಾಗಿರುವಾಗಲೇ ತಾಯ್ನೆಲಕ್ಕೆ ಏನಾದರು ಕೊಡುಗೆ ಕೊಟ್ಟು / ಸಾಧನೆ ಮಾಡಿ,,,   ಬದುಕಿರುವಷ್ಟು ದಿನ ಎಲ್ಲರಿಗೂ ಒಳ್ಳೆಯದನ್ನೆ ಬಯಸುತ್ತಾ ಒಳ್ಳೆಯದನ್ನೆ ಮಾಡುತ್ತಾ ,ನಮ್ಮ ಸಮಯವನ್ನು ಒಳ್ಳೆಯದಕ್ಕೋಸ್ಕರ ಬಳಸುತ್ತ ನಾವು ,,ನಮ್ಮವರೆಂದು ಎಲ್ಲರೂ ಕೂಡಿ ಬಾಳೋಣ.

 ************  ಹರೀಶ್.ಎಂ.ಎಸ್   *************

Comments

Post a Comment

Popular posts from this blog