ಸೆಲ್ಫೀ ಪ್ರಪಂಚ : ಹರೀಶ್. ಎಂ.ಎಸ್
ಮಿತ್ರರೇ ಪ್ರಪಂಚ ಬಹಳ ವೇಗವಾಗಿ ಬೆಳೆಯುತ್ತಿದೆ. ಅದರೊಂದಿಗೆ ಇಲ್ಲಿರುವ ಜನರೂ ಕೂಡ ಬೆಳೆಯುತ್ತಿದ್ದಾರೆ.ಈಗಿನ ಪ್ರಪಂಚದ ಅಭಿರುಚಿಗೆ ತಕ್ಕಂತೆ ಬದಲಾಗುತ್ತಿದ್ದಾರೆ.ಈ ಬದಲಾವಣೆಯಲ್ಲಿ ಹೆಚ್ಚಿನ ಪಾತ್ರ ವಹಿಸುವ ಸಾಧನವೇ ಮೊಬೈಲ್.
ಈಗಿನ ಕಾಲದಲ್ಲಂತೂ ಎಂತಹ ಹದಿ ಹರೆಯದ ಹುಡುಗ/ ಹುಡುಗಿಯರಿಂದ ಹಿಡಿದು ಮುಪ್ಪಿನ ಅಂಚಿನಲ್ಲಿರುವ ಅಜ್ಜ/ ಅಜ್ಜಿಯವರ ಕೈಯಲ್ಲೂ ಈ ಮೊಬೈಲಿನದ್ದೇ ಸದ್ದು.
ಈ ಮೊಬೈಲ್ ಎಂದಾಕ್ಷಣ ನಮಗೆ ನೆನಪಾಗೋದು ನಾವು ದಿನನಿತ್ಯ ನಾವು ಉಪಯೋಗಿಸುವ ಫೇಸ್ ಬುಕ್ ,ವಾಟ್ಸ್ ಆ್ಯಪ್,ಮೆಸೆಂಜರ್,ಇನ್ಸ್ಟ್ರಾಗ್ರಾಮ್,ಹೈಕ್ ಇತ್ಯಾದಿ ಸಮೂಹ ಮಾಧ್ಯಮ ಸಾಧನಗಳು.ಕೆಲವರಂತು ಅದರ ದಾಸರಾಗಿರುತ್ತಾರೆ.ಅದಕ್ಕೆ ಫೋಟೋಸ್ ಅಪ್ ಲೋಡ್ ಮಾಡೋದು .ಆ ಕಡೆಯಿಂದ ಬರುವ ಲೈಕ್, ಮತ್ತು ಕಮೆಂಟ್ ಗಾಗಿ ಕಾಯೋದು.ಅದರಲ್ಲೂ ಕೆಲವರಿಗಂತೂ ಈ ಸೆಲ್ಫಿಯದ್ದೇ ಹುಚ್ಚು .ಈ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಎಲ್ಲಿಲ್ಲದ ಹರಸಾಹಸ ಮಾಡ್ತಾರೆ.
ಯಾವುದೋ ಒಂದು ಮಾಧ್ಯಮದ ವರದಿಯ ಪ್ರಕಾರ ಇಡೀ ಪ್ರಪಂಚದಲ್ಲಿ ಮುಪ್ಪಿನವರಿಗಿಂತ( ಮುದಿ ವಯಸ್ಸಿನವರಿಗಿಂತ) ಹೆಚ್ಚು ಫ್ರೌಡಾವಸ್ತೆ ಮತ್ತು ವಯಸ್ಸಿನ ಯುವಕರೆ ಸಾವಿಗೀಡಾಗುತ್ತಿದ್ದಾರೆ ಇದಕ್ಕೆ ಕಾರಣ ಈ ಮೋಬೈಲ್ ಎಂಬ ಮಹಾ ಮಾಯೇ ಅದರಲ್ಲಿರುವ ಸೆಲ್ಫಿಯ ಛಾಯೆ.
ಉದಾಹರಣೆಗೆ :
1: ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ದಾರಿಯನ್ನು ನೋಡದೆ ಸಂಪೂರ್ಣವಾಗಿ ಮೊಬೈಲ್ ನಲ್ಲಿರುವ ಫೇಸ್ ಬುಕ್ ,ವಾಟ್ಸ್ ಅ್ಯಪ್ ನೊಳಗೆ ಮುಳುಗಿ ಹೋಗುವುದು.
2 : ವಾಹನ ಅಥವಾ ಬೈಕ್ ಚಲಾಯಿಸುವಾಗ ಮೊಬೈಲ್ ನಲ್ಲಿ ಮತನಾಡಿಕೊಂಡೇ ಹೋಗುವುದು.
3 : ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡಾಗ ಮೊಬೈಲ್ ನೋಡಿಕೊಂಡೆ ರಸ್ತೆ ದಾಟುವುದು.
4 : ಇದು ಅತ್ಯಂತ ಮುಖ್ಯವಾದುದು ಅದೇ ನಾನು ಮುಂಚೆ ಹೇಳಿದ ಸೆಲ್ಫಿ.ಇದಕ್ಕಾಗಿ ಕೆಲವರು ಬೆಟ್ಟದ ತಟ್ಟ ತುದಿಯ ಮೇಲೆ ಕುಳಿತು ಕ್ಲಿಕ್ಕಿಸುವುದು,ವ್ಹಿಲಿಂಗ್ ಮಾಡುವಾಗ,ನದಿಯ ಅಂಚಿನಲ್ಲಿರುವ ಮರದ ರೆಂಬೆಯ ಮೇಲಿಂದ ಇತ್ಯಾದಿ.ಆದರೆ ಗೆಳೆಯರೆ ನೀವು ಆ ಸಂಧರ್ಭಗಳಲ್ಲಿ ನಿಮ್ಮ ಪ್ರಮಾಣಕ್ಕೆ ತೊಂದರೆ ಇದೆ ಎಂದು ಗೊತ್ತಿದ್ದರೂ ಕೂಡ ಆ ಸಾಹಸಕ್ಕೆ ಕೈ ಹಾಕುತ್ತೀರಿ.ಒಂದು ಕ್ಷಣ ಇವೆಲ್ಲವನ್ನು ಮಾಡುವುದಕ್ಕಿಂತ ಮೊದಲು ನಿಮಗಾಗಿ,ನಿಮ್ಮನ್ನು ನಂಬಿಕೊಂಡು ಬದುಕುತ್ತಿರುವ,ಅಪ್ಪ,ಅಮ್ಮ,ಅಕ್ಕ,ತಂಗಿ,ಹೆಂಡತಿ,ಮಕ್ಕಳ ಬಗ್ಗೆ ಸ್ವಲ್ಪ ಯೋಚನೆಮಾಡಿ ನೋಡಿ .ಇನ್ನೂ ಅರಿವಾಗದಿದ್ದರೆ ನೀವು ಸತ್ತ ಮೇಲೆ ನಿಮ್ಮನ್ನು ನಂಬಿ ಬದುಕುತ್ತಿರುವವರನ್ನು ಭಿಕ್ಷೆ ಬೇಡುತ್ತಿರುವವರ ಸ್ಥಾನದಲ್ಲಿ ಕಲ್ಪಿಸಿಕೊಂಡು ನೋಡಿ.ನಿಮಗೇ ತಾನಾಗಿಯೇ ಅರಿವಾಗುತ್ತದೆ .ನೋಡಿ ನನ್ನ ಸಹೃದಯಿ ಮಿತ್ರರೆ ಈ ಪ್ರಾಣ ನಮಗೆ ಆ ದೇವರು ಕೊಟ್ಟ ಒಂದು ದೊಡ್ಡ ಭಿಕ್ಷೆ ಆದ್ದರಿಂದ ನಾವು ಎಂತಹ ಘೋರ ಪಾಪ ಮಾಡಿದರೂ ಕೂಡ ಈ ಪ್ರಾಣವನ್ನು ತೆಗೆದುಕೊಳ್ಳುವ ಹಕ್ಕು ಆ ದೇವರಿಗೂ ಕೂಡ ಇಲ್ಲ ಆಗಿದ್ದ ಮಾತ್ರದಲ್ಲಿ ನಮ್ಮ ನಿರ್ಲಕ್ಷ್ಯದಿಂದ ಏಕೆ ಪ್ರಾಣ ಕಳೆದುಕೊಳ್ಳಬೇಕು ,ದಯವಿಟ್ಟು ಆರ್ಥ ಮಾಡಿಕೊಳ್ಳಿ.
ಇಷ್ಟೆಲ್ಲ ಹೇಳಿದ ಮಾತ್ರಕ್ಕೆ ನಾನು ಮೊಬೈಲ್ ಒಂದು ಕೆಟ್ಟ ಸಾಧನ ಅಂತ ಹೇಳ್ತಾಇಲ್ಲ. ಅದನ್ನು ಉಪಯೋಗಿಸುವ ರೀತಿಯಲ್ಲಿ ಉಪಯೋಗಿಸಿದರೆ ಅದಕ್ಕಿಂತ ಒಳ್ಳೆಯ ಮಾಧ್ಯಮ ಮತ್ತೊಂದಿಲ್ಲ.
ಆದ್ದರಿಂದ ಗೆಳೆಯರೆ ಈಗಲಾದರು ಇದರಿಂದ ಎಚ್ಚೆತ್ತು ನೆಮ್ಮದಿಯ ಸಮೃದ್ದ ಜೀವನದತ್ತ ಹೆಜ್ಜೆ ಹಾಕುತ್ತ ನೆಮ್ಮದಿಯಿಂದ ನಮ್ಮವರೊಂದಿಗೆ ಖುಷಿಯಿಂದ ಬಾಳೋಣ.ಇತರರಿಗೂ ಇದರ ಅರಿವನ್ನು ಮೂಡಿಸಿ ನಾವು ಇತರರಿಗೆ ಮಾದರಿಯಾಗಿ ಬಾಳೋಣ......
ಹರೀಶ್ ವಿವೇಕಾನಂದ ಮಂಚಿಬೀಡು.
(ಧರ್ಮ)
Comments
Post a Comment