ಯಾರು ಏನ್ ಅನ್ಕೊಳ್ತಾರೋ ? !!!!!!

 
 ಹಾಯ್ ಗೆಳೆಯರೆ  ಇದೊಂದು ಸ್ವಾರ್ಥಿ ಪ್ರಪಂಚ.ಇಲ್ಲಿ ಸಾಮಾನ್ಯ ಜನರು ಬದುಕಬೇಕೆಂದರೆ ಸಾಕಷ್ಟು ಸೆಣೆಸಾಡಬೇಕು. ಇಲ್ಲವಾದಲ್ಲಿ ಅವರು ತಟಸ್ಥ ಸ್ಥಿತಿಯಲ್ಲೆ ಇರಬೇಕಾಗುತ್ತದೆ. ಅಂತಹ ಸಮಯದಲ್ಲಿ ಕೆಲವರಿಗೆ ನಾವು ಮುಂದೆಬರಬೇಕೆಂಬ ಆಸೆ ,ಹೆಬ್ಬಯಕೆ ಹೆಚ್ಚಿರುತ್ತದೆ.ಆದರೆ ಅವರ ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಅದಕ್ಕೆ ತದ್ವಿರುದ್ಧವಾದ ಒಂದು ಯೋಚನೆ ಅವರ ಕನಸುಗಳನ್ನು ಭಗ್ನಗೋಳಿಸಲು ಸಿದ್ದವಾಗಿರುತ್ತದೆ ಅದೇ      "" ಯಾರು ಏನ್ ಅನ್ಕೊಳ್ತಾರೋ ""ಎಂಬುದು.

      ನೋಡಿ ಮಿತ್ರರೇ ಯಾರು ಏನ್ ಅನ್ಕೊಂಡ್ರು ನಮಗೇನೂ ಈ ಪ್ರಪಂಚ ಯಾರು ಹೇಗಿದ್ದರೂ ಒಂದಲ್ಲ ಒಂದು ರೀತಿಯಲ್ಲಿ ದೂರುತ್ತಾರೆ‌. ನಮ್ಮನನು ನೋಡಿ ಹತ್ತು ಜನ ಒಪ್ಪದಿದ್ದರೂ ಪರವಾಗಿಲ್ಲ, ಆದರೆ ನಾವು ಮಾಡುವ ಕೆಲಸ ನಮ್ಮ ಮನಸಾಕ್ಷಿ ಮೆಚ್ಚುವಂತಿರಬೇಕು.ನಮ್ಮ ಕೆಲಸವನ್ನು ಯಾರು  ಮೆಚ್ಚದಿದ್ದರೇನು ನಮಗೆ ನಾವೇ ಸಾಟಿ ಹೊರತು ಬೇರ್ಯಾರು ಇಲ್ಲ.
       ಈ ಪ್ರಪಂಚದಲ್ಲಿ ನಾವು ನೆಲೆಯೂರಿ ಬದುಕಬೇಂಕೆದರೆ  ಅದಕ್ಕೆ ನಮ್ಮ ಮನಸ್ಸಾಕ್ಷಿ ಮತ್ತು ನಮ್ಮ ದುಡಿಮೆಯಿಂದಲೇ ಸಾಧ್ಯ .ನಾವು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದರಿಂದ  ನಾವು ಗೆಲ್ಲುತ್ತೇವೆ ಎಂದು ಗೊತ್ತಿದ್ದರೂ ನಾವು ಇನ್ನೋಬ್ಬರ ಅಂಜಿಕೆಯಿಂದಲೇ ಆಗುವ ಕೆಲಸವನ್ನು ನಮ್ಮಿಂದ ನಾವೇ  ಹಾಳುಮಾಡಿಬಿಡುತ್ತೇವೆ. ನಮ್ಮ ಕಷ್ಟ ಕರ ಸಂಧರ್ಭಗಳಲ್ಲಿ ಕೆಲವರು ನಿಮ್ಮ ಜೊತೆನಾವಿದ್ದೇವೆ ಧೈರ್ಯವಾಗಿ ಮುನ್ನುಗ್ಗು ಎಂದು ಹುರಿದುಂಬಿಸುತ್ತಾರೆ. ಆದರೆ ಆವರು ಆ ಕ್ಷಣದಲ್ಲಿ ಮಾತ್ರ ನಮ್ಮ ಜೊತೆ ಇರುತ್ತಾರೆ . ಮುಂದೆ ಏನೇ ಪರಿಸ್ಥಿತಿ ಬಂದರೂ ಅದನ್ನು ಎದುರಿಸಿ ಮುನ್ನುಗ್ಗುವಂತಹ ಸಹನೆ,ಜಾಣ್ಮೆ,ಚಾಣಾಕ್ಷತನ ನಮ್ಮಲ್ಲಿರಬೇಕು . ಅದನ್ನ ಬಿಟ್ಟು ನಮಗೆ ಅವರು ಸಹಾಯ ಮಾಡುತ್ತಾರೆ, ಇವರು ಸಹಾಯ ಮಾಡುತ್ತಾರೆ ಎಂದು ಪರರನ್ನು ಅವಲಂಬಿಸುವ  ಆಲೋಚನೆಯನ್ನು ಬಿಡಬೇಕು . ಮತ್ತು ನಾವು ನಮ್ಮ ಬಗ್ಗೆ ಯಾರು ಏನ್ ಅನ್ಕೊಳ್ ತಾರೋ ಅಂತ ಸುಮ್ಮನಿರಬಾರದು . ಯಾಕಂದ್ರೆ ನಮಗೆ ಎಂತಹ ಕಠಿಣ ಪರಿಸ್ಥಿತಿ ಬಂದರು ಅದನ್ನು ಮೆಟ್ಟಿ ನಿಂತು ಎದುರಿಸುವಂತಹ ಧೈರ್ಯ ಇರುತ್ತದೆ.ಅದನ್ನು ಇನ್ನಷ್ಟು ಬಲಿಷ್ಟ ಗೊಳಿಸಿ ಮುಂದೆ ನಮ್ಮಿಂದೇನಾಗಬೇಕು ಎಂಬುದರ ಕಡೆ ಗಮನ ಹರಿಸಿ, ಅದನ್ನು ಗೆಲ್ಲುವಂತಹ  ಮಾರ್ಗೋಪಾಯ ಕಂಡುಕೊಳ್ಳಬೇಕೇ ಹೊರತು ಅದನ್ನು
 ಬಿಟ್ಟು ನಮ್ಮನ್ನು ನೋಡಿ ಯಾರು ಏನ್ ಅನ್ಕೋಳ್ತಾರೋ ಎಂದು ಕೂರಬಾರದು.ಈ ಪ್ರಪಂಚದಲ್ಲಿ  ಜನ ಕೂತರೂ ಒಂತರಾ ಮಾತಾಡ್ತಾರೇ ,ನಿಂತರೇ ಇನ್ನೊಂದು ತರ ಮಾತಾಡ್ತಾರೆ ಆದ್ದರಿಂದ ಯಾರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ನಮ್ಮ ಮಾರ್ಗದಲ್ಲಿ ನಾವು ನಡೆಯಬೇಕು.
      ಈಗೆ ತಮ್ಮಷ್ಟಕ್ಕೆ ತಾವು ಊಹಿಸಿಕೊಂಡು ಅದೆಷ್ಟೋ ಅಭೂತಪೂರ್ವ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ಹೊರ ಪ್ರಪಂಚಕ್ಕೆ ತೊರಿಸಲಾಗದೆ ಬೂದಿ ಮುಚ್ಚಿದ ಕೆಂಡದಂತೆ ಬಚ್ಚಿಟ್ಟಿದ್ದಾರೆ .ಇನ್ನಾದರು ಹೆಚ್ಚೆತ್ತು ನಾವು ಇನ್ನೊಬ್ಬರಿಗೆ ಹೆದರದೆ  ನಾವು  ಮತ್ತು ನಮ್ಮ ತನವೇನೆಂಬುದನ್ನು ಹೊರ ಪ್ರಪಂಚಕ್ಕೆ ತೋರುವಂತಾಗಬೇಕು ಎಂಬುದೇ ನನ್ನ ಹೆಬ್ಬಯಕೆ.

""" ಯಾರು ಏನ್ ಅನ್ಕೊಂಡ್ರೆ ನಮಗೇನು ನಾವು ನಾವಾಗಿದ್ದರೆ ಸಾಕು """

                      :- ಹರೀಶ್ ವಿವೇಕಾನಂದ ಮಂಚೀಬೀಡು

Comments

Popular posts from this blog