"" ಓ ಮನಸೇ ಮರುಗದಿರು ""

ಮನಸ್ಸೆಂಬುದು ಒಂದು ಕನ್ನಡಿಯಿದ್ದಂತೆ.ಒಂದು ಕನ್ನಡಿ ಹೇಗೆ ಬಿದ್ದಾಗ ಛಿದ್ರ ಗೊಳ್ಳುತ್ತದೆಯೋ ಹಾಗೆಯೇ ಮನಸ್ಸೆಂಬ ಕನ್ನಡಿಯು ಕೆಲವೊಮ್ಮೆ ಬುದ್ದಿಯೀನ ವ್ಯಕ್ತಿಗಳಾಡುವ ಕೆಲ ಮಾತುಗಳ ಬಲೆಗೆ ಸಿಲುಕಿ ಭಿನ್ನವಾಗುತ್ತದೆ.ಈಗೆ ಭಿನ್ನವಾದ ಮನಸ್ಸು ಮೌನದ ಆಸರೆ ಬೇಡುತ್ತದೆ.ಈಗೆ ಮೌನದ ಆಸರೆಗೆ ಒಳಗಾದ ವ್ಯಕ್ತಿಗಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟಕರ ಸಂಗತಿ.ಯಾಕೆಂದರೆ ನಾವು ಇನ್ನೊಬ್ಬರು ನೋವಿನಲ್ಲಿದ್ದಾಗ ಅವರಿಗೆ ಧೈರ್ಯ ತುಂಬಿ ತಿಳಿಹೇಳುವ ಪ್ರಯತ್ನ ಮಾಡುತ್ತೇವೆ.ಆದರೆ ಅದೇ ಸಂಗತಿ ನಮಗೆ ಬಂದಾಗ ಮಾತ್ರ ನಾವು ಅವರಿಗೆ ತಿಳಿ ಹೇಳಿದ ನೆನಪು ಮರುಕಳಿಸುತ್ತದೆ.ನಮಗೆ ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸುವ ಗುಣ ಇದೆ .ಆದರೆ ಅದೇ ಸಮಯ ನಮಗೆ ಬಂದಾಗ ಯಾರು ಎಷ್ಟೇ ಹೇಳಿದರು ಅದನ್ನು ಅರಗಿಸಿಕೊಳ್ಳಲಾಗದ ನೋವು ಮನದಲ್ಲಿರುತ್ತದೆ.ಆದರೆ ಇಲ್ಲಿ ಎಲ್ಲದಕ್ಕೂ ಇರುವುದು ಮರುಗುವುದೊಂದೆ. ಒಂದು ಮಾತು ಮಿತ್ರರೆ ,ನಾವು ಯಾಕೆ ಮರುಗಬೇಕು,ಅವರ ಕಷ್ಟಗಳನ್ನು ನೋಡಿ ಯಾಕೆ ನೀರಾಗಬೇಕು.ಹಾಗಂದ ಮಾತ್ರಕ್ಕೆ ನಾವು ಬೇರೆಯವರ ಕಷ್ಟಗಳಿಗೆ ಸ್ಪಂದಿಸಬಾರದು ಅಂತಲ್ಲ.ಅದಕ್ಕೂ ಮುನ್ನ ನಾವು ಅವರಲ್ಲಿರುವ ಅಂತರಂಗದ ಕುರುಹುಗಳನ್ನು ಗಮನಿಸಿ ಅದಕ್ಕೆ ಸ್ಪಂದಿಸಬೇಕು.ಯಾಕೆಂದರೆ ಒಬ್ಬ ವ್ಯಕ್ತಿ ಎಡವಿ ಬಿದ್ದಾಗ, ಹೇಗೆ ಬಿದ್ದ ಜಾಗದಿಂದಲೇ ಎದ್ದು ಮೇಲೆ ಬರುತ್ತಾನೋ ಹ...