"" ಓ ಮನಸೇ ಮರುಗದಿರು ""

   

         ಮನಸ್ಸೆಂಬುದು ಒಂದು ಕನ್ನಡಿಯಿದ್ದಂತೆ.ಒಂದು ಕನ್ನಡಿ ಹೇಗೆ ಬಿದ್ದಾಗ ಛಿದ್ರ ಗೊಳ್ಳುತ್ತದೆಯೋ ಹಾಗೆಯೇ ಮನಸ್ಸೆಂಬ ಕನ್ನಡಿಯು ಕೆಲವೊಮ್ಮೆ ಬುದ್ದಿಯೀನ ವ್ಯಕ್ತಿಗಳಾಡುವ ಕೆಲ ಮಾತುಗಳ ಬಲೆಗೆ ಸಿಲುಕಿ ಭಿನ್ನವಾಗುತ್ತದೆ.ಈಗೆ ಭಿನ್ನವಾದ ಮನಸ್ಸು ಮೌನದ ಆಸರೆ ಬೇಡುತ್ತದೆ.ಈಗೆ ಮೌನದ ಆಸರೆಗೆ ಒಳಗಾದ ವ್ಯಕ್ತಿಗಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟಕರ ಸಂಗತಿ.ಯಾಕೆಂದರೆ ನಾವು ಇನ್ನೊಬ್ಬರು ನೋವಿನಲ್ಲಿದ್ದಾಗ ಅವರಿಗೆ ಧೈರ್ಯ ತುಂಬಿ ತಿಳಿಹೇಳುವ ಪ್ರಯತ್ನ ಮಾಡುತ್ತೇವೆ.ಆದರೆ ಅದೇ ಸಂಗತಿ ನಮಗೆ ಬಂದಾಗ ಮಾತ್ರ ನಾವು ಅವರಿಗೆ ತಿಳಿ ಹೇಳಿದ ನೆನಪು ಮರುಕಳಿಸುತ್ತದೆ.ನಮಗೆ ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸುವ ಗುಣ ಇದೆ .ಆದರೆ ಅದೇ ಸಮಯ ನಮಗೆ ಬಂದಾಗ ಯಾರು ಎಷ್ಟೇ ಹೇಳಿದರು ಅದನ್ನು ಅರಗಿಸಿಕೊಳ್ಳಲಾಗದ ನೋವು ಮನದಲ್ಲಿರುತ್ತದೆ.ಆದರೆ ಇಲ್ಲಿ ಎಲ್ಲದಕ್ಕೂ ಇರುವುದು ಮರುಗುವುದೊಂದೆ.

        ಒಂದು ಮಾತು ಮಿತ್ರರೆ‌ ,ನಾವು ಯಾಕೆ ಮರುಗಬೇಕು,ಅವರ ಕಷ್ಟಗಳನ್ನು ನೋಡಿ ಯಾಕೆ ನೀರಾಗಬೇಕು.ಹಾಗಂದ ಮಾತ್ರಕ್ಕೆ ನಾವು ಬೇರೆಯವರ ಕಷ್ಟಗಳಿಗೆ ಸ್ಪಂದಿಸಬಾರದು ಅಂತಲ್ಲ.ಅದಕ್ಕೂ ಮುನ್ನ ನಾವು ಅವರಲ್ಲಿರುವ ಅಂತರಂಗದ ಕುರುಹುಗಳನ್ನು ಗಮನಿಸಿ ಅದಕ್ಕೆ ಸ್ಪಂದಿಸಬೇಕು.ಯಾಕೆಂದರೆ ಒಬ್ಬ ವ್ಯಕ್ತಿ ಎಡವಿ ಬಿದ್ದಾಗ, ಹೇಗೆ ಬಿದ್ದ ಜಾಗದಿಂದಲೇ ಎದ್ದು ಮೇಲೆ ಬರುತ್ತಾನೋ ಹಾಗೆಯೆ ಅವರ ಕಷ್ಟಗಳು ಏನಿರುತ್ತವೆಯೋ ಅವುಗಳನ್ನು ಅವರೇ ಎದುರಿಸಿ ಮುಂದೆ ಬರುವ ತನಕ ಯಾರೂ ಅವರ ಬಗ್ಗೆ ಮರುಗಬಾರದು.ಆಗ ನಾವು ಮರುಗಿದ್ದೇ ಆದರೆ ಅವರ ಆತ್ಮಸ್ತೈರ್ಯ ಕುಗ್ಗುತ್ತದೆ.ನಮಗೂ ಮರುಗುವವರಿದ್ದಾರೆ ,ಅವರೇ ಬಂದು ಸಹಾಯ ಮಾಡುತ್ತಾರೆ ಎಂದು ಕಾಯುತ್ತಾರೆ.ಅದರೆ ನೀವು ಅವರ ಬಳಿ ಸುಳಿಯದೇ ಹೋದರೆ ಅವರು ಅನುಭವಿಸುತ್ತಿರುವ ಸಂಕೊಲೆಗಳನ್ನು ಬಿಡಿಸಿಕೊಂಡು ಅವರೇ ಹೊರ ಬರುತ್ತಾರೆ.

ಮತ್ತೊಂದು ಸುವಿಚಾರ ಏನೆಂದರೆ ನೆನಪಿನಲ್ಲಿಟ್ಟುಕೊಳ್ಳಿ.
ಯಾವ ಮನಸ್ಸು ಅತಿಯಾಗಿ ಮರುಗುತ್ತದೆಯೋ,,ಅ ಮನಸ್ಸು ಒಂದು ದಿನ ಕೊರಗುವ ಸ್ಥಿತಿ ಬರುತ್ತದೆ.ಅದು ಕೂಡ ಮರುಗಿಸಿಕೊಂಡ ಮನಸ್ಸಿನಿಂದಲೇ.

ನೋಡಿ ಗೆಳೆಯರೆ ಇದರ ಅರ್ಥ ಒಂದೇ .ಎಲ್ಲರಿಗೂ ಎಲ್ಲದರ ಬಗ್ಗೆಯೂ ಅರಿವಿರುತ್ತದೆ.ಕಷ್ಟ- ನಷ್ಟ,             ಸುಖ- ದುಃಖ,  ನೋವು- ನಲಿವು, ಇವುಗಳು ಪ್ರತಿಯೊಬ್ಬರ ಜೀವನದಲ್ಲೂ ಆಟವಾಡುತ್ತವೆ .ಇವತ್ತು ನನ್ನ ಜೀವನದಲ್ಲಿ ಆಟವಾಡಿದರೆ,ನಾಳೆ ನಿಮ್ಮ ಜೀವನದಲ್ಲಿ ಆಟ ಮುಂದುವರೆಸುತ್ತದೆ.ಇಷ್ಟೆ ಜೀವನ ಇದರ ಬಂಧನಕೊಳಗಾದವರನ್ನು ನಾವು ಹುರಿದುಂಬಿಸಬೇಕೇ ವಿನಃ ಅಯ್ಯೋ,ಪಾಪ,ಈ ರೀತಿ ಅಗಬಾರದಿತ್ತು ಎಂದು ಮರುಗಬಾರದು.ಇವೆಲ್ಲ ಮಾನವನ ಜೀವನದಲ್ಲಿ ಸಹಜ ಇವುಗಳನ್ನು ಎದುರಿಸಿ ಮುಂದೆ ನುಗ್ಗಿ ಎಂಬ ಧೈರ್ಯದ ಮಾತುಗಳನ್ನು ಆಡುವವನೇ ನಿಜವಾದ ಜ್ಞಾನಿ.

ವಂದನೆಗಳು   
                                              ಇಂತಿ
                         ಹರೀಶ್ ವಿವೇಕಾನಂದ ಮಂಚಿಬೀಡು.



Comments

Popular posts from this blog