"" ಸ್ಫೂರ್ತಿಧಾಯಕ ಜೀವನ """" ಅದುವೇ ಮಾನವನ ಸಾಧನ ""
''"ಸಾಧನೆ ಇಲ್ಲದ ಜೀವನ - ರೆಕ್ಕೆಯಿಲ್ಲದ ಪಕ್ಷಿಯಂತೆ""
ಮಾನವನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರಿಗೂ ಆ ದೇವರು ಒಂದು ಉಚಿತವಾದ ಅನ್ ಲಿಮಿಟೆಡ್ ಮೆಮೋರಿ ಕಾರ್ಡ್ ಕೊಡ್ತಾನೆ.ಆದರೆ ಅದನ್ನು ಕೆಲವರು ತಮ್ಮ ತಮ್ಮ ಜೀವನ ಶೈಲಿಗೆ ತಕ್ಕಂತೆ ಬಳಸುತ್ತಾರೆ.ಇದರಲ್ಲಿ ಮುಖ್ಯ ವಿಚಾರವೇನೆಂದರೆ ಎಲ್ಲರೂ ಹೊಂದಿರುವ ಮೆಮೋರಿಯಲ್ಲಿ ಸಾಕಷ್ಟು ಬೇರೆ ಬೇರೆ ವಿಚಾರಗಳನ್ನು ಹಿಡಿದಿಟ್ಟಿದ್ದರು ಅವುಗಳ ಮೂಲ ಪರಿಕಲ್ಪನೆ ಒಂದೇ ಆಗಿರುತ್ತದೆ ಅದುವೇ ಜೀವನ.
ಈ ಜೀವನದಲ್ಲೂ ಸಹ ಒಂದು ಪೆಂಡ್ರೈವ್ ಕೊಟ್ಟಿರುತ್ತಾನೆ ಅದುವೇ ನಮ್ಮ ಮನಸ್ಸು(ಆತ್ಮ ಸಾಕ್ಷಿ).
ನೋಡಿ ಮಿತ್ರರೇ ಈ ಜೀವನ ಎಂಬುದು ನಶ್ವರ.ಇಲ್ಲಿ ಇಂದು ಜನಿಸಿ,ನಾಳೆ ಬದುಕಿ,ನಾಡಿದ್ದು ಅಳಿದು ಹೋಗಬೇಕು ಹಾಗಿರುವಾಗ ಇಲ್ಲಿ ,ನಾನು ,ನಂದು,ಅನ್ನೋದು ನೆಪಮಾತ್ರ.ಯಾಕೆಂದರೆ ಆ ದೇವರಿಂದ ನಮಗೆ ಸಾವಿನ ಕರೆ ಯಾವಾಗ ಬೇಕಾದರೂ ಬರಬಹುದು. ಮತ್ತು ಸಾವು ಬರುವುದೆಂಬ ಭಯದಲ್ಲಿ ನಾವು ಎಲ್ಲೇ ಅಡಗಿ ಕುಳಿತರು,ಆ ವಿಧಿ ನಮ್ಮನ್ನು ಹಿಂಬಾಲಿಸಿಯೇ ತೀರುತ್ತದೆ.ಇದು ತಿಳಿದಿದ್ದರು ಕೆಲವರು ತಾವು ಭೂಮಿಯ ಮೇಲೆ ಶಾಶ್ವತವಾಗಿ ಗೂಟ ಹೊಡೆದುಕೊಂಡು ಇಲ್ಲಿಯೇ ಇರುತ್ತೇವೆ ಎಂಬಂತೆ ವರ್ತಿಸುತ್ತಾರೆ. ಆದರೆ ಅವರಿಗೆ ಗೊತ್ತಿಲ್ಲ ವಿಶ್ವವನ್ನೇ ಗೆದ್ದ ಅಲೆಕ್ಸಾಂಡರ್ ತಾನು ಸತ್ತ ಮೇಲೆ ತನ್ನ ಕೈಗಳನ್ನು ಮೇಲೆ ಮಾಡಿ ಮಣ್ಣು ಮಾಡಿ ಎಂದಿದ್ದನಂತೆ.ಕಾರಣ ಇಷ್ಟೆ ನಾ ಯುದ್ದ ರಂಗದಲ್ಲಿ ಹೋರಾಡಿ ವಿಶ್ವವನ್ನೇ ಗೆದ್ದರೂ ಕೂಡ ಇಲ್ಲಿಂದ ಬರಿಗೈಯಲ್ಲಿಯೇ ಹೋಗುತ್ತಿದ್ದೇನೆ ನಾನು ಇಲ್ಲಿಂದ ಏನನ್ನೂ ತೆಗೆದುಕೊಂಡು ಹೋಗುತ್ತಿಲ್ಲ ಎಂಬುದು.ಅದರೆ ಅವನ ಹೆಸರು ಈಗಲೂ ಅಮರ ಕಾರಣ ಅವನು ಮಾಡಿದ ಸಾಧನೆ.
ನೋಡಿ ಮಿತ್ರರೆ ಈ ಬದುಕೆಂಬುದು ಇತಿಹಾಸವಾಗಬೇಕು.
ನಾವು ಮಾಡುವ ಪ್ರತಿಯೊಂದು ಕಾರ್ಯವು ಕೂಡ ದೇವರ ನಿಮಿತ್ತ ವಾಗಿರುತ್ತದೆ .ಈ ಭೂಮಿ ಮೇಲೆ ಸಹಸ್ರಾರು ಮಂದಿ ಹುಟ್ಟಿ ಸಾಯುತ್ತಾರೆ.ಅದರೆ ಸ್ಥಿರಸ್ಥಾಯಿಯಾಗಿ ಸತ್ತನಂತರವೂ ತಮ್ಮ ಹೆಸರಿನ ಮೂಲಕ ಬದುಕುಳಿಯುವವರು ಕೇವಲ ಬೆರಳೆಣಿಕೆಯಷ್ಟೆ.ಇನ್ನುಳಿದವರು ಹುಟ್ಟಿದ್ದಕ್ಕು ಸತ್ತಿದ್ದಕ್ಕು ವ್ಯತ್ಯಾಸ ಇಲ್ಲ.ಆ ಸಾಲಿನಲ್ಲಿ ನೀವಿರಬೇಡಿ.
ಪ್ರತಿಯೊಬ್ಬರೂ ತಮ್ಮ ಜೀವನವನ್ನು ಆ ದೇವರು ಯಾವುದೋ ಒಂದು ಕಾರ್ಯ ಸಿದ್ದಿಗೆ ಕೊಟ್ಟಿದ್ದಾನೆ. ನಾವು ಅದನ್ನು ಜವಾಬ್ದಾರಿ ಯುತವಾಗಿ ನಮ್ಮ ಆಯಸ್ಸು ಮುಗಿಯುವ ಒಳಗೆ ಪೂರ್ಣಗೊಳಿಸಿ ಹೋಗಬೇಕು. ಎಂದುಕೊಂಡು ನಮ್ಮ ಜೀವನದ ಹೆಜ್ಜೆ ಹಾಕುತ್ತಾ, ಏನೆ ಬಂದರೂ ಎದೆಗುಂದದೆ ಸಾಗಿ ನಮ್ಮ ಗುರಿತಲುಪಿದರೆ ಮಾತ್ರ ನೆಲೆ ಇಲ್ಲಿ .ಇಲ್ಲವಾದರೆ ಯಾವುದೇ ಬೆಲೆಯಿಲ್ಲ.ಮತ್ತು ನಮಗೂ ಜಡ ವಸ್ತುವಿಗೂ ವ್ಯತ್ಯಾಸ ಇಲ್ಲ.
ಮುಖ್ಯವಾದ ಇನ್ನೊಂದು ವಿಚಾರ ಏನೆಂದರೆ. ನಾವು ನಮ್ಮ ಜೀವನದಲ್ಲಿ ಯಾರೊಬ್ಬರನ್ನೂ ಅವಲಂಬಿಸದೇ ,ಸ್ವಾವಲಂಬಿಯಾಗಿ ಬದುಕಿ ನಮ್ಮ ಗುರಿ ತಲುಪಬೇಕು.ಯಾಕೆಂದರೆ ಈ ಪ್ರಪಂಚದಲ್ಲಿ ನಮ್ಮ ಕೋಳಿಯಿಂದನೇ ಬೆಳಕಾಗಿದ್ದು ಎನ್ನುವ ಮಂದಿ ಬಹಳ ಇದ್ದಾರೆ.
ನೋಡಿ ಗೆಳೆಯರೆ ನಾವು ನಮ್ಮ ಕಾರ್ಯ ಸಾಧನೆಗೆ ನಿಂತಾಗ ಯಾರೋ ಬಂದು ಸಹಾಯ ಮಾಡುತ್ತಾರೆ ಎಂದು ಕೂರಬಾರದು.ನಮ್ಮ ಸಾಧನೆಗೆ ಸ್ಫೂರ್ತಿಯಾಗುವ ಅದೆಷ್ಟೋ ಮಹಾನ್ ಸಾಧಕರ ಜೀವನ ಚರಿತ್ರೆ, ಮತ್ತು ಆತ್ಮಸ್ಥೈರ್ಯ ತುಂಬಿ ಹುರಿದುಂಬಿಸುವಂತಹ ಪುಸ್ತಕಗಳಿವೆ ಬಳಸಿಕೊಳ್ಳಿ .
ಉದಾಹರಣೆಗೆ:- ಒಮ್ಮೆ ಒಂದು ಕಾಲೇಜಿನಲ್ಲಿ ವಿವೇಕಾನಂದರ ಬಗ್ಗೆ ಭಾಷಣ ಮಾಡುವ ವೇಳೆಯಲ್ಲಿ ಪೂಜ್ಯ ತೇಜಸ್ವಿ,ಭಾರತದ ಭಗೀರಥ, ಬಂಗಾಳದ ಹುಲಿ,
ಭವ್ಯ ಭಾರತದ ಮಹಾನ್ ಪುರುಷ , ಸ್ವಾಮಿ ವಿವೇಕಾನಂದರನ್ನು ಸ್ಮರಿಸುತ್ತಾ ಒಬ್ಬ ಯುವಕ ಮಾತನಾಡುತ್ತಾನೆ ,ಸ್ವಾಮಿ ವಿವೇಕಾನಂದರು ಬದುಕಿದ್ದರೆ ಇಂದು ಈ ನಮ್ಮ ಭಾರತ ದೇಶ ಅತೀ ವೇಗವಾಗಿ ಬೆಳೆದು ಜಗತ್ತೇ ಭಾರತದತ್ತ ತಿರುಗಿ ನೋಡುವ ಹಾಗಾಗುತ್ತಿತ್ತು.ನಮ್ಮಂತ ಅದೇಷ್ಟೋ ಯುವ ಚೇತನಗಳು ಸಾಧನೆ ಮಾಡುತ್ತಿದ್ದರೂ ಎಂದನಂತೆ. ಆ ಸಮಯದಲ್ಲಿ ಅಲ್ಲಿಯೇ ಕುಳಿತಿದ್ದ ವಿವೇಕಾನಂದರ ಅನುಯಾಯಿ ಆ ಹುಡುಗನಿಗೆ ಹೇಳ್ತಾರೆ, ನೋಡು ಮಗು ವಿವೇಕಾನಂದರು ಬದುಕಿದ್ದಾಗ ನಿಮ್ಮಂತಹ ಯುವಕರನ್ನು ಉದ್ದೇಶಿಸಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ ಯಾಕೆ?. ನನ್ನ ಕಾಲದ ನಂತರ ಬರುವ ಅದೇಷ್ಟೋ ಚೆತನಗಳಿಗೆ ಈ ಪುಸ್ತಕಗಳು ದೀಪವಾಗಲಿ ಅಂತ.ಅವುಗಳನ್ನು ನೋಡಿ ಕಲಿಯಿರಿ.ಅವುಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ನನ್ನ ಪ್ರಕಾರ ಆ ಪುಸ್ತಕಗಳನ್ನು ಓದಿದ ಪ್ರತಿಯೊಬ್ಬ ವ್ಯಕ್ತಿಯೂ ಒಂದು ಚೈತನ್ಯದ ಚಿಲುಮೆಯಾಗಿ ಹೊರಹೊಮ್ಮತಾನೆ ಎಂದರಂತೆ .ತಕ್ಷಣ ಅಲ್ಲಿ ನೆರೆದಿದ್ದ ಜನಸ್ತೋಮವೆಲ್ಲ ಏನೋ ಒಂದು ರೀತಿ ಹರ್ಷೋದ್ಘಾರದಲ್ಲಿ ಮುಳಿಗಿತಂತೆ.ಇದಷ್ಟೆ ಅಲ್ಲ ಇಂತಹ ಪ್ರಸಂಗಗಳು ಬಹಳಷ್ಟಿವೆ.
ನೋಡಿ ಗೆಳೆಯರೆ ಇಷ್ಟೇ ಜೀವನ .ತಮ್ಮ ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತಾನು ಹೇಗಿರಬೇಕು,ಯಾವ ರೀತಿ ಬದುಕಬೇಕು,ನನ್ನಿಂದ ಸಮಾಜಕ್ಕೇನಾಗಬೇಕು, ಎಂದುಕೊಂಡು ತನ್ನ ಜೀವನ ಚಕ್ರಕ್ಕೆ ತಾನೆ ಎಲ್ಲೆಗಳನ್ನು ನಿರ್ಮಿಸಿಕೊಂಡು ಬದುಕಿದರೆ ಅವನೇ ಸಾಧಕ.ಆ ಸಾಧನೆಯನ್ನು ನೀವು ಮಾಡಿದ್ದೇ ಆದರೆ ಮುಂದೊಂದು ದಿನ ,ನಿಮ್ಮ ಸಾಧನೆಯೇ ಸ್ಪೂರ್ತಿಯಾಗಿ ಇನ್ನೊಬ್ಬ ಸಾಧಕನನ್ನು ಸೃಷ್ಟಿಸುತ್ತದೆ.ನಿಮ್ಮ ಹೆಸರೂ ಕೂಡ ಮುಂದೆ ನನ್ನಂತಹ ಯುವಕರು ಬರೆಯುವ ಸ್ಪೂರ್ತಿದಾಯಕ ಸಂದೇಶಗಳಲ್ಲಿ ರಾರಾಜಿಸುತ್ತದೆ.
""ಗುರಿ ಇಲ್ಲದ ಜೀವನ- ದಿಕ್ಸೂಚಿ ಇಲ್ಲದ ಹಡಗಿನಂತೆ"".
ವಂದನೆಗಳೊಂದಿಗೆ,,,,,
ಇಂತಿ ನಿಮ್ಮ
ಹರೀಶ್ ವಿವೇಕಾನಂದ ಮಂಚಿಬೀಡು
Comments
Post a Comment