💘💜 ಪ್ರೀತಿಯೆಂಬ ಮಾಯೆ 💛💚
ಪ್ರೀತಿ ಇದೊಂದೆ ಇಂದು ನಾವು ಪ್ರತಿದಿನ ಈ ಜಗದಲ್ಲಿ ನೋಡುತ್ತಿರುವ ಒಂದು ಮಾಯಾಜಾಲಾ. ಪ್ರೀತಿಯ ಬಗ್ಗೆ ಅದೆಷ್ಟೋ ಕವಿಗಳು, ಸಾಹಿತಿಗಳು ತಮ್ಮದೇ ಆದ ಶೈಲಿಯಲ್ಲಿ ಅದಕ್ಕೆ ಚಿತ್ರಣ,ವಿಮರ್ಶೆ, ಕಾಲ್ಪನಿಕತೆ ಈಗೆ ಹಲವಾರು ಆಯಾಮಗಳಲ್ಲಿ ಅದನ್ನು ಹೊರ ಪ್ರಪಂಚಕ್ಕೆ ತಂದು ಅದರ ಒಲವು ನಿಲುವುಗಳ ಬಗ್ಗೆ ಬಹಳ ಅರ್ಥ ಪೂರ್ಣವಾಗಿ ಹೇಳಿದ್ದಾರೆ. ಕೆಲವರು ಧನಾತ್ಮಕಾವಾಗಿ, ಕೆಲವರು ಋಣಾತ್ಮಕವಾಗಿ, ಇನ್ನೂ ಕೆಲವರು ಇವೆರಡರ ಸಮ್ಮಿಶ್ರಣದಿಂದ ಋಣಾತ್ಮಕ+ಧನಾತ್ಮಕವಾಗಿ ಬಿಂಬಿಸಿದ್ದಾರೆ ಆದರೆ ಅದರಲ್ಲಿ ಅವರದ್ದು ಏನು ತಪ್ಪಿಲ್ಲ. ಯಾಕೆಂದರೆ ಅವರು ಪ್ರೀತಿಯನ್ನು ಒಂದು ವಿಚಾರವಾಗಿ ಅಷ್ಟೇ ತೆಗೆದುಕೊಂಡು ಅದರ ಮೇಲೆ ತಮ್ಮ ಅಭಿವ್ಯಕ್ತತೆ ವ್ಯಕ್ತಪಡಿಸುತ್ತಾರೆ ಹೊರತು ಇದನ್ನು ಕರಾರು ಒಕ್ಕಾಗಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋಗಿ ಎಂದು ಎಲ್ಲೂ ಹೇಳಿಲ್ಲ. ಈ ಪ್ರೀತಿ ವಿಚಾರ ಬಂದಾಗ ಪ್ರತಿಯೊಬ್ಬರು ತಮ್ಮ ಪ್ರೀತಿಯ ಬಗ್ಗೆ ವ್ಯಕ್ತಪಡಿಸತ್ತಾರೆ ಆದರೆ ಅದರಲ್ಲಿ ಇನ್ನೂ ಅದೆಷ್ಟೋ ಮಂದಿಗೆ ಅರ್ಥನೇ ಆಗಿರೊಲ್ಲ ಇದೆಲ್ಲಕ್ಕಿಂತ ಮೀರಿದ ಪ್ರೀತಿ, ತಂದೆ-ತಾಯಿಯ ಪ್ರೀತಿ. ಅಜ್ಜ-ಅಜ್ಜಿ ತಮ್ಮ ಮೊಮ್ಮಕ್ಕಳ ಮೇಲಿಟ್ಟಿರುವ ಪ್ರೀತಿ, ಅಕ್ಕ-ತಂಗಿಯರ ಪ್ರೀತಿ, ಅಣ್ಣ-ತಮ್ಮಂದಿರ ಪ್ರೀತಿ. ಕಿತ್ತರೂ ಬರದ ಹಾಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡ...