💘💜 ಪ್ರೀತಿಯೆಂಬ ಮಾಯೆ 💛💚
ಪ್ರೀತಿ ಇದೊಂದೆ ಇಂದು ನಾವು ಪ್ರತಿದಿನ ಈ ಜಗದಲ್ಲಿ ನೋಡುತ್ತಿರುವ ಒಂದು ಮಾಯಾಜಾಲಾ. ಪ್ರೀತಿಯ ಬಗ್ಗೆ ಅದೆಷ್ಟೋ ಕವಿಗಳು, ಸಾಹಿತಿಗಳು ತಮ್ಮದೇ ಆದ ಶೈಲಿಯಲ್ಲಿ ಅದಕ್ಕೆ ಚಿತ್ರಣ,ವಿಮರ್ಶೆ, ಕಾಲ್ಪನಿಕತೆ ಈಗೆ ಹಲವಾರು ಆಯಾಮಗಳಲ್ಲಿ ಅದನ್ನು ಹೊರ ಪ್ರಪಂಚಕ್ಕೆ ತಂದು ಅದರ ಒಲವು ನಿಲುವುಗಳ ಬಗ್ಗೆ ಬಹಳ ಅರ್ಥ ಪೂರ್ಣವಾಗಿ ಹೇಳಿದ್ದಾರೆ. ಕೆಲವರು ಧನಾತ್ಮಕಾವಾಗಿ, ಕೆಲವರು ಋಣಾತ್ಮಕವಾಗಿ, ಇನ್ನೂ ಕೆಲವರು ಇವೆರಡರ ಸಮ್ಮಿಶ್ರಣದಿಂದ ಋಣಾತ್ಮಕ+ಧನಾತ್ಮಕವಾಗಿ ಬಿಂಬಿಸಿದ್ದಾರೆ ಆದರೆ ಅದರಲ್ಲಿ ಅವರದ್ದು ಏನು ತಪ್ಪಿಲ್ಲ. ಯಾಕೆಂದರೆ ಅವರು ಪ್ರೀತಿಯನ್ನು ಒಂದು ವಿಚಾರವಾಗಿ ಅಷ್ಟೇ ತೆಗೆದುಕೊಂಡು ಅದರ ಮೇಲೆ ತಮ್ಮ ಅಭಿವ್ಯಕ್ತತೆ ವ್ಯಕ್ತಪಡಿಸುತ್ತಾರೆ ಹೊರತು ಇದನ್ನು ಕರಾರು ಒಕ್ಕಾಗಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋಗಿ ಎಂದು ಎಲ್ಲೂ ಹೇಳಿಲ್ಲ. ಈ ಪ್ರೀತಿ ವಿಚಾರ ಬಂದಾಗ ಪ್ರತಿಯೊಬ್ಬರು ತಮ್ಮ ಪ್ರೀತಿಯ ಬಗ್ಗೆ ವ್ಯಕ್ತಪಡಿಸತ್ತಾರೆ ಆದರೆ ಅದರಲ್ಲಿ ಇನ್ನೂ ಅದೆಷ್ಟೋ ಮಂದಿಗೆ ಅರ್ಥನೇ ಆಗಿರೊಲ್ಲ ಇದೆಲ್ಲಕ್ಕಿಂತ ಮೀರಿದ ಪ್ರೀತಿ, ತಂದೆ-ತಾಯಿಯ ಪ್ರೀತಿ. ಅಜ್ಜ-ಅಜ್ಜಿ ತಮ್ಮ ಮೊಮ್ಮಕ್ಕಳ ಮೇಲಿಟ್ಟಿರುವ ಪ್ರೀತಿ, ಅಕ್ಕ-ತಂಗಿಯರ ಪ್ರೀತಿ, ಅಣ್ಣ-ತಮ್ಮಂದಿರ ಪ್ರೀತಿ. ಕಿತ್ತರೂ ಬರದ ಹಾಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡ ಸಾಗುವ ಗೆಳೆಯ ಗೆಳತಿಯರ ಪ್ರೀತಿ. ಆದರೆ ಇಂದು ಪ್ರಪಂಚದಲ್ಲಿ ಇದು ತನ್ನ ದಿಕ್ಕು ಬದಲಿಸಿ ಇಂದಿನ ಯುವ ಸಂಕುಲವನ್ನೇ ತನ್ನ ಬಳಿಗೆ ಸೆಳೆದುಕೊಂಡು ಅದಕ್ಕೆ ಅದರದೇ ಆದ ತಾತ್ಪರ್ಯ ಕಲ್ಪಿಸಿ, ಒಬ್ಬರನೊಬ್ಬರು ಪ್ರೇಮಿಸಿ ಮದುವೆಯಾಗುವುದೇ ನೈಜ ಪ್ರೇಮ ಎನ್ನುವ ಮಟ್ಟಿಗೆ ಬಂದು ನಿಂತಿದೆ. ಈ ಪ್ರೀತಿಗಾಗಿ ಇಂದಿನ ತಲೆಮಾರಿನ ಯುವ ಮನಸ್ಸುಗಳು ತಮ್ಮ ತಮ್ಮ ಬದುಕಿನ ದಿಕ್ಕನ್ನು ಅದರ ಕಪಿಮುಷ್ಟಿಗೆ ಕೊಟ್ಟು ತಮ್ಮ ಬಾಳನ್ನೇ ಬಲಿಕೊಡಲು ಮುನ್ನುಗ್ಗುತ್ತಿದ್ದಾರೆ. ಹೇಗೆ ಬಲಿಕೊಳಲು ಸಿದ್ದರಿರುವುದನ್ನು ಹೆಚ್ಚು ವಿವರಿಸುವ ಅಗತ್ಯವಿಲ್ಲ ಎಂಬುದು ನನ್ನ ಭಾವನೆ ಯಾಕಂದ್ರೆ ದೈನಂದಿನ ಜೀವನದಲ್ಲಿ ಪ್ರತಿಯೊಬ್ಬರೂ ಕೂಡ ಶಾಲೆಯಿಂದ ಹಿಡಿದು ಕಾಲೇಜಿನವರೆಗೂ ಮನೆಯಿಂದ ಹಿಡಿದು ಕಾರ್ಯೋನ್ಮುಕರಾಗುವ ವರೆಗೂ ಇದರ ಬಗ್ಗೆ ಎಲ್ಲರೂ ಗಮನಿಸುತ್ತಿದ್ದಾರೆ.
ಆದರೆ ಈ ಪ್ರೀತಿಗೆ ಇತ್ತೀಚಿಗೆ ಹೇಗೆ ಬಣ್ಣ ಕಟ್ಟಿ ಮರೆಮಾಚುತ್ತಿದ್ದಾರೆ ಎಂದರೆ, ಇದನ್ನೇ ಈ ಪ್ರೀತಿಯನ್ನೇ, ಈ ಲವ್ ಅನ್ನೇ ಒಂದು ಅಸ್ತ್ರವಾಗಿ ಮಾಡಿಕೊಂಡು ಅದೆಷ್ಟೋ ಮುಗ್ದ ಮನಸ್ಸುಗಳ ಹೃದಯ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಒಂದು ಸರ್ಕಾರಿ ಉದ್ಯೋಗದಲ್ಲಿರುವ ಹುಡುಗ ಅಥವಾ ಹುಡುಗಿ ಎಂದರೆ ಸಾಕು ಅದಕ್ಕೆ ಅಲ್ಲೇ ಅವರದ್ದೇ ಅದ ಎಲ್ಲೆ ನಿರ್ಮಿಸಿ ಪ್ರೀತಿಸುವವರು ಇದ್ದಾರೆ. ಒಬ್ಬರು ಅರ್ಥಿಕವಾಗಿ ಬಲಿಷ್ಟರಾಗಿದ್ದಾರೆ ಅಂದರೆ ಸಾಕು ಅದಕ್ಕೂ ಕೂಡ ಅದಕ್ಕೆ ಬೇಕಾದ ಶೈಲಿಯಲ್ಲಿ ಬಲೆ ಬೀಸುತ್ತಾರೆ. ಈಗೆ ಹಲವಾರು ವಾಮ ಮಾರ್ಗಗಳಲ್ಲಿ ಪ್ರೀತಿಯನ್ನು ಬೆಳೆಸುತ್ತಾರೆ. ಅಂತಿಮವಾಗಿ ಸಿಕ್ರೆ ಮದುವೆ ಅಗ್ತಾರೆ, ಸಿಗಲಿಲ್ಲ ಅಂದರೆ ಸಾಯ್ತಾರೆ. ಮದುವೆ ಆದೋರು ಆದ್ರು ನೆಟ್ಟಗೆ ಇರ್ತಾರಾ ಕೆಲವರಂತೂ ವರ್ಷ ಕಳೆಯುವಷ್ಟರಲ್ಲೇ ತಮ್ಮ ದಾಂಪತ್ಯಕ್ಕೆ ಇತಿಶ್ರಿ ಇಡಲು ವಿಚ್ವೆಧನದ ಕಡೆ ಮನಸ್ಸು ಮಾಡುತ್ತಾರೆ. ಇದಕ್ಕೆಲ್ಲ ಮೂಲ ಕಾರಣ ಒಬ್ಬರು ಇನ್ನೊಬ್ಬರ ಮೇಲೆ ಭಾವ ಪರವಷವಾಗಿ ತನ್ನ ಅಂತರಿಕ ವಿಷಯಗಳನ್ನೆಲ್ಲ ಅವರ ಬಳಿ ವ್ಯಕ್ತಪಡಿಸಿ ತಮ್ಮ ಋಣಾತ್ಮಕ ವಿಚಾರ ಎಲ್ಲಾ ಅವರ ಬಳಿ ಒದರುವುದು.
ಇವೆಲ್ಲದಕ್ಕೂ ಮೀರಿ ಇಂದು ಕೆಲವು ಸೋಷಿಯಲ್ ಮೀಡಿಯಾ ಲವರ್ ಗಳು ಇದನ್ನೇ ಅಸ್ತ್ರವಾಗಿ ಬಳಸಿಕೊಂಡು ತಮ್ಮ ತಮ್ಮ ಬೇಳೆಕಾಳುಗಳನ್ನು ಬೇಯಿಸಿಕೊಳ್ಳಲು ಅಂದ್ರೆ , ಸೋಷಿಯಲ್ ಮೀಡಿಯಾ ಸ್ಟಾರ್ ಆಗಲು, ಸೋಷಿಯಲ್ ಮೀಡಿಯಾಗಳಿಂದ ಹಣ ಗಳಿಸಲು ಫಾಲೋವರ್ಸ್ ಗಳನ್ನು ಗಳಿಸಲು,ಲೈಕ್ ಮತ್ತು ಕಮೆಂಟ್ ಗಳನ್ನು ಪಡೆಯಲು ಯಾರಾದ್ರೇನು ಧಿಡೀರನೆ ಅವರನ್ನು ಸೆಳ್ಕೊಳ್ಳೋದು ಪ್ರೊಫೋಸ್ ಮಾಡೋದು ಲೈಕ್, ಕಮೆಂಟ್, ಸಬ್ ಕ್ರಿಪ್ಚನ್ ಪಡ್ಕೊಳ್ಳೋದು ಅವರನ್ನ ನಂಬಿಸಿ ಅವರಲ್ಲಿ ಎಲ್ಲಲ್ಲದ ಪ್ರೀತಿ ತುಂಬಿ ಟಾಟಾ ಮಾಡಿ ಹೋಗೋದು. ಅವರನ್ನ ಹೆಚ್ಚು ಹಚ್ ಕೊಂಡೋನು ಕಡೆಗೆ ಹುಚ್ ಹಿಡಿದು ಹೆಚ್ ದಿನ ಬದುಕೋಕಾಗ್ದೆ ತನ್ ಪ್ರಾಣದ್ ಸಮೇತ ಕೊಚ್ ಹೋಗೋದು ಇಷ್ಟೇ ಈಗಿನ ಮಾಯೆಯ ಪ್ರೀತಿ. ಇದರಲ್ಲಿ ನಾನೇಳಿರುವ ಪ್ರೀತಿಯೆಂಬ ಮಾಯೆ ಎನ್ನುವ ತಾತ್ಪರ್ಯದ ಮಾಯೆಯೂ ಕೂಡ ಇದೆ.
ನೋಡಿ ಪ್ರೀತಿ ಅನ್ನೋಂದು ಒಂದು ಬಾಂಧವ್ಯ, ನಂಬಿಕೆ. ಅದೊಂದು ಬೆಲೆಕಟ್ಟಲಾಗದ ಸಂಭಂಧ.ಅದನ್ನು ಹಾಗೆ ಉಳಿಸಿ ಬೆಳೆಸೋಣ ಅದರ ಘನತೆ ಎತ್ತಿ ಹಿಡಿಯೋಣ.
ನಾಟಕದ ಬಣ್ಣ ಹಚ್ಚುವುದನ್ನು ಬಿಟ್ಟು ನೈಜವಾಗಿ
ಪ್ರೀತೀನಾ-ಪ್ರೀತಿಯಿಂದ-ಪ್ರೀತ್ಸೋಣ.
(ಶೀಘ್ರದಲ್ಲಿಯೇ ಇದಕ್ಕೆ ಕಥಾ ನಾಯಕಿಯ ಪರಿಚಯ)
🖋 ಹರೀಶ್.ಎಂ.ಎಸ್. ಮಂಚಿಬೀಡು.
Comments
Post a Comment