ಅವಳೆಂದರೆ!?!?!?!?

              


     ಅವಳೆಂದರೆ ಯಾರವಳು, ಎಲ್ಲಿದ್ದಳು, ಯಾಕೆ‌ ಬಂದಳು,‌ ಎಲ್ಲಯವಳು, ಎಂದೆಲ್ಲಾ ಸಂದೇಹಗಳು ಮೂಡುವುದು ಸಹಜ.   ಆದರೆ ಯಾರವಳು‌‌ ಎಂದರೆ ಎಂತಹ ಜಡ ವಸ್ತುವು ಸಹ  ಪುಟಿದೇಳುವಂತೆ‌ ಮಾಡುವ ಒಂದು ಚಿಲುಮೆ. ಆದರೆ ಅದು ತಾಯಿಯಾಗಿ‌ ಆದರು ಸರಿ, ಸಹೋದರಿಯಾಗಿ‌ ಆದರು ಸರಿ, ಮಡದಿಯಾಗಿ ಆದರು ಸರಿ, ಬದುಕಿನ ಒಬ್ಬ ಅಧ್ಬುತ ಗೆಳತಿಯಾಗಿ ಆದರು ಸರಿ.

       ಅಂದರೆ ಒಟ್ಟಾರೆಯಾಗಿ ಹೇಳಬೇಕೆಂದರೆ ನಮ್ಮ ಬದುಕಿನಲ್ಲಿ ಅವಳ ಪಾತ್ರ ಹೆಚ್ಚಿನ ಭಾಗವಾಗಿರುತ್ತದೆ. ಒಬ್ಬ ತಾಯಿ ತಾನು‌ ಹಡೆದ ಮಗುವು ತನ್ನ ಕಣ್ಣ ಮುಂದೆ ಹೇಗೆಲ್ಲ ಬದುಕಿ ಬಾಳಬೇಕು ಎಂದೆಲ್ಲಾ ಕನಸುಗಳನ್ನು ತನ್ನ ಕರುಳೊಳಗಿನ ಕಂದ ಇನ್ನೂ ಈ ಹೊರ ಪ್ರಪಂಚಕ್ಕೆ ಬರುವ ಮುಂಚೆಯೇ ಒಂದು ಕನಸುಗಳ ಗುಚ್ಚವನ್ನು ಕಟ್ಟಿಕೊಂಡು ಕಂದನ ಬರುವಿಕೆಗಾಗಿ ಕಾಯುತ್ತಿರುತ್ತಾಳೆ.  ಇಷ್ಟೆಲ್ಲಾ‌ ಆದ ನಂತರ ತನ್ನ ಒಡಲೊಳಗಣ ಕೂಸು ಹೊರ ಪ್ರಪಂಚಕ್ಕೆ ಬಂದ ಮೇಲೆ‌ ಅವಳ ಹೊರ ಪ್ರಪಂಚ ಮರೆತು ತನ್ನ ಕಂದನೇ ನನ್ನ ಪ್ರಪಂಚ ಎಂದುಕೊಂಡು‌ ತನ್ನ ಜೀವನದ ಪಯಣ ಸಾಗಿಸುತ್ತಾಳೆ. ತನ್ನೆಲ್ಲಾ ಇಷ್ಟ ಕಷ್ಟಗಳನ್ನು‌ ಬದಿಗಿಟ್ಟು ನನ್ನ ಕಂದನ ಬಾಳು ಬೆಳಗಲು‌ ತಾನೆ ಉರಿ ಜ್ವಾಲೆಯಲ್ಲಿ‌ ತನ್ನ ಬೆವರೆಂಬ ನೆತ್ತರನ್ನು ಬಸಿದು ಸಾಕಿ ಸಲಹಿ ಒಂದು ಮೂರ್ತಿಯ ರೂಪ ಕೊಟ್ಟು ನಮ್ಮನ್ನ ಈ ಪ್ರಪಂಚಕ್ಕೆ ಪರಿಚಯಿಸುತ್ತಾಳೆ.

     ಇನ್ಮೂ ಅದಕ್ಕಿಂತಲೂ ಮೀರಿ ಮುಂದೆ ಹೋದರೆ  ಒಬ್ಬ ಸಹೋದರಿಯಾಗಿ ನಮ್ಮ‌ ಬಾಳಲ್ಲಿ‌ ಬರುತ್ತಾಳೆ. ನಮ್ಮ ಬಾಳಲ್ಲಿ‌ ಅವಳ ಅವಶ್ಯಕಥೆ ಎಷ್ಟರುತ್ತದೆ ಅಂದರೆ ನಮ್ಮ ಬಾಳಿನ ಮೊದಲ ಗೆಳತಿಯಾಗಿ ನಮ್ಮೆಲ್ಲಾ ಆಗು ಹೋಗುಗಳ ಕಡೆ ಗಮನ ಹರಿಸಿಕೊಂಡು‌, ನಮ್ಮ ಹಿತೋಪದೇಶ ಕಾಯ್ದುಕೊಂಡು ನಮ್ಮ ಶ್ರೇಯೋಭಿರುದ್ದಿ ಬಗ್ಗೆ ಕನಸು ಕಂಡುಕೊಂಡು ನನ್ನ ಸಹೋದರ/ ಸಹೋದರಿ ನಾಲ್ಕು‌ ಜನಕ್ಕೆ‌ ಸರಿಸಾಟಿಯಾಗಿ ನಿಲ್ಲುವಂತ ಸ್ಪೂರ್ತಿ ತುಂಬು‌ದೇವರೆ ಎಂದೆಲ್ಲ ಬೇಡಿಕೊಂಡು ತಾನೆಲ್ಲೇ ಇದ್ದರು  ನಮ್ಮ ಬೆಳವಣಿಗೆಯನ್ನೇ ಬಯಸುತ್ತಾಳೆ.

      ಇನ್ನೂ ಅದಕ್ಕೂ ಮೀರಿ ಮುಂದೆ ಹೋದರೆ ನಮ್ಮ‌ ಬಾಳ ಸಂಗಾತಿಯಾಗಿ‌ ನಮ್ಮ ಬಾಳಲ್ಲಿ ಬರುತ್ತಾಳೆ. ನಮ್ಮ‌ ಬದುಕಲ್ಲಿ‌ ಅವಳ‌ ಸ್ಥಾನ ಏನೆಂಬುದನ್ನು ‌ಅರ್ಥೈಸುತ್ತಾಳೆ. ತಾ ಒಂದು ಮೂಲೆಯಲ್ಲಿ ಎಲ್ಲೋ ಜನಿಸಿ, ಹಡೆದ ಅಪ್ಪ ಅಮ್ಮನನ್ನೂ ಬಿಟ್ಟು ಬಂದು ನಾವೆಲ್ಲೇ ಹೋದರು  ನಮ್ಮ ಬದುಕಿನುದ್ದಕ್ಕೂ ನಾವು ಇಡುವ ಪ್ರತಿ ಹೆಜ್ಜೆಯಲ್ಲೂ  ಅವಳು ಕೂಡ ಹಿಂದೆ ತನ್ನ ಹೆಜ್ಜೆಯನ್ನು ಹಾಕಿಕೊಂಡು ಹಗಲು ಇರುಳೆನ್ನದೆ, ಮಳೆ- ಚಳಿ ಎನ್ನದೆ, ನಮ್ಮ ಪ್ರತಿ ಸಂಧರ್ಭದಲ್ಲಿ ಅವಳು ಒಂದು ಜ್ವಾಲಾಮುಖಿಯ ದೀಪದಂತೆ ಪ್ರಜ್ವಲಿಸುತ್ತಾ ನಮ್ಮ ಏಳ್ಗೆ ಕಾಯುತ್ತಾಳೆ. ಬಾಳ ಒಬ್ಬ ಅತ್ಯುತ್ತಮ ಗೆಳತಿಯಾಗಿ ನಮ್ಮ ಕ್ಷೇಮವನ್ನೇ ಬಯಸುತ್ತಾಳೆ. ನಾನು ಮೇಲೆ ಹೇಳಿದ ಅವರೆಲ್ಲರೂ ಪ್ರತ್ಯಕ್ಷವಾಗಿ ನಿಂತು‌ ನಮ್ಮ ಯಶಸ್ಸನ್ನ ಬಯಸಿದರೆ, ಈ ಮಡದಿ ಎಂಬುವವಳು  ನಮ್ಮೊಡನೆ ನಿಂತು‌ ಯಾರಿಗೂ ಕಾಣದಂತೆ ನಮ್ಮ ಬೆನ್ನೆಲುಬಿನ ಒಂದು‌ ಭಾಗವಾಗಿ ನಮ್ಮ ಆಗು ಹೋಗುಗಳ ಬಗ್ಗೆ ಗಮನ ಹರಿಸಿ ನಾವು ಎಂತಹ ಪರಿಸ್ಥಿತಿಯಲ್ಲೂ ಸಹ ನಮ್ಮ‌ತನವನ್ನು ಕಳೆದುಕೊಂಡು ಕೂತರು‌ ನಮ್ಮನ್ನು ಕಾಣದ ಶಕ್ತಿಯಂತೆ ಹುರಿದುಂಬಿಸುತ್ತಾ ಮತ್ತೊಮ್ಮೆ‌ ನಾವು‌ ಪುಟಿದೇಳುವಂತೆ ಹುರಿದುಂಬಿಸುತ್ತಾಳೆ. ಪ್ರಪಂಚದಲ್ಲಿ ಅದೆಷ್ಟೋ ದಂತಕಥೆಗಳು ಸೃಷ್ಟಿಯಾಗಿ ಹೋಗಿವೆ. ಅವುಗಳಲ್ಲಿ ಕೆಲವು ನಶಿಸಿವೆ ಇನ್ನೂ ಕೆಲವು ಹೆಮ್ಮರವಾಗಿ ಬೆಳೆದಿವೆ. ಕಾರಣ ಅದಕ್ಕೆ ನಮ್ಮಲ್ಲಿರುವ ಕೆಲವು ನೂನ್ಯತೆಗಳು. ಯಾವುದೇ ಮೂಲೆಯಲ್ಲಿ‌ ಹುಟ್ಟಿ ತನ ಬಳಗವನ್ನೇ ತೊರೆದು ಕಟ್ಟಿದ ತಾಳಿಗೆ ನಿಷ್ಟೂರತೆಯಿಂದ ನಮ್ಮ ಹಿಂದೆ  ಬಂದು ನಮ್ಮಲ್ಲಿರುವ ಒಂಟಿತನವನ್ನು ಹೋಗಲಾಡಿಸಿ ನಮ್ಮಲ್ಲಿ ಹೊಸ ಚೈತನ್ಯದ ಚಿಲುಮೆ‌ ಪ್ರವಹಿಸುವಂತೆ ಮಾಡಿ ನಮ್ಮೊಳಗಿನ ಆಂತರಿಕ ಶಕ್ತಿಯನ್ನು ಹೊರ ಪ್ರಪಂಚಕ್ಕೆ ಪರಿಚಯಿಸುತ್ತಾರೆ. ಆದರೆ ಕೆಲವರು ಈ ಎಲ್ಲಾ ತ್ಯಾಗಗಳನ್ನು ಮಾಡಿ ನಮ್ಮ ಶ್ರೇಯಸ್ಸನ್ನು ಕಾಣುವ ಇವಳಿಗೆ ಕೊಡುವ ಉಡುಗೊರೆ ಅವಮಾನ ಮತ್ತು ಅನುಮಾನ. ಅಷ್ಟೇ ಅಲ್ಲದೇ ತನ ಬಳಗವನ್ನೆಲ್ಲ ಬೈಯಿಸಿಕೊಳ್ಳುವ ಸನ್ಮಾನ. ಇವೆಲ್ಲವನ್ನೂ ಅನುಭವಿಸಿದ ಅವಳು‌ ತನ್ನೆಲ್ಲಾ ನೋವುಗಳನ್ನು ಮರಮಾಚಿ ಬದುಕುತ್ತಿದ್ದರೂ ಕೂಡ ಅವಳಿಗೆ ಕಾಡುವ ನೆನಪು ತನ್ನ ಅಪ್ಪ‌ ಅಮ್ಮನಿಗೆ ಗೊತ್ತಾಗಬಾರದೆಂದು. ಆದರು ಕೆಲವೊಮ್ಮೆ ಆ ವಿಚಾರ ಆ ಮಹಾನುತಾಯಿ ಮತ್ತು ತಂದೆಗೆ ತಿಳಿದಾಗ ಆಗುವ ಕರುಣಾ ಜನಕ ನೋವು ಹೇಳ ತೀರದು. ಕಾರಣ ತನ್ನ ಮಕ್ಕಳಿಗೆ ಕಷ್ಟ ಏನೇಂಬುದೇ ತಿಳಿಯದ ಹಾಗೆ ಸಾಕಿ ಇಂದು ಅವರು ಅನುಭವಿಸುತ್ತಿರುವ ರೋಧನೆಯ ಪರಿ ನೋಡಿ ಬರ ಸಿಡಿಲು‌ ಬಡಿದಂತಾಗುವುದು. ಆ ನೋವು ಎಷ್ಟು ಘೋರವಾಗಿರುತ್ತದೆ ಎಂದರೆ ತಮ್ಮ ಮಕ್ಕಳ ಕಷ್ಟ ತಾವೂ ನೋಡಲಾಗದೆ ಇತರರಿಗೂ ತಿಳಿಸಲಾಗದೆ ಮೂಕರೋದನೆಯಿಂದ ಬಾಳುವುದು.

ಇಂತಹ ಕೆಲವು ಅವಿವೇಕಿ ಮನಸ್ಥಿತಿವುಳ್ಳ ಅಜ್ಞಾನಿಗಳು ತೋರುವ ನೀಚ ಬುದ್ದಿಯಿಂದ ಪ್ರಪಂಚದಲ್ಲಿ ಒಳ್ಳೆಯ ವ್ಯಕ್ತಿ ಮತ್ತು ವ್ಯಕ್ತಿತ್ವವುಳ್ಳವರನ್ನು ಕೂಡ ಅನುಮಾನದಿಂದಲೇ ನೋಡುವ ಪರಿಸ್ಥಿತಿ ಎದುರಾಗಿದೆ. ಮೊದಲೇ ನಮ್ಮ ಪೂರ್ವಜರು ಹೇಳಿದ ಮಾತಿದೆ ಹಣಕ್ಕಿಂತ ಗುಣ ಮುಖ್ಯ ಎಂದು. ಆ ಗುಣವನ್ನು ಹುಡುಕಲು ಹಲವಾರು ಮಂದಿ ವಿಫಲರಾಗುತ್ತಾರೆ. ಹಣ ಇವತ್ತು‌ ಇರುತ್ತದೆ ನಾಳೆ ಹೋಗುತ್ತದೆ ಆದರೆ ಗುಣ ಆಗಲ್ಲ. ಒಮ್ಮೆ ನಾವು ಅದನ್ನು ಗಳಿಸಿಕೊಂಡರೆ ನಮ್ಮ ಜೀವನ ಪರ್ಯಂತ ನಮ್ಮೊಂದಿಗೆ ಇರುತ್ತದೆ. ನಮ್ಮ ಜನಗಳೂ ಅಷ್ಟೇ  ಬಣ್ಣದಂತ ಮಾತುಗಳಿಗೆ ಆದಷ್ಟು ಬೇಗ ಆಕರ್ಷಿತರಾಗುತ್ತಾರೆ. ನೈಜತೆಯ ಮಾತಿಗೆ ಅನುಮಾನ ಪಡುತ್ತಾರೆ. ಜೀವನದಲ್ಲಿ ವ್ಯಕ್ತಿಗಿಂತ, ವಸ್ತುಸ್ಥಿತಿ ಅರ್ಥ ಮಾಡಿಕೊಂಡು ಬದುಕುವವರು ನಿಜವಾದ ಮಾನವರಾಗುತ್ತಾರೆ. ಕಾರಣ ವ್ಯಕ್ತಿಗಳು ತಮ್ಮ ಆಂತರಿಕ ವಿಚಾರ ವಿನಿಮಯ ಮಾಡಿ ಇಷ್ಟ ಕಷ್ಟಗಳ ಬಗ್ಗೆ ಸಂಪೂರ್ಣವಾಗಿ ಅವರೇ ವ್ಯಕ್ತಪಡಿಸುತ್ತಾರೆ. ಆದರೆ ವಸ್ತುಸ್ಥಿತಿ ಆಗಲ್ಲ ನಾವೇ ಅವುಗಳನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡು ಅವುಗಳನ್ನು ಕಾರ್ಯರೂಪಕ್ಕೆ ತಂದು‌ ಜೀವನ ನಡೆಸಬೇಕು. ಜೀವನ ಎಂದರೆ ಇಂದೇ ಉದಯಿಸಿ ಇಂದೇ ಅಂತ್ಯಗೊಳ್ಳುವ ಹೂವಲ್ಲ. ಅದೊಂದು‌ ಹೆಮ್ಮರ. ಅದನ್ನು ಪರಿಪೂರ್ಣವಾಗಿ ಸಾಗಿಸಲು ಇಂದಿನ ಅಗತ್ಯತೆಗಳನ್ನು ಪೂರೈಸಿಕೊಂಡು ಯಾವುದೇ ರಾಜಿ ಇಲ್ಲದೆ ನಾಳಿನ ಅವಶ್ಯಕತೆಗಳನ್ನು ಕಾಯ್ದು ಕೊಳ್ಳುವುದು. ಅದಕ್ಕೆ ಹೇಳುವುದು ಜೀವ(ನ) (ಜೀವ+ಜೀವನ) ಎರಡೂ ಕೂಡ ಒಬ್ಬರ ಬಳಿ ಅಡಕವಾಗಿರುವುದಿಲ್ಲ ಜೀವ ತಂದೆ ಕೊಟ್ಟರೆ ಜೀವನ ಗಂಡ ಕೊಡುತ್ತಾನೆ. ಆ ಜೀವನದಲ್ಲಿ ಬರುವ ದೊಡ್ಡ ಪಾತ್ರದಾರಿಯೇ ಅವಳಾಗಿರುತ್ತಾಳೆ.

 ಸರಿಯಾಗಿ ಅಂತರಂಗದ ಕಣ್ಣನ್ನು ತೆರೆದು ಯೋಚಿಸಿ ನೋಡು. ಬಾಹ್ಯ ನೋಟದಿಂದಲ್ಲ. 

ಅಂತಹ ಸಾಲಿನಲ್ಲಿ ನನ್ನ ಬಾಳಲ್ಲಿ ಬಂದಂತಹ‌ ಅವಳೆಂದರೆ,,,,,

ಬೇಜಾರ್ ಆಗ್ಬೇಡಿ ಮುಂದೆ ಹೇಳ್ತೀನಿ!!!!!!


ಇಂತಿ

ಹರೀಶ್.ಎಂ.ಎಸ್. ಮಂಚಿಬೀಡು.



Comments

Popular posts from this blog