ಅಪ್ಪನೆಂಬ ಕರುಣಾಮಯಿ : ಹರೀಶ್. ಎಂ.ಎಸ್.


            ಅಪ್ಪ ಅಂದರೆ ಏನೋ ಒಂದು ರೀತಿ ಹರ್ಷ.ಅಪ್ಪನೊಬ್ಬ ಜೊತೆಯಲ್ಲಿದ್ದರೆ ಎಂತದ್ದೇ ಕಷ್ಟ ಎದುರಿಸಿ ಎಲ್ಲವನ್ನೂ ಪಡೆದುಕೊಳ್ಳುತ್ತೇವೆಂಬ ಆನೆ ಬಲ.ಪ್ರತಿಯೊಬ್ಬರ ಜೀವನದಲ್ಲಿ ಅಪ್ಪನ ಪಾತ್ರ ಬಹಳ ಮುಖ್ಯವಾಗಿರುತ್ತದೆ.ಅವರು ಎಂತದೇ ಪರಿಸ್ಥಿತಿ ಬಂದರೂ,ಏನನ್ನೇ ಎದುರಿಸಿದರು ಅದನ್ನು ನಮ್ಮ ಮುಂದೆ ವ್ಯಕ್ತಪಡಿಸದೆ ನಮ್ಮ ಸಂತೋಷಕ್ಕಾಗಿ ಸರ್ವವನ್ನೂ ತ್ಯಾಗ ಮಾಡಿ ನಮಗಾಗಿ ಸದಾ ಹಸನ್ಮುಖಿಯಾಗಿರುತ್ತಾರೆ. ಏನೇ ಗಳಿಸಿದರೂ ಅದನ್ನು ನಮ್ಮ ಭವಿಷ್ಯಕ್ಕಾಗಿ ಮೀಸಲಿಡುತ್ತಾರೆ.ನಮ್ಮ ಮಕ್ಕಳು ಯಾರಿಗೂ ಏನೂ ಕಡಿಮೆ ಇಲ್ಲ,ನಮ್ಮ ಮಕ್ಕಳು ಯಾರ ಮುಂದೆನೂ ಕೈ ಚಾಚಬಾರದು ನಮ್ಮ ಮಕ್ಕಳ ಉಜ್ವಲ ಭವಿಷ್ಯವನ್ನು ಸೊಗಸಾಗಿ ರೂಪಿಸಬೇಕು ಎಂಬ ಮಹದಾಸೆಯುಳ್ಳ ಅರಸ.ಮಕ್ಕಳನ್ನು ಆಸ್ತಿಯನ್ನಾಗಿ ರೂಪಿಸುವ ಶಿಲ್ಪಿ. ಇದಕ್ಕೆ ನಾವು ಎಷ್ಟೇ ಋಣಿಯಾಗಿದ್ದರೂ ಸಾಲದು.ಅಪ್ಪನಿಗೆ ಎಷ್ಟೇ ಧನ್ಯವಾದ ಮತ್ತು ಕೃತಜ್ಞತೆ ಸಲ್ಲಿಸಿದರೂ ಸಾಲದು.

   ಅಂತದ್ದೇ ಹಾದಿಯಲ್ಲಿ ನಡೆದುಕೊಂಡು ಬಂದವರಲ್ಲಿ ನನ್ನ ಅಪ್ಪ ಕೂಡ ಒಬ್ಬರು.ನಮ್ಮಪ್ಪನಿಗೆ ನಾವು ಮೂರು ಜನ ಮಕ್ಕಳು . ನನಗೆ ಇಬ್ಬರು ಅಕ್ಕಂದಿರು ಮೂರನೆಯವ ನಾನು.ಆದರೆ ನನ್ನಪ್ಪನಿಗೆ ನನ್ನ ಮೇಲೆ ಎಲ್ಲಿಲ್ಲದ ಪ್ರೀತಿ.ನನ್ನ ಪಾಲಿಗೆ ಅವರಿದ್ದರೆ ನಾನೇ ರಾಜ ಕುಮಾರ ಅನ್ನುವಷ್ಟು ಹೆಮ್ಮೆ.ಒಂದು ದಿನವೂ ನನಗೆ ಹೊಡೆದವರಲ್ಲ,ಬೈದವರಲ್ಲ,ಆದರೂ ಅವರನ್ನು ಕಂಡರೆ ಎಲ್ಲಿಲ್ಲದ ಭಯ.ಯಾಕಂದ್ರೆ ಅಪ್ಪನಿಗೆ ಇರುವ ಶಕ್ತಿಯೇ ಅದಲ್ವ.ಅವರು ಹಾಗೆ ನಮ್ಮನ್ನು ಭಯದಲ್ಲಿಡಲಿಲ್ಲ ಅಂದರೆ ನಾವು ಮನುಜರಾಗೊಲ್ಲ ಮಂಗಗಳಾಗಿ ಬಿಡ್ತೀವಿ.ನನ್ನ ಬಾಲ್ಯದಲ್ಲಿ ಅವರು ನನಗೆ ಎಂಟಾಣಿ/ ಒಂದು ರೂಪಾಯಿ ಕೊಟ್ಟರೆ ನನಗೆ ಆನಂದವೋ ಆನಂದ.ಆದರೆ ಇವತ್ತು ಎಷ್ಟು ದುಡಿದರು ಆ ಸಂತೋಷ ಸಿಗೊಲ್ಲ.ಯಾಕಂದ್ರೆ ಎಂಟಾಣಿಯಲ್ಲಿದ್ದದ್ದು ಅಪ್ಪನ ಪ್ರೀತಿ ಅದಕ್ಕೆ.ಬಾಲ್ಯದಲ್ಲಿ ನನ್ನಪ್ಪ ನಾ ಏನೇ ಕೇಳಿದರು ನಿರಾಕರಿಸಿರಲಿಲ್ಲ.ನನ್ನ ಇಚ್ಚೆಯಂತೆ ಅವರು ನಡೆದು ಕೊಳ್ಳುತ್ತಿದ್ದರು.ನನ್ನಪ್ಪ ಬಹಳ ಮುಂಗೋಪಿ,ಅದರೆ ಆ ಕೋಪವನ್ನು ನನ್ನ ಮೇಲೆ ಎಂದೂ ತೋರಿಸಿಲ್ಲ.

ಇವೆಲ್ಲವನ್ನೂ ಗಮನಿಸುತ್ತಿದ್ದ ನನಗೆ ಮುಂದೊಂದು ದಿನ ದೊಡ್ಡವನಾದ ಮೇಲೆ ನನ್ನಪ್ಪನನ್ನು ಚೆನ್ನಾಗಿ ನೋಡಿಕೊಳ್ಳಬೇಕು,ಬಾಲ್ಯದಲ್ಲಿ ಅವರು ನನ್ನನ್ನು ಹೇಗೆ ನೋಡಿಕೊಳ್ಳುತ್ತಿದ್ದರೋ ಅದಕ್ಕಿಂತಲೂ ಚೆನ್ನಾಗಿ ನೋಡಿಕೊಳ್ಳಬೇಕು.ಅವರಿಗೆ ಇಂತಹ ಮಗನನ್ನು ಪಡೆದಿದ್ದಕ್ಕೆ ಸಾರ್ಥಕವಾಯ್ತು ಅನ್ನಿಸಬೇಕು ಹಾಗೆ ನೋಡಿಕೊಳ್ಳಬೇಕೆಂಬ ಮಹದಾಸೆ ಹೊಂದಿದ್ದವ ನಾನು. ಆದರೆ  ಆ ಆಸೆ ಮರೀಚಿಕೆಯಾಗಿಯೇ ಉಳಿದು ಬಿಟ್ಟಿತು.ಬಹುಷಃ ಅ ದೇವರಿಗೆ ಇದನ್ನ ಸಹಿಸಲಾಗಲಿಲ್ಲ ಅನ್ನಿಸುತ್ತೆ.ಆದರೆ ನಮ್ಮಪ್ಪನ ನೆನಪುಗಳು ಇಂದಿಗೂ ಚಿರಾಯು.

ಆದ್ದರಿಂದ ಪ್ರತಿಯೊಬ್ಬರೂ ಅಪ್ಪನನ್ನು ಪ್ರೀತಿಸಿ.ಅವರಲ್ಲಿರುವ ಮಮಕಾರದ ಕಣ್ಣು ತೆರೆದು ನೋಡಿ.ನಿಮಗೆ ಅರಿವಾಗುತ್ತದೆ.ಆತ ಎಂತಹ ಮೇಧಾವಿ ಎಂದು.ಅಪ್ಪನೆಂಬ ಆಕಾಶ ಪ್ರತಿಯೊಬ್ಬ ಮಕ್ಕಳ ಉದ್ದಾರದ ಸಂಜಿವಿನಿ ಇದ್ದ ಹಾಗೆ.

ಉದಾಹರಣೆಗೆ:- ಅಪ್ಪನನ್ನು ನಂಬಿ ಮಕ್ಕಳು ಬದುಕುತ್ತಾರೆ.ಆದರೆ ಮಕ್ಕಳನ್ನು ನಂಬಿ ಅಪ್ಪ ಎಂದಿಗೂ ಬದುಕುವುದಿಲ್ಲ.

ಧನ್ಯವಾದಗಳು
ಹರೀಶ್

Comments

Popular posts from this blog