Posts

ಹೃದಯದ ವಿಷಯ

Image
  ಕರಾಗ್ರೆ ವಸತೇ ಲಕ್ಷ್ಮಿ! ಕರ ಮಧ್ಯೆ ಸರಸ್ವತಿ! ಕರ ಮೂಲ ಸ್ಥಿತಾಗೌರಿ! ಪ್ರಭಾತೆ ಕರ ದರ್ಶನಂ!     ನಮ್ಮ ಸನಾತನ ಹಿಂದೂ ಧರ್ಮದಲ್ಲಿ ವೈದಿಕತೆಗೆ ಅದರದೇ ಆದ ಮಹತ್ವವಿದೆ. ವೇದಗಳ ಕಾಲದಲ್ಲಿ ಇದ್ದಂತಹ  ನಮ್ಮ ಸಂಸ್ಕೃತಿಗೆ ತಕ್ಕಂತಹ ಆಚಾರ ವಿಚಾರಗಳು ಬಹಳ ಅರ್ಥ ಪೂರ್ಣವಾದಂತವು.  ನಮ್ಮ ಕೆಲವು ಪೂರ್ವಜರು ಇಂದಿಗೂ ಕೂಡ ಅಂತಹ ಆಚರಣೆಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಆ ಸೈದ್ದಾಂತಿಕ ವಿಚಾರಗಳ ಪಟಣೆ, ಆಚರಣೆ, ಉಪದೇಶ, ಸಹಭಾಳ್ವೆ, ಇತ್ಯಾದಿಗಳನ್ನು ಗಮನಿಸಿದರೆ ಎತ್ತ ಸಾಗುತ್ತಿದೆ ನಮ್ಮ ಸಮಾಜ ಎಂಬ ಅರಿವಾಗುತ್ತದೆ. ವೇದಗಳ ಕಾಲದಲ್ಲಿ ಕೆಲವು ಸಂಕ್ರಾಮಿಕ ರೋಗಗಳನ್ನು ಹೊರತು ಪಡಿಸಿದರೆ ಮನುಜನ ಅಸ್ತಿತ್ವವನ್ನೇ ಕ್ಷಣಾರ್ಧದಲ್ಲಿ ಅಂತ್ಯಗೊಳಿಸುವಂತ ಯಾವ ಕಾಯಿಲೆಯೂ ಕೂಡ ಇರಲಿಲ್ಲ. ಮತ್ತು ಅವರ ಅಹಾರ ಪದ್ದತಿ ದಿನಕ್ಕೆ ಎರಡು ಭಾರಿ ಆಗಿದ್ದರೂ ಅವರು ಧೀರ್ಘಾಯುಷ್ಯರಾಗಿದ್ದರು.  ಕಾರಣ ಅವರಲ್ಲಿದ್ದ ಕೆಲವು ಆಚಾರ- ವಿಚಾರಗಳು, ಅವರಲ್ಲಿದ್ದ ಆಹಾರ ಪದ್ದತಿ ಮತ್ತು ನಮ್ಮ ಸಂಸ್ಕೃತಿಯ ಪರಿಪಾಲನೆ.  ನೀವು ಊಹಿಸಬಹುದು ನಾ ತಿಳಿಸಿದ ವಿಚಾರಕ್ಕೂ ಮೇಲೆ ತಿಳಿಸಿದ ಶ್ಲೋಕಕ್ಕೂ ಎಂತಣಿಂದೆತ್ತಣ ಸಂಭಂಧ ಎಂದು. ಆದರೆ ಖಂಡಿತವಾಗಿ ಅದಕ್ಕೆ ಪೂರಕವಾಗಿಯೇ ಇದೆ ಈ ನನ್ನ ಸಂದೇಶ. ಶ್ಲೋಕದ ತಾತ್ಪರ್ಯ:- ನಿಮ್ಮ ಬೆರಳ ತುದಿಯಲ್ಲಿ ಲಕ್ಷ್ಮೀ ವಾಸವಾಗಿದ್ದಾಳೆ. ನಿಮ್ಮ ಕೈ ಹಸ್ತದ ಮಧ್ಯದಲ್ಲಿ ಸರಸ್ವತಿ ವಾಸವಾಗಿದ್ದಾಳೆ...

Harisha MS Manchibeedu Quotes

Image
 

💘💜 ಪ್ರೀತಿಯೆಂಬ ಮಾಯೆ 💛💚

Image
                     ಪ್ರೀತಿ ಇದೊಂದೆ ಇಂದು‌ ನಾವು ಪ್ರತಿ‌ದಿನ ಈ ಜಗದಲ್ಲಿ ನೋಡುತ್ತಿರುವ ಒಂದು ಮಾಯಾಜಾಲಾ. ಪ್ರೀತಿಯ ಬಗ್ಗೆ ಅದೆಷ್ಟೋ ಕವಿಗಳು, ಸಾಹಿತಿಗಳು ತಮ್ಮದೇ ಆದ ಶೈಲಿಯಲ್ಲಿ‌ ಅದಕ್ಕೆ ಚಿತ್ರಣ,ವಿಮರ್ಶೆ, ಕಾಲ್ಪನಿಕತೆ ಈಗೆ ಹಲವಾರು ಆಯಾಮಗಳಲ್ಲಿ ಅದನ್ನು ಹೊರ ಪ್ರಪಂಚಕ್ಕೆ ತಂದು‌ ಅದರ ಒಲವು ನಿಲುವುಗಳ ಬಗ್ಗೆ ಬಹಳ ಅರ್ಥ ಪೂರ್ಣವಾಗಿ ಹೇಳಿದ್ದಾರೆ. ಕೆಲವರು ಧನಾತ್ಮಕಾವಾಗಿ, ಕೆಲವರು ಋಣಾತ್ಮಕವಾಗಿ, ಇನ್ನೂ ಕೆಲವರು ಇವೆರಡರ ಸಮ್ಮಿಶ್ರಣದಿಂದ ಋಣಾತ್ಮಕ+ಧನಾತ್ಮಕವಾಗಿ ಬಿಂಬಿಸಿದ್ದಾರೆ ಆದರೆ ಅದರಲ್ಲಿ‌ ಅವರದ್ದು ಏನು ತಪ್ಪಿಲ್ಲ. ಯಾಕೆಂದರೆ ಅವರು ಪ್ರೀತಿಯನ್ನು ಒಂದು‌ ವಿಚಾರವಾಗಿ ಅಷ್ಟೇ ತೆಗೆದುಕೊಂಡು ಅದರ ಮೇಲೆ  ತಮ್ಮ ಅಭಿವ್ಯಕ್ತತೆ ವ್ಯಕ್ತಪಡಿಸುತ್ತಾರೆ ಹೊರತು ಇದನ್ನು ಕರಾರು ಒಕ್ಕಾಗಿ ತಮ್ಮ ಜೀವನದಲ್ಲಿ‌ ಅಳವಡಿಸಿಕೊಂಡು‌ ಹೋಗಿ‌ ಎಂದು‌ ಎಲ್ಲೂ ಹೇಳಿಲ್ಲ. ಈ ಪ್ರೀತಿ ವಿಚಾರ‌ ಬಂದಾಗ ಪ್ರತಿಯೊಬ್ಬರು ತಮ್ಮ ಪ್ರೀತಿಯ ಬಗ್ಗೆ ವ್ಯಕ್ತಪಡಿಸತ್ತಾರೆ ಆದರೆ ಅದರಲ್ಲಿ ಇನ್ನೂ ಅದೆಷ್ಟೋ ಮಂದಿಗೆ‌ ಅರ್ಥನೇ ಆಗಿರೊಲ್ಲ ಇದೆಲ್ಲಕ್ಕಿಂತ ಮೀರಿದ ಪ್ರೀತಿ, ತಂದೆ-ತಾಯಿಯ ಪ್ರೀತಿ. ಅಜ್ಜ-ಅಜ್ಜಿ ತಮ್ಮ ಮೊಮ್ಮಕ್ಕಳ ಮೇಲಿಟ್ಟಿರುವ ಪ್ರೀತಿ,  ಅಕ್ಕ-ತಂಗಿಯರ ಪ್ರೀತಿ, ಅಣ್ಣ-ತಮ್ಮಂದಿರ ಪ್ರೀತಿ. ‌ಕಿತ್ತರೂ ಬರದ ಹಾಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡ...

ಅವಳೆಂದರೆ!?!?!?!?

Image
                    ಅವಳೆಂದರೆ ಯಾರವಳು, ಎಲ್ಲಿದ್ದಳು, ಯಾಕೆ‌ ಬಂದಳು,‌ ಎಲ್ಲಯವಳು, ಎಂದೆಲ್ಲಾ ಸಂದೇಹಗಳು ಮೂಡುವುದು ಸಹಜ.   ಆದರೆ ಯಾರವಳು‌‌ ಎಂದರೆ ಎಂತಹ ಜಡ ವಸ್ತುವು ಸಹ  ಪುಟಿದೇಳುವಂತೆ‌ ಮಾಡುವ ಒಂದು ಚಿಲುಮೆ. ಆದರೆ ಅದು ತಾಯಿಯಾಗಿ‌ ಆದರು ಸರಿ, ಸಹೋದರಿಯಾಗಿ‌ ಆದರು ಸರಿ, ಮಡದಿಯಾಗಿ ಆದರು ಸರಿ, ಬದುಕಿನ ಒಬ್ಬ ಅಧ್ಬುತ ಗೆಳತಿಯಾಗಿ ಆದರು ಸರಿ.        ಅಂದರೆ ಒಟ್ಟಾರೆಯಾಗಿ ಹೇಳಬೇಕೆಂದರೆ ನಮ್ಮ ಬದುಕಿನಲ್ಲಿ ಅವಳ ಪಾತ್ರ ಹೆಚ್ಚಿನ ಭಾಗವಾಗಿರುತ್ತದೆ. ಒಬ್ಬ ತಾಯಿ ತಾನು‌ ಹಡೆದ ಮಗುವು ತನ್ನ ಕಣ್ಣ ಮುಂದೆ ಹೇಗೆಲ್ಲ ಬದುಕಿ ಬಾಳಬೇಕು ಎಂದೆಲ್ಲಾ ಕನಸುಗಳನ್ನು ತನ್ನ ಕರುಳೊಳಗಿನ ಕಂದ ಇನ್ನೂ ಈ ಹೊರ ಪ್ರಪಂಚಕ್ಕೆ ಬರುವ ಮುಂಚೆಯೇ ಒಂದು ಕನಸುಗಳ ಗುಚ್ಚವನ್ನು ಕಟ್ಟಿಕೊಂಡು ಕಂದನ ಬರುವಿಕೆಗಾಗಿ ಕಾಯುತ್ತಿರುತ್ತಾಳೆ.  ಇಷ್ಟೆಲ್ಲಾ‌ ಆದ ನಂತರ ತನ್ನ ಒಡಲೊಳಗಣ ಕೂಸು ಹೊರ ಪ್ರಪಂಚಕ್ಕೆ ಬಂದ ಮೇಲೆ‌ ಅವಳ ಹೊರ ಪ್ರಪಂಚ ಮರೆತು ತನ್ನ ಕಂದನೇ ನನ್ನ ಪ್ರಪಂಚ ಎಂದುಕೊಂಡು‌ ತನ್ನ ಜೀವನದ ಪಯಣ ಸಾಗಿಸುತ್ತಾಳೆ. ತನ್ನೆಲ್ಲಾ ಇಷ್ಟ ಕಷ್ಟಗಳನ್ನು‌ ಬದಿಗಿಟ್ಟು ನನ್ನ ಕಂದನ ಬಾಳು ಬೆಳಗಲು‌ ತಾನೆ ಉರಿ ಜ್ವಾಲೆಯಲ್ಲಿ‌ ತನ್ನ ಬೆವರೆಂಬ ನೆತ್ತರನ್ನು ಬಸಿದು ಸಾಕಿ ಸಲಹಿ ಒಂದು ಮೂರ್ತಿಯ ರೂಪ ಕೊಟ್ಟು ನಮ್ಮನ್ನ ಈ ಪ್ರಪಂಚಕ್ಕೆ ಪರಿಚಯಿಸ...

"" ಜೀವನ ಮತ್ತು ಜಿಗುಪ್ಸೆಯ "" ಆ ಒಂದು ನಿಮಿಷ

Image
                          ಜೀವನ ಎಂದರೆ ಯಾರಿಗೆ‌‌ ಗೊತ್ತಿಲ್ಲ, ಈಗೆ ಕೇಳುವವರು ಕೂಡ ಜೀವನದ ಒಂದು ಅಂಗ. ಇಂದು ಒಬ್ಬರಿಗೊಬ್ಬರು ಪೈಪೋಟಿಯಿಂದ ತಾನು,ತಮ್ಮವರು ಎಂದು ಲೆಕ್ಕಿಸದೆ ಎಲ್ಲರಂತೆ ತಾನು ಕೂಡ ಮುಂದೆ ಹೋಗಬೇಕು, ನಾಲ್ಕು‌ ಜನರಿಗೆ  ಸರಿಸಮವಾಗಿ ನಾನೂ ನಿಲ್ಲಬೇಕು, ಎಲ್ಲರಂತೆ ನಾನೂ ಸಹ ನನ್ನದೇ ಆದಂತಹ ಒಂದು ಎಲ್ಲೆಯನ್ನು ನಿರ್ಮಿಸಿಕೊಂಡು ನನ್ನದೇ ಆದಂತಹ‌ ಒಂದು‌ ಸಮೃದ್ಧ ಜೀವನ ನಡೆಸಬೇಕು ಎಂದು ಪ್ರತಿಯೊಬ್ಬ ಮಾನವನು ಬಯಸುತ್ತಾನೆ.  ಆದರೆ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ತನ್ನದೇ ಆದ ಶೈಲಿಯಲ್ಲಿ , ತನ್ನದೇ ಆದ ಕೆಲ ರೂಪುರೇಷೆಗಳನ್ನು ಅಳವಡಿಸಿಕೊಂಡು ಬದುಕಲು ಇಷ್ಟ ಪಡುತ್ತಾನೆ, ಕಾರಣ ಇಷ್ಟೇ ಈ ಜೀವನವೆಂಬ ಪ್ರಯಾಣದಲ್ಲಿ ನಾವೂ ಕೂಡ ಒಂದು ಸೊಗಸಾದ ನಿಲ್ದಾಣದಲ್ಲಿ‌ ನಿಲ್ಲೇಬೇಕೆಂಬ ಮಹದಾಸೆಯಿಂದ.  ಈ ಸೊಗಸಾದ ಎಲ್ಲೆಯನ್ನು‌ ನಿರ್ಮಿಸಿಕೊಳ್ಳುವ ಬರದಲ್ಲಿ ತಾನು‌ ಎಷ್ಟೇ ಸವಾಲುಗಳು ಬಂದರು‌ ಅವುಗಳನ್ನು ಲೆಕ್ಕಸುವುದಿಲ್ಲ, ತಾನು ಮತ್ತು ತನ್ನ ನಂಬಿ ಬದುಕು ಸಾಗಿಸುತ್ತಿರುವ ಕೆಲ ಜೀವಗಳಿಗೋಸ್ಕರ ಕೆಲವೊಮ್ಮೆ ಒಪ್ಪೊತ್ತಿನ ಊಟವನ್ನೂ ಲೆಕ್ಕಿಸದೆ, ಇದಕ್ಕೂ ಮೀರಿ ಪ್ರಾಣವನ್ನು ಲೆಕ್ಕಿಸದೇ ದುಡಿಯುತ್ತಾನೆ. ಕಾರಣ ಇಷ್ಟೆ ಎಲ್ಲರಂತೆ ತನ್ನ ಬದುಕೂ ಕೂಡ ಹಸನಾಗಬೇಕು, ನನ್ನವರು ಸಹ ಉಲ್ಲಾಸಮಯದ ಹುರುಪಿನೊಂದಿಗೆ‌ ಬಾಳ್ಮೆ ನಡೆಸಬೇಕೆಂಬುದು. ಕ...

"" ತಾಯಿಯಿಲ್ಲದ ತವರು ""

Image
  ತಾಯಿಯೇ ಮೊದಲ ದೇವರು,ಮನೆಯೇ ಮೊದಲ ಪಾಠಶಾಲೆ, ಇದು ನಾಣ್ಣುಡಿಯಾದರು ಅಕ್ಷರಶಃ ಸತ್ಯವಾದ ಮಾತು.ನಮ್ಮ ಹಿರಿಕರು ಏನೇ ಹೇಳಿದರು ಅದರ ಹಿಂದೆ ಒಂದಲ್ಲ ಒಂದು ಕಾರಣವಿರುತ್ತದೆ.ಆದರೆ ಆ ಮಾತಲ್ಲಿ ಮನಕಲಕುವ ಮಾತೆಂದರೆ , " ತಾಯಿಯಿಲ್ಲದ ತವರ್ಯಾಕೆ" ಎಂಬುದು.           ಈ ಪ್ರಪಂಚದಲ್ಲಿ ತಾಯಿಗಿಂತ ಮಿಗಿಲಾದುದು ಯಾವುದೂ ಇಲ್ಲ. ನಮ್ಮ ಜೀವನಕ್ಕೋಸ್ಕರ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿ ತನ್ನ ಕರುಳ ಕುಡಿಗೋಸ್ಕರ ತನ್ನ ಜೀವನವನ್ನು ಸವೆಸುವ ಕರುಣಾಮಯಿ. ಯಾರೇ ಆಗಲಿ ಗಂಡಾಗಲಿ,‌ ಹೆಣ್ಣಾಗಲಿ ತಾವು ಎಲ್ಲೇ ಹೋಗಿ ಮನೆಗೆ ಬಂದಾಗ ಪ್ರೀತಿಯಿಂದ ಕರೆಯುವ ಮಾತೇ ಅಮ್ಮ. ಯಾರೇ ಆದರು ಸರಿ ತಮ್ಮ ಒಂದು‌ ನಿಲುವನ್ನು ಮೊದಲು ಪ್ರಸ್ತಾಪಿಸುವುದು ತಾಯಿಯ ಬಳಿಯಲ್ಲೇ, ಯಾಕೆಂದರೆ ಅದು ತಾಯಿಯಾದವಳು ಮಕ್ಕಳಿಗೆ ನೀಡಿರುವ ಸಲುಗೆ.  ನಾವು ಇಟ್ಟ ವಸ್ತುಗಳು ಸಮಯಕ್ಕೆ ಸರಿಯಾಗಿ ನಮಗೆ ಸಿಗದಿದ್ದಾಗಲೂ ನಾವು ಹೇಳೋ ಮಾತು ಅಮ್ಮ, ನಾವು ಎಡವಿದಾಗ,ಬಿದ್ದಾಗ,ಎದ್ದಾಗ ಹೇಳುವ ಮಾತು ಕೂಡ ಅಮ್ಮಾ, ಒಂದು ಸಂಸಾರ ತಕ್ಕಡಿಯಂತೆ ಸಮನಾಗಿ ಕಷ್ಟ-ಸುಖದ ಸಾಗರದಲ್ಲಿ ಮಿಂದಾಗ ಅದನ್ನು‌ ತೂಗುವ ಸಾಮರ್ಥ್ಯ ಕೂಡ ಇರುವುದು ಅಮ್ಮನಿಗೆ ಹೊರತು ಅಪ್ಪನಿಗಲ್ಲ.ನೀವು ಹೇಳಬಹುದು   ಅಪ್ಪ ದುಡಿಯದಿದ್ದರೆ ಅಮ್ಮ ಹೇಗೆ ಸಂಸಾರವೆಂಬ ನೌಕೆಯನ್ನು  ನಿಭಾಯಿಸುತ್ತಾಳೆ ಎಂದು. ಆದರೆ ಮನೆಯಲ್ಲಿ ತಾಯಿಯಾದವಳು‌ ಬಿಕ್ಕಟ್ಟಿನಲ್ಲಿ ಸಂಸಾರ...

MANCHIBEEDU HISTORY

Image
This version is English. Kannada version also available. Manchibeedu and Manchibeed inscriptions on the history pages.  The tallest beach is Manchibeedu.  As the name suggests, the flowers in the past were growing here, gradually transforming into the same munchidade.  Village: - Manchibeedu  Taluk: - KR Pate  District: - Mandya.  State: - Karnataka  History of Manchibeedu: - Statute No. 84  Village - - Manchibeedu  Location - Near Ishwar Temple.  Period - - AD  About the 11th century.  Script and Language - Kannada  Report Announcement - AKSA / SHS .೧೭ / Page .೧೩ /  Summary - The inscription refers to the paradise of Kaliviamma Madiwalla Nagyannanna of Thiruvarikku, who killed the robbers in the battle of Thurukku.  Manchibeedu Statute No: 85  The village.  : Manchibeedu  Location.  : Near Ishwar Temple  Period: AD 1379 October 12 Script...

ಭಾರತದ ಸಂವಿಧಾನದ ವಿಧಿಗಳು

Image
ಭಾರತದ ಸಂವಿಧಾನದ ವಿಧಿಗಳು : ಭಾರತ ಸಂವಿಧಾನ ಭಾಗ -1 ( ಒಕ್ಕೂಟ ಮತ್ತು ಭೂಪ್ರದೇಶ) 1ಒಕ್ಕೂಟದ ಹೆಸರು 2ನೂತನ ರಾಜ್ಯಗಳ ರಚನೆ 3ಸರಹದ್ದುಗಳು ಭಾಗ -2 5ಪೌರತ್ವ 6ಪಾಕ್ನಿಂದ ಭಾರತಕ್ಕೆ ಬಂದ ಪೌ. ಹಕ್ಕು . 7ಭಾರತದಿಂದ ಪಾಕ್ ಗೆ ಹೋದ ಪೌ. ಹಕ್ಕು 8ವಿದೇಶದಲ್ಲಿರುವ ಭಾರತೀಯರಿಗೆ ಪೌ.ಹಕ್ಕು ಭಾಗ -3 ( ಮೂಲಭೂತ ಹಕ್ಕುಗಳು ) 14ಸಮಾನೆತೆಯ ಹಕ್ಕು 15ತಾರತಮ್ಯ ನಿಷೇಧ 16 ಉದ್ಯೋಗದಲ್ಲಿ ಸಮಾನತೆ 17ಅಸ್ಪ್ರಶ್ಯತೆ ನಿರ್ಮೊಲನೆ 18ಬಿರುಡುಗಳ ರದ್ದತಿ 19 6 ಸ್ವಾತಂತ್ರ್ಯಗಳು 20ಅಪರಾಧಗಳ ಬಗ್ಗೆ ಅಪರದಿಯೆಂದು ನಿರ್ಣಯಿಸುವ ಸಂಬಂಧದಲ್ಲಿ ರಕ್ಸ್ಷಣೆ 21ಜೀವಿಸುವ ಹಕ್ಕು 21(“ಎ) ವಿದ್ಯಾಭ್ಯಾಸದ ಹಕ್ಕು 23ಮಾನವ ಮಾರಾಟ , ಬಲವಂತ ದುಡಿಮೆ 24ಬಾಲಕಾ… ಕ ನಿಷೇಧ 25ಧಾರ್ಮಿಕ ಆಚರಣೆ 26ಧಾರ್ಮಿಕ ಸ್ವಾತಂತ್ರ್ಯ 27ಧರ್ಮದ ಉನ್ನತಿಗಾಗಿ ತೆರಿಗೆಗಳ ವಿನಾಯ್ತಿ 29ಅಲ್ಪಸಂಖ್ಯಾತರಿಗೆ ಹಿತಾಸಕ್ತಿ ಸಂರಕ್ಷಣೆ 30 ಅಲ್ಪಸಂಖ್ಯಾತರಿಗೆ ಶಿಕ್ಷಣ ಸಂಸ್ಥೆಗಳ ಸ್ಥಾಪನ : ಭಾಗ-4(ಎ) ಮೂಲಭೂತ ಕರ್ತವ್ಯಗಳು 51(ಎ)11ಮೂಲಭೂತ ಕರ್ತವ್ಯಗಳು ಭಾಗ -5(ಕೇಂದ್ರ ಸರ್ಕಾರ ) 52 ರಾಷ್ಪಪತಿ 54ರಾಷ್ಪಪತಿ ಚುನಾವಣೆ 58ರಾಷ್ಪಪತಿಯ ಅರ್ಹತೆಗಳು 60ರಾಷ್ಪಪತಿಯ ಪ್ರಮಾಣ ವಚನ 61 ಮಹಾಭಿಯೋಗ 63ಉಪರಾಷ್ಪಪತಿ 67ಉಪರಾಷ್ಪಪತಿ ಪದವಧಿ 72ರಾಷ್ಪಪತಿ ಕ್ಷಮಾಧಾನ 74 ರಾಷ್ಪಪತಿಗೆ ಮಂತ್ರಿಮಂಡಲದ ನೆರವು 75ಪ್ರಧಾನಿ ಮಂತ್ರಿಮಂಡಲದ ನೇಮಕ 76ಅ ….ಜನರಲ್ 79 ಸಂಸತ್ತಿನ ರಚನೆ 80 ರಾ...

ಶ್ರೀ ಕ್ಷೇತ್ರ ಚಂದಗೋನಹಳ್ಳಿಯಮ್ಮ.

Image

"" ಓ ಮನಸೇ ಮರುಗದಿರು ""

Image
             ಮನಸ್ಸೆಂಬುದು ಒಂದು ಕನ್ನಡಿಯಿದ್ದಂತೆ.ಒಂದು ಕನ್ನಡಿ ಹೇಗೆ ಬಿದ್ದಾಗ ಛಿದ್ರ ಗೊಳ್ಳುತ್ತದೆಯೋ ಹಾಗೆಯೇ ಮನಸ್ಸೆಂಬ ಕನ್ನಡಿಯು ಕೆಲವೊಮ್ಮೆ ಬುದ್ದಿಯೀನ ವ್ಯಕ್ತಿಗಳಾಡುವ ಕೆಲ ಮಾತುಗಳ ಬಲೆಗೆ ಸಿಲುಕಿ ಭಿನ್ನವಾಗುತ್ತದೆ.ಈಗೆ ಭಿನ್ನವಾದ ಮನಸ್ಸು ಮೌನದ ಆಸರೆ ಬೇಡುತ್ತದೆ.ಈಗೆ ಮೌನದ ಆಸರೆಗೆ ಒಳಗಾದ ವ್ಯಕ್ತಿಗಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟಕರ ಸಂಗತಿ.ಯಾಕೆಂದರೆ ನಾವು ಇನ್ನೊಬ್ಬರು ನೋವಿನಲ್ಲಿದ್ದಾಗ ಅವರಿಗೆ ಧೈರ್ಯ ತುಂಬಿ ತಿಳಿಹೇಳುವ ಪ್ರಯತ್ನ ಮಾಡುತ್ತೇವೆ.ಆದರೆ ಅದೇ ಸಂಗತಿ ನಮಗೆ ಬಂದಾಗ ಮಾತ್ರ ನಾವು ಅವರಿಗೆ ತಿಳಿ ಹೇಳಿದ ನೆನಪು ಮರುಕಳಿಸುತ್ತದೆ.ನಮಗೆ ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸುವ ಗುಣ ಇದೆ .ಆದರೆ ಅದೇ ಸಮಯ ನಮಗೆ ಬಂದಾಗ ಯಾರು ಎಷ್ಟೇ ಹೇಳಿದರು ಅದನ್ನು ಅರಗಿಸಿಕೊಳ್ಳಲಾಗದ ನೋವು ಮನದಲ್ಲಿರುತ್ತದೆ.ಆದರೆ ಇಲ್ಲಿ ಎಲ್ಲದಕ್ಕೂ ಇರುವುದು ಮರುಗುವುದೊಂದೆ.         ಒಂದು ಮಾತು ಮಿತ್ರರೆ‌ ,ನಾವು ಯಾಕೆ ಮರುಗಬೇಕು,ಅವರ ಕಷ್ಟಗಳನ್ನು ನೋಡಿ ಯಾಕೆ ನೀರಾಗಬೇಕು.ಹಾಗಂದ ಮಾತ್ರಕ್ಕೆ ನಾವು ಬೇರೆಯವರ ಕಷ್ಟಗಳಿಗೆ ಸ್ಪಂದಿಸಬಾರದು ಅಂತಲ್ಲ.ಅದಕ್ಕೂ ಮುನ್ನ ನಾವು ಅವರಲ್ಲಿರುವ ಅಂತರಂಗದ ಕುರುಹುಗಳನ್ನು ಗಮನಿಸಿ ಅದಕ್ಕೆ ಸ್ಪಂದಿಸಬೇಕು.ಯಾಕೆಂದರೆ ಒಬ್ಬ ವ್ಯಕ್ತಿ ಎಡವಿ ಬಿದ್ದಾಗ, ಹೇಗೆ ಬಿದ್ದ ಜಾಗದಿಂದಲೇ ಎದ್ದು ಮೇಲೆ ಬರುತ್ತಾನೋ ಹ...

"" ಸ್ಫೂರ್ತಿಧಾಯಕ ಜೀವನ """" ಅದುವೇ ಮಾನವನ ಸಾಧನ ""

Image
  ''"ಸಾಧನೆ ಇಲ್ಲದ ಜೀವನ - ರೆಕ್ಕೆಯಿಲ್ಲದ ಪಕ್ಷಿಯಂತೆ""   ಮಾನವನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರಿಗೂ ಆ ದೇವರು ಒಂದು ಉಚಿತವಾದ  ಅನ್ ಲಿಮಿಟೆಡ್  ಮೆಮೋರಿ ಕಾರ್ಡ್ ಕೊಡ್ತಾನೆ.ಆದರೆ ಅದನ್ನು ಕೆಲವರು ತಮ್ಮ ತಮ್ಮ ಜೀವನ ಶೈಲಿಗೆ ತಕ್ಕಂತೆ ಬಳಸುತ್ತಾರೆ.ಇದರಲ್ಲಿ ಮುಖ್ಯ ವಿಚಾರವೇನೆಂದರೆ ಎಲ್ಲರೂ ಹೊಂದಿರುವ ಮೆಮೋರಿಯಲ್ಲಿ ಸಾಕಷ್ಟು ಬೇರೆ ಬೇರೆ  ವಿಚಾರಗಳನ್ನು ಹಿಡಿದಿಟ್ಟಿದ್ದರು ಅವುಗಳ ಮೂಲ ಪರಿಕಲ್ಪನೆ ಒಂದೇ ಆಗಿರುತ್ತದೆ ಅದುವೇ ಜೀವನ.       ಈ ಜೀವನದಲ್ಲೂ ಸಹ ಒಂದು ಪೆಂಡ್ರೈವ್ ಕೊಟ್ಟಿರುತ್ತಾನೆ ಅದುವೇ ನಮ್ಮ ಮನಸ್ಸು(ಆತ್ಮ ಸಾಕ್ಷಿ). ನೋಡಿ ಮಿತ್ರರೇ ಈ ಜೀವನ ಎಂಬುದು ನಶ್ವರ.ಇಲ್ಲಿ ಇಂದು ಜನಿಸಿ,ನಾಳೆ ಬದುಕಿ,ನಾಡಿದ್ದು ಅಳಿದು ಹೋಗಬೇಕು ಹಾಗಿರುವಾಗ ಇಲ್ಲಿ ,ನಾನು ,ನಂದು,ಅನ್ನೋದು ನೆಪಮಾತ್ರ.ಯಾಕೆಂದರೆ ಆ ದೇವರಿಂದ ನಮಗೆ ಸಾವಿನ ಕರೆ ಯಾವಾಗ ಬೇಕಾದರೂ ಬರಬಹುದು. ಮತ್ತು ಸಾವು ಬರುವುದೆಂಬ ಭಯದಲ್ಲಿ ನಾವು ಎಲ್ಲೇ ಅಡಗಿ ಕುಳಿತರು,ಆ ವಿಧಿ ನಮ್ಮನ್ನು ಹಿಂಬಾಲಿಸಿಯೇ ತೀರುತ್ತದೆ.ಇದು ತಿಳಿದಿದ್ದರು ಕೆಲವರು ತಾವು ಭೂಮಿಯ ಮೇಲೆ ಶಾಶ್ವತವಾಗಿ ಗೂಟ ಹೊಡೆದುಕೊಂಡು ಇಲ್ಲಿಯೇ ಇರುತ್ತೇವೆ ಎಂಬಂತೆ ವರ್ತಿಸುತ್ತಾರೆ. ಆದರೆ ಅವರಿಗೆ ಗೊತ್ತಿಲ್ಲ ವಿಶ್ವವನ್ನೇ ಗೆದ್ದ ಅಲೆಕ್ಸಾಂಡರ್ ತಾನು ಸತ್ತ ಮೇಲೆ ತನ್ನ ಕೈಗಳನ್ನು ಮೇಲೆ ಮಾಡಿ ಮಣ್ಣು ಮಾಡಿ ಎಂದಿದ್ದನಂತೆ.ಕಾರಣ ಇಷ್ಟ...

""ಅಂಗವಿಕಲತೆ ಶಾಪವಲ್ಲ""

Image
              ಆರೋಗ್ಯವೇ ಸ್ವರ್ಗ,        ಅನಾರೋಗವೇ ನರಕ.       ಮಿತ್ರರೇ ಅಂಗವಿಕಲತೆ ಎಂಬುದು ಶಾಪವಲ್ಲ.ಕೇವಲ ಆಕಸ್ಮಿಕವಾಗಿ ದೈವದತ್ತವಾಗಿ ಬರುವಂತಹ ಒಂದು ಸ್ವಾಭಾವಿಕ ಗುಣ. ಈ ಪ್ರಪಂಚದಲ್ಲಿ ಸ್ರುಷ್ಟಿಸಲ್ಪಟ್ಟ ಪ್ರತಿಯೊಬ್ಬರಿಗೂ ಆ ದೇವರು ಒಂದಿಲ್ಲೊಂದು ನ್ಯೂನತೆಯನ್ನು ಕೊಟ್ಟು ಸ್ರುಷ್ಟಿಸುತ್ತಾನೆ.ಅದರಲ್ಲೂ ಕೆಲವರಿಗೆ ಆಂತರಿಕ ನ್ಯೂನತೆಗಳನ್ನು ಕೊಟ್ಟರೆ, ಕೆಲವರಿಗೆ  ಬಾಹ್ಯ ನ್ಯೂನತೆಗಳನ್ನು ಕೊಡುತ್ತಾನೆ.ಆದರೆ ಕೆಲವರು ತಮ್ಮಲ್ಲಿರುವ  ಆಂತರಿಕ ನ್ಯೂನತೆಗಳನ್ನು ಮರೆತು,ಬೇರೆಯವರ ಬಾಹ್ಯ ನ್ಯೂನತೆಗ ಕಡೆ ಗಮನಹರಿಸುತ್ತಾರೆ.ಕೆಲ ಸಂಧರ್ಭಗಳಲ್ಲಿ ಅಂಗವಿಕಲತೆ ಎಂಬುದು ದೈವದತ್ತವಾಗಿ ಬಾರದಿದ್ದರೂ ನಮ್ಮ ನಿರ್ಲಕ್ಷತೆ ಅಥವಾ ಬೇಜವಬ್ದಾರಿಯಿಂದ ಸಂಭವಿಸುತ್ತದೆ.      ಕೆಲ ಅವಿವೇಕಿಗಳು ಅಂಗವಿಕಲತೆಯ ಬಗ್ಗೆ ಸಂಪೂರ್ಣವಾಗಿ ಗೊತ್ತಿದ್ದರೂ ,ಅವರ ಪೋಷಕರ ಜೊತೆಯಲ್ಲಿ ಅದರ ಬಗ್ಗೆಯೇ ಚರ್ಚಿಸಿ ಅವರ ಮನಸ್ಅನ್ನು ಘಾಸಿ ಗೊಳಿಸುತ್ತಾರೆ.  ಅಂಗವಿಕಲರನ್ನು ಕೇವಲವಾಗಿ ಕಾಣುತ್ತಾರೆ . ಮತ್ತು ಕೆಲವರು ಪ್ರಯಾಣದ ಸಂಧರ್ಭದಲ್ಲಿ ಅಂಗವಿಕಲರಿಗೆ ತಮ್ಮ ಆಸನಗಳನ್ನು ಮಾನವೀಯತೆಯಿಂದ ಬಿಟ್ಟು ಕೊಡುತ್ತಾರೆ.ಆದರೆ ಕೆಲವರಂತು ಅಂಗವಿಕಲರಿಗೆ ಮೀಸಲಿರುವ ಆಸನಗಳಲ್ಲಿ ಕುಳಿತಿದ್ದರೂ ಅವರುಗಳು ಬಂದರೂ ಆಸನಗಳನ್ನು ಬಿಟ್ಟು ...

"" ನನ್ನ ಮತ ನನ್ನ ಹಕ್ಕು ""

Image
                                             ನನ್ನ ಮಿತ್ರರೇ ಭಾರತವು ಒಂದು ಪ್ರಜಾ ಸತಾತ್ಮಕ ದೇಶ. ಮತ್ತು ಒಂದು ಜಾತ್ಯಾತೀತ ರಾಷ್ಟ್ರ. ಇಲ್ಲಿ ಎಲ್ಲರೂ ಸಮಾನರು.ಎಲ್ಲಾ ಧರ್ಮಕ್ಕೂ ಸಮಾನ ಹಕ್ಕಿದೆ .ಮತ್ತು ಎಲ್ಲರಿಗೂ ಸಮಾನವಾದ ಮೂಲಭೂತ ಹಕ್ಕಿವೆ.ಆ ಹಕ್ಕುಗಳಲ್ಲಿ ಬಹಳ ಮುಖ್ಯವಾದ  ಹಕ್ಕೆ ಮತದಾನದ ಹಕ್ಕು .ಇದರಿಂದ ನಾವು ನಮ್ಮನ್ನು ಕಾಯಲು ಬೇಕಾದಂತಹ ಸೇವಕರನ್ನು  ಅಥವಾ ಜನ  ಪ್ರತಿನಿಧಿಗನ್ನು ಆರಿಸಿ ಕೊಳ್ಳಲು ಎಲ್ಲರಿಗೂ ಅವಕಾಶರುತ್ತದೆ.ಈ ಮತದಾನದಿಂದ ಯಾವೊಬ್ಬ ಪ್ರಜೆಯು ಹಿಂದುಳಿಯಬಾರದು ಮತ್ತು  ಮತ ಚಲಾಯಿಸುವ ಪ್ರಜೆಯು ಸ್ವಂತ ಚಾಣಾಕ್ಷತನದಿಂದ ತಮಗೆ ಬೇಕಾದಂತಹ ಪ್ರತಿನಿಧಿಯನ್ನು ಆರಿಸಲು 18  ವರ್ಷ ತುಂಬಿದ ವಯಸ್ಕರಿಗೆ ಮಾತ್ರ ಅಧಿಕಾರ ಕೊಟ್ಟಿರುತ್ತದೆ . ಕಾರಣ ಆ ವ್ಯಕ್ತಿಗಳಿಗೆ ಎಲ್ಲದರ ಬಗ್ಗೆಯೂ ಅರಿವಿರುತ್ತದೆ ಎಂದು. ಭಾರತವು ಒಂದು ಪ್ರಜಾ ಪ್ರಭತ್ವ ರಾಷ್ಟ್ರ. ಹೆಸರೇ ಹೇಳುವಂತೆ ಇಲ್ಲಿರುವ ಪ್ರತಿಯೊಬ್ಬ ಪ್ರಜೆಯು ಪ್ರಭುವೆ!! . ಆದರೆ ಈ ಮಾತು ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಜಾರಿಯಲ್ಲಿದ್ದು ಆ ಸಮಯದಲ್ಲಿ ನಾವು ಆರಿಸಲ್ಪಡುವ ವ್ಯಕ್ತಿಗಳು ಅಥವಾ ಜನನಾಯಕರು ಸ್ವತಃ ಅವರೇ ಪ್ರಜೆಗಳಾಗಿ ನಮ್ಮನ್ನು ಪ್ರಭುಗಳ ರೀತಿಯಲ್ಲಿ ಕಾಣುತ್...

ಯಾರು ಏನ್ ಅನ್ಕೊಳ್ತಾರೋ ? !!!!!!

Image
   ಹಾಯ್ ಗೆಳೆಯರೆ  ಇದೊಂದು ಸ್ವಾರ್ಥಿ ಪ್ರಪಂಚ.ಇಲ್ಲಿ ಸಾಮಾನ್ಯ ಜನರು ಬದುಕಬೇಕೆಂದರೆ ಸಾಕಷ್ಟು ಸೆಣೆಸಾಡಬೇಕು. ಇಲ್ಲವಾದಲ್ಲಿ ಅವರು ತಟಸ್ಥ ಸ್ಥಿತಿಯಲ್ಲೆ ಇರಬೇಕಾಗುತ್ತದೆ. ಅಂತಹ ಸಮಯದಲ್ಲಿ ಕೆಲವರಿಗೆ ನಾವು ಮುಂದೆಬರಬೇಕೆಂಬ ಆಸೆ ,ಹೆಬ್ಬಯಕೆ ಹೆಚ್ಚಿರುತ್ತದೆ.ಆದರೆ ಅವರ ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಅದಕ್ಕೆ ತದ್ವಿರುದ್ಧವಾದ ಒಂದು ಯೋಚನೆ ಅವರ ಕನಸುಗಳನ್ನು ಭಗ್ನಗೋಳಿಸಲು ಸಿದ್ದವಾಗಿರುತ್ತದೆ ಅದೇ      "" ಯಾರು ಏನ್ ಅನ್ಕೊಳ್ತಾರೋ ""ಎಂಬುದು.       ನೋಡಿ ಮಿತ್ರರೇ ಯಾರು ಏನ್ ಅನ್ಕೊಂಡ್ರು ನಮಗೇನೂ ಈ ಪ್ರಪಂಚ ಯಾರು ಹೇಗಿದ್ದರೂ ಒಂದಲ್ಲ ಒಂದು ರೀತಿಯಲ್ಲಿ ದೂರುತ್ತಾರೆ‌. ನಮ್ಮನನು ನೋಡಿ ಹತ್ತು ಜನ ಒಪ್ಪದಿದ್ದರೂ ಪರವಾಗಿಲ್ಲ, ಆದರೆ ನಾವು ಮಾಡುವ ಕೆಲಸ ನಮ್ಮ ಮನಸಾಕ್ಷಿ ಮೆಚ್ಚುವಂತಿರಬೇಕು.ನಮ್ಮ ಕೆಲಸವನ್ನು ಯಾರು  ಮೆಚ್ಚದಿದ್ದರೇನು ನಮಗೆ ನಾವೇ ಸಾಟಿ ಹೊರತು ಬೇರ್ಯಾರು ಇಲ್ಲ.        ಈ ಪ್ರಪಂಚದಲ್ಲಿ ನಾವು ನೆಲೆಯೂರಿ ಬದುಕಬೇಂಕೆದರೆ  ಅದಕ್ಕೆ ನಮ್ಮ ಮನಸ್ಸಾಕ್ಷಿ ಮತ್ತು ನಮ್ಮ ದುಡಿಮೆಯಿಂದಲೇ ಸಾಧ್ಯ .ನಾವು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದರಿಂದ  ನಾವು ಗೆಲ್ಲುತ್ತೇವೆ ಎಂದು ಗೊತ್ತಿದ್ದರೂ ನಾವು ಇನ್ನೋಬ್ಬರ ಅಂಜಿಕೆಯಿಂದಲೇ ಆಗುವ ಕೆಲಸವನ್ನು ನಮ್ಮಿಂದ ನಾವೇ  ಹಾಳುಮಾಡಿಬಿಡುತ್ತೇವೆ. ನಮ್ಮ ಕಷ್ಟ ...

ಜೀವನದ ಫಾರ್ಮುಲಾ ( ಸೂತ್ರ )

Image
                     ಗೆಳೆಯರೇ ಈ ಆಶಾಧಾಯಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜನರು ಬೆಳೆಯಲು,ತಮ್ಮ ಜೀವನದ ಗುರಿ ತಲುಪಲು, ನಾ ಮುಂದು,ತಾ ಮುಂದು ಎಂದು ಮುನ್ನುಗ್ಗುತ್ತಿದ್ದಾರೆ.ಆದರೆ ಅವರಿಗೆ ಮುನ್ನಡೆಯುವ ದಾರಿ ಗೊತ್ತಿಲ್ಲದಿದ್ದರೂ ಯಾವುದೋ ಒಂದು ರೀತಿಯಲ್ಲಿ ತಮ್ಮ ಬದುಕಿನ ಗುರಿ ತಲುಪಲು ಯತ್ನಿಸುತ್ತಿದ್ದಾರೆ.ಇನ್ನೂ ಕೆಲವರಂತು ಯಾವ ರೀತಿಯಲ್ಲಿ ತಮ್ಮ ಸುಂದರ ಬದುಕನ್ನು ನಿರ್ಮಿಸಿಕೊಳ್ಳಬೇಕೋ ಎಂಬ ಗೊಂದಲದಲ್ಲೇ ಜೀವನ ಕಳೆಯುತ್ತಿದ್ದಾರೆ.          ಆದರೆ ಜೀವನವೆಂಬುದು ಹಾಗಲ್ಲ..ಮತ್ತೆ ನಾವಂದುಕೊಂಡಷ್ಟು ಸುಲಭವೂ ಅಲ್ಲ.ನಾವು ಹೇಗೆ ಯಾವುದಾದರೊಂದು ಪರೀಕ್ಷೆಯನ್ನು ತೆಗೆದುಕೊಡಾಗ ಹಗಲು ,ರಾತ್ರಿ ಎನ್ನದೆ ಸತತ ಓದುತ್ತಾ ಅದನ್ನು ಸ್ಮರಿಸುತ್ತಾ ವರ್ಷವೆಲ್ಲಾ ಓದಿ ಆ ಪರೀಕ್ಷೆಯನ್ನು ಎದುರಿಸುತ್ತೇವೆಯೋ ಹಾಗೆ .ಹಾಗೆಲ್ಲ ಮಾಡಿದರು ಸಹ ಕೆಲವರು ಅದರಲ್ಲಿ ವಿಫಲರಾಗುತ್ತಾರೆ ಕಾರಣ ಅವರಲ್ಲಿ ಅದನ್ನು ಸರಿಯಾಗಿ ಅಳವಡಿಸಿಕೊಳ್ಳಲು ಇಲ್ಲದ ಸರಿಯಾದ ಫಾರ್ಮುಲಾ..     ಫಾರ್ಮುಲಾ ಎಂದಾಕ್ಷಣ ನಮಗೆ ನೆನಪಾಗೋದು ಗಣಿತ. ಆದರೆ ನಾ ಹೇಳಿದ್ದು ಆ ಫಾರ್ಮುಲಾ ಅಲ್ಲ ಒಂದು ನಿರ್ದಿಷ್ಟವಾದ ಚೌಕಟ್ಟು ಅಥವಾ ನಾವೆ ಎಣೆದುಕೊಳ್ಳುವ  ಒಂದು ಸೂತ್ರ .     ಆ ಸೂತ್ರ ಹೇಗಪ್ಪಾ ಎಂದರೆ ,,,      ನಾವು...

ಜೀವನದ ಸಂದೇಶಗಳು( harish quotes) : ಹರೀಶ್. ಎಂ.ಎಸ್.

Image